ಕವಲುದಾರಿ ಚಿತ್ರದಲ್ಲಿ ಸುನಿಗೆ ತುಂಬಾ ಇಷ್ಟವಾದ ಅಂಶವಿದು
ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ ಕವಲುದಾರಿ ಈ ವಾರ ರಾಜ್ಯಾದ್ಯಂತ ತೆರೆಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದಲ್ಲಿ ಹೊಸತನವಿದ್ದು, ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಂತೆ ಹೊಸದೊಂದು ಮನರಂಜನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಚಿತ್ರವನ್ನೀಗ ನಿರ್ದೇಶನ ಸಿಂಪಲ್ ಸುನಿ ಮೆಚ್ಚಿಕೊಂಡಿದ್ದಾರೆ. ಮೊದಲ ದಿನವೇ ಸಿನಿಮಾ ನೋಡಿರುವ ಸುನಿ, ತಮಗೆ ಈ ಚಿತ್ರದಲ್ಲಿ ಏನು ಇಷ್ಟ ಆಯ್ತು ಎಂಬುದನ್ನ ಹಂಚಿಕೊಂಡಿದ್ದಾರೆ.

"ಕವಲುದಾರಿ" ಕಣ್ಣರಳಿಸಿ ನೋಡುವಂತಹ ಚಿತ್ರ ಹಳೇಕೇಸು ಸ್ಟಡಿ ಮಾಡುವ ರೀತಿಯನ್ನು ಚಿತ್ರೀಕರಿಸಿರುವ ಪರಿ ಅದ್ಭುತ ಡಿಪಾರ್ಟ್ಮೆಂಟ್ ಶೂ ಕಚ್ಚಿರೋದು, ಪೋಲಿಸರ ಅಸಹಾಯಕತೆ, ಚಾಣಾಕ್ಷತನ, ಸಮವಸ್ತ್ರ ಪ್ರತಿ ಡಿಟೇಲಿಂಗ್ ಅತ್ಯುತ್ತಮ ತಾಂತ್ರಿಕವಾಗಿ #ಕ್ಯಾಮರಾ #ಸಂಕಲನ #ಸಂಗೀತ, ಹೇಮಂತ್ ಬರಹ ಮತ್ತು ನಿರ್ದೇಶನ ಬೇರೆ ಲೆವೆಲ್ ಅಲ್ಲಿದೆ' ಎಂದು ಸುನಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಅನಂತ್ ನಾಗ್ ಮತ್ತು ರಿಷಿ ಅಭಿನಯವನ್ನ ಕೊಂಡಾಡಿದ್ದಾರೆ. ''ಮುತ್ತಣ್ಣ ಅನಂತನಾಗ್ ಸಾರ್ ಅಮೋಘ ಮತ್ತು ರಿಷಿ ಅವರ ಸಮಕ್ಕೆ ನಟಿಸಿದ್ದಾರೆ ಎಲ್ಲರದು ಹದವರಿತ ಅಭಿನಯ ಈ ಚಿತ್ರವನ್ನು ಪ್ರೋತ್ಸಾಹಿಸಿದ ಪಿ.ಆರ್.ಕೆ ಪ್ರೊಡಕ್ಷನ್, ಪುನೀತ್ ರಾಜ್ ಕುಮಾರ್ ರವರಿಗು ವಂದನೆಗಳು ಮಾರ್ನಿಂಗ್ ಶೋ ಹೌಸ್ ಪುಲ್ ಆಗದೇ ಅದೇ ದಿನ ನೈಟ್ ಶೋ ಹೌಸ್ ಪುಲ್ ಆದರೆ ಆ ಚಿತ್ರ ಖಂಡಿತ ಹಿಟ್ ಆಗುತ್ತೆ.. ಶುಭಾಶಯಗಳು'' ಎಂದಿದ್ದಾರೆ.
ಪುನೀತ್ ರಾಜ್ ಕುಮಾರ್ ಒಡೆತನದ ಪಿ.ಆರ್.ಕೆ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಇದು. ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ.


Click it and Unblock the Notifications











