»   » ಇದೇ ಶುಕ್ರವಾರ ಪ್ರೀತಿಸಿದ ಹುಡುಗಿ ಜೊತೆ 'ಸಿಂಪಲ್' ಸುನಿ ವಿವಾಹ

ಇದೇ ಶುಕ್ರವಾರ ಪ್ರೀತಿಸಿದ ಹುಡುಗಿ ಜೊತೆ 'ಸಿಂಪಲ್' ಸುನಿ ವಿವಾಹ

Posted By:
Subscribe to Filmibeat Kannada
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ ನಿರ್ದೇಶಕ 'ಸಿಂಪಲ್' ಸುನಿ ಹೊಸ ಬಾಳಿಗೆ ಅಡಿ ಇಡುತ್ತಿದ್ದಾರೆ.

ತಾವು ಪ್ರೀತಿಸಿದ ಹುಡುಗಿ ಸೌಂದರ್ಯ ರವರೊಂದಿಗೆ ಇದೇ ಶುಕ್ರವಾರ (ಫೆಬ್ರವರಿ 17) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಿರ್ದೇಶಕ ಸುನಿ.

ಮದುವೆ ಯಾವಾಗ.?

ಇದೇ ಶುಕ್ರವಾರ (ಫೆಬ್ರವರಿ 17) ಸುನಿ-ಸೌಂದರ್ಯ ವಿವಾಹ ಮಹೋತ್ಸವ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.[ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿಂಪಲ್ ಸುನಿ]

ವಿವಾಹ ಆರತಕ್ಷತೆ

ಬೆಂಗಳೂರಿನ ಅರಮನೆ ಮೈದಾನದ 'ಕಿಂಗ್ಸ್ ಕೋರ್ಟ್'ನಲ್ಲಿ ವಿವಾಹ ಆರತಕ್ಷತೆ ಫೆಬ್ರವರಿ 19 (ಭಾನುವಾರ) ರಂದು ಸಂಜೆ 6.30 ರಿಂದ ನಡೆಯಲಿದೆ.

ಅಪ್ಪಟ ಲವ್ ಮ್ಯಾರೇಜ್

ಅಂದ್ಹಾಗೆ, ನಿರ್ದೇಶಕ ಸುನಿ ಹಾಗೂ ಸೌಂದರ್ಯ ರವರದ್ದು ಅಪ್ಪಟ ಲವ್ ಮ್ಯಾರೇಜ್. ಟ್ವಿಟ್ಟರ್ ಮೂಲಕ ಪರಿಚಯವಾಗಿ ಪ್ರೇಮಿಗಳಾದ ಸುನಿ ಮತ್ತು ಸೌಂದರ್ಯ ಗೌಡ ಪ್ರೇಮಿಗಳ ದಿನದ ಸಂದರ್ಭದಲ್ಲಿಯೇ ಮದುವೆ ಆಗುತ್ತಿದ್ದಾರೆ.

ನಾಲ್ಕು ವರ್ಷಗಳ ಪ್ರೀತಿ

ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಈಗ ಮನೆಯವರ ಸಮ್ಮತಿ ಪಡೆದು ಹಸೆಮಣೆ ಏರುತ್ತಿದ್ದಾರೆ.

ಕಾನೂನು ಓದಿರುವ ಸೌಂದರ್ಯ ಗೌಡ

ಎಲ್.ಎಲ್.ಬಿ ಓದಿ ಮುಗಿಸಿರುವ ಸೌಂದರ್ಯ ಗೌಡ ಬರಹಗಾರ್ತಿ ಕೂಡ ಹೌದು. ಮದುವೆ ನಂತರ ಸುನಿಗೆ ಸಿನಿಮಾಗಳಲ್ಲಿ ಕೈಜೋಡಿಸುತ್ತಾರಂತೆ ಸೌಂದರ್ಯ ಗೌಡ.

English summary
Director 'Simple' Suni is getting married on February 17th in Chikkamagaluru. Couple's Reception will be held on February 19th in King's Court, Palace Ground, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada