ಶಿವಣ್ಣನ 'ಮನಮೋಹಕ', ಗಣಿ 'ರಾಯಗಢ' ಚಿತ್ರಗಳು ತಡವಾಗಲು ಕಾರಣ ಬಿಚ್ಚಿಟ್ಟ ಸುನಿ

ಕೆಲ ಸಿನಿಮಾಗಳೇ ಹಾಗೆ. ಬರೀ ಟೈಟಲ್, ಕಾಂಬಿನೇಷನ್‌ ಕಾರಣಕ್ಕೆ ಭಾರೀ ಕುತೂಹಲ ಮೂಡಿಸುತ್ತವೆ. ಹೀಗೆ ನಿರೀಕ್ಷೆ ಹುಟ್ಟಾಕ್ಕಿದ ಸಿನಿಮಾಗಳು ಸೆಟ್ಟೇರುವುದು ತಡವಾದಾಗ ಸಿನಿರಸಿಕರಿಗೆ ಬೇಸರವಾಗುತ್ತದೆ. ನಿರ್ದೇಶಕ ಸಿಂಪಲ್ ಸುನಿ ಬಹಳ ಹಿಂದೆ ಘೋಷಿಸಿದ್ದ 2 ಸಿನಿಮಾಗಳು ಇನ್ನು ಸೆಟ್ಟೇರಲೇಯಿಲ್ಲ. ಅಭಿಮಾನಿಗಳು ಪದೇ ಪದೇ ಈ ಸಿನಿಮಾಗಳ ಬಗ್ಗೆ ಕೇಳುತ್ತಲೇ ಇರುತ್ತಾರೆ.

10 ವರ್ಷಗಳ ಹಿಂದೆ ಶಿವಣ್ಣ ಹೀರೊ ಆಗಿ 'ಮನಮೋಹಕ' ಚಿತ್ರವನ್ನು ಸುನಿ ಘೋಷಿಸಿದ್ದರು. ಸ್ಪೆಷಲ್ ಫೋಟೊಶೂಟ್ ಕೂಡ ಮಾಡಿದ್ದರು. ಹ್ಯಾಟ್ರಿಕ್ ಹೀರೊ ಲವರ್ ಬಾಯ್ ಆಗಿ ಫೋಟೊಶೂಟ್‌ನಲ್ಲಿ ಮಿಂಚಿದ್ದರು. ಸೋಶಿಯಲ್ ಮೀಡಿಯಾ ಇಷ್ಟು ಜನಪ್ರಿಯವಾಗದ ಕಾಲದಲ್ಲೇ 'ಮನಮೋಹಕ' ಫೋಟೊಶೂಟ್ ವೈರಲ್ ಆಗಿತ್ತು. ಆದರೆ ಆ ಸಿನಿಮಾ ಮಾತ್ರ ಸೆಟ್ಟೇರಲೇಯಿಲ್ಲ. ಅಭಿಮಾನಿಗಳಂತೂ ಆ ಸಿನಿಮಾ ಬಗ್ಗೆ ಸುನಿ ಬಳಿ ಕೇಳಿ ಕೇಳಿ ಸುಮ್ಮನಾಗಿದ್ದಾರೆ.

Director Suni Explains Why Manamohaka and The Story Of Raygada Is Getting Delay

'ಚಮಕ್' ಸಿನಿಮಾ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಸುನಿ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದರು. ಚಿತ್ರಕ್ಕೆ 'ದಿ ಸ್ಟೋರಿ ಆಫ್ ರಾಯಗಢ' ಎನ್ನುವ ಟೈಟಲ್ ಫಿಕ್ಸ್ ಆಗಿತ್ತು. ಗಣಿ ಖಡಕ್ ಲುಕ್‌ನಲ್ಲಿ ಫೋಟೊಶೂಟ್ ಕೂಡ ಮಾಡಿದ್ದರು. ಆದರೆ ಯಾಕೋ ಈ ಎರಡು ಸಿನಿಮಾಗಳು ಬರೀ ಅನೌನ್ಸ್‌ಮೆಂಟ್‌ನಲ್ಲೇ ಉಳಿದುಬಿಟ್ಟವು. ಇತ್ತೀಚೆಗೆ ಈ ಸಿನಿಮಾಗಳ ಬಗ್ಗೆ ಸುನಿ ಮಾತನಾಡುತ್ತಿದ್ದಾರೆ. 2 ಸಿನಿಮಾಗಳು ತಡವಾಗಲು ಕಾರಣ ಏನು? ಎನ್ನುವುದನ್ನು ಇದೀಗ ಹೇಳಿದ್ದಾರೆ.

ಸದ್ಯ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಸುನಿ "ಮನಮೋಹಕ ಅಥವಾ ರಾಯಗಢ ಎರಡೂ ಸಿನಿಮಾಗಳ ಪವರ್ ಜಾಸ್ತಿಯಿದೆ. ನನ್ನ ಕೈಯಲ್ಲಿ ಇನ್ನು ಆ ಸಿನಿಮಾಗಳು ಮಾಡೋಕೆ ಯಾಕೆ ಸಾಧ್ಯವಾಗ್ತಿಲ್ಲ ಅಂದ್ರೆ, ಅಷ್ಟು ದೊಡ್ಡ ಸ್ಕೇಲ್ ಇರುವ ಸಿನಿಮಾಗಳವು. ಹಾಗಾಗಿ ನಾನು ಯಾವುದಕ್ಕೂ ರಾಜಿ ಆಗುತ್ತಿಲ್ಲ. ಆದರೆ ಇದನ್ನು 20 ಕೋಟಿಗೆ ಮುಗಿಸೋಕೆ ಸಾಧ್ಯವಿಲ್ಲ. ಆ ರೀತಿ ಮಾಡಲು ಸಾಕಷ್ಟು ಕಥೆಗಳಿವೆ. 2 ರಿಂದ 8 ಕೋಟಿ ಬಜೆಟ್‌ನಲ್ಲಿ ಮಾಡುವಂತಹವು. ಈ 2 ಸಬ್ಜೆಕ್ಟ್ ಮಾತ್ರ ನಾನು ಏನು ಮಾಡಬೇಕು ಅಂದುಕೊಂಡಿದ್ದೇನೋ, ಆ ರೀತಿ ಮಾಡಬೇಕು, ಇಲ್ಲ ಅಂದ್ರೆ, ಬೇಡ. ಆಗಲ್ಲ ಎನಿಸಿದರೆ ಬಿಟ್ಟುಬಿಡೋಣ. ಬೇರೆ ಯಾರಾದರೂ ಮಾಡಲಿ" ಎಂದಿದ್ದಾರೆ.

Director Suni Explains Why Manamohaka and The Story Of Raygada Is Getting Delay

ಇದೇ ಸಂದರ್ಶನದಲ್ಲಿ ಸುನಿ, "ಮನಮೋಹಕ' ಲವ್ ಸ್ಟೋರಿ. ಆದರೆ ಅದು ಪ್ರಯೋಗಾತ್ಮಕ ಸಿನಿಮಾ. ಪ್ರಯೋಗಾತ್ಮಕ ಹಾಗೂ ದೊಡ್ಡ ಬಜೆಟ್ ಎಂದಾಗ ಭಯ ಆಗುತ್ತದೆ. ಶಿವಣ್ಣನಿಗೆ ದೊಡ್ಡ ಡಬ್ಬಿಂಗ್ ಮಾರ್ಕೆಟ್ ಇದೆ. ಅದಕ್ಕೆ ಫೈಟ್ಸ್ ಎಲ್ಲಾ ಇರಬೇಕು. ಆದರೆ 'ಮನಮೋಹಕ' ಚಿತ್ರದಲ್ಲಿ ಫೈಟ್ಸ್ ಇಲ್ಲ. ಅದಕ್ಕೆ ನಿರ್ಮಾಪಕರು ಹಿಂದು ಮುಂದು ನೋಡುತ್ತಾರೆ. ಇಂತಹ ಕಾರಣಗಳಿಂದ ಈ ಸಿನಿಮಾಗಳು ಮಾಡಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ.

ಸುನಿ ನಿರ್ದೇಶನದ 'ಒಂದು ಸರಳಪ್ರೇಮಕಥೆ' ಸಿನಿಮಾ ಇತ್ತೀಚೆಗೆ ತೆರೆಕಂಡು ಗೆದ್ದಿದೆ. ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದಾರೆ. ಸದ್ಯ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇನ್ನು ಶರಣ್ ಹೀರೊ ಆಗಿ 'ಅವತಾರ್ ಪುರುಷ'-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 22ಕ್ಕೆ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿದ್ದರು. ಐಪಿಎಲ್ ಕಾರಣಕ್ಕೆ ಏಪ್ರಿನ್ 5ಕ್ಕೆ ರಿಲೀಸ್ ಡೇಟ್ ಮುಂದೂಡಲಾಯಿತು. ಸರಣಿಯ ಮೊದಲ ಕಳೆದ ವರ್ಷ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

More from Filmibeat

English summary
Director Suni on Shivarajkumar's Manamohaka and Ganesh's The Story Of Raygada;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X