For Quick Alerts
ALLOW NOTIFICATIONS  
For Daily Alerts

ಮುಂಬೈ ಓನರ್ ನೀತಾ ಅಂಬಾನಿ ಬಗ್ಗೆ ಆ ಒಂದು ಸೀಕ್ರೆಟ್ ತಿಳಿಯಬೇಕಂತೆ ಸುನಿ

|

ಎರಡು ತಿಂಗಳನಿಂದ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಹಬ್ಬ ಅದ್ಧೂರಿಯಾಗಿ ಮುಗಿದಿದೆ. ಹೈದ್ರಾಬಾದ್ ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗಳ ಅದ್ಭುತ ಗೆಲುವು ಸಾಧಿಸಿದೆ.

ನಾಲ್ಕನೇ ಬಾರಿ ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೋಪಿ ಎತ್ತಿಡಿದ ದಾಖಲೆ ಬರೆದಿದೆ. ಇದೀಗ, ಐಪಿಎಲ್ ಗೆದ್ದ ರೋಹಿತ್ ಶರ್ಮಾ ಬಳಗಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಶುಭಾಶಯ ತಿಳಿಸಿದ್ದಾರೆ.

RCB ಪದಕ್ಕೆ ಹೊಸ ಅರ್ಥ ನೀಡಿದ ನಿರ್ದೇಶಕ ಸುನಿ

ಐಪಿಎಲ್ ಟೂರ್ನಿಯನ್ನ ಬಹಳ ಸೂಕ್ಷ್ಮವಾಗಿ ಗಮನಿಸಿದ್ದ ಸುನಿಗೆ ಮುಂಬೈ ಇಂಡಿಯನ್ಸ್ ಫೈನಲ್ ಗೆದ್ದ ಮೇಲೆ ಒಂದು ವಿಷ್ಯ ತಿಳಿಯಲೇಬೇಕು ಎಂಬ ಕುತೂಹಲಕ್ಕೆ ಬಿದ್ದಿದ್ದಾರೆ. ಬಹುಶಃ ಇದರಿಂದಲೇ ಮುಂಬೈ ಫೈನಲ್ ಗೆಲ್ಲುತ್ತಿದ್ದಾರೆ ಎಂಬ ಊಹೆಯೂ ಸುನಿ ಅವರಿಗೆ ಬದ್ದಂತಿದೆ. ಅಷ್ಟಕ್ಕೂ ಸುನಿ ಅವರ ಕುತೂಹಲಕ್ಕೆ ಕಾರಣವಾಗಿರುವ ಆ ವಿಷ್ಯ ಯಾವುದು? ಮುಂದೆ ಓದಿ.....

ನೀತಾ ಅಂಬಾನಿ ಪ್ರಾರ್ಥಿನೆ ಮೇಲೆ ಚರ್ಚೆ

ಸಾಮಾನ್ಯವಾಗಿ ಕ್ರಿಕೆಟ್ ಅಭಿಮಾನಿಗಳ ತಮ್ಮ ನೆಚ್ಚಿನ ತಂಡ ಗೆಲ್ಲಲಿ ಎಂದು ದೇವರಿಗೆ ಪ್ರಾರ್ಥನೆ ಮಾಡುವುದನ್ನ ನೋಡಿರುತ್ತೇವೆ. ಪಂದ್ಯ ಕೊನೆಯ ಘಟ್ಟಕ್ಕೆ ಬಂದಾಗ ಅಂತೂ ಸ್ಟೇಡಿಯಂನಲ್ಲಿ ಕೂತು ಸ್ಥಳದಲ್ಲೇ ಪ್ರಾರ್ಥನೆ ಮಾಡ್ತಾರೆ. ಇದೇ ರೀತಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ಕೂಡ ಪ್ರಾರ್ಥನೆ ಮಾಡ್ತಾರೆ. ಈ ಪ್ರಾರ್ಥನೆ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ಮುಂಬೈ ವಿರುದ್ಧ ಸೋತ RCB ತಂಡದ ಹಣೆಬರಹ ಹೇಳಿದ ಸಿಂಪಲ್ ಸುನಿ

ಯಾವ ದೇವರಿಗೆ ನೀತಾ ಪ್ರಾರ್ಥಿಸುತ್ತಾರೆ

ಕೇವಲ ನೀತಾ ಅಂಬಾನಿ ಮಾತ್ರವಲ್ಲ, ಐಪಿಎಲ್ ನ ಇತರ ತಂಡಗಳ ಬೆಂಬಲಿಗರು, ಮಾಲೀಕರು ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಆದ್ರೆ, ನೀತಾ ಅಂಬಾನಿ ಪ್ರಾರ್ಥನೆ ತುಂಬಾ ಪವರ್ ಫುಲ್ ಅನ್ಸುತ್ತೆ. ಅದಕ್ಕೆ ನಾಲ್ಕ ಭಾರಿ ಮುಂಬೈ ಐಪಿಎಲ್ ಗೆದ್ದಿದೆ. ಹಾಗಾಗಿ, ನೀತಾ ಅಂಬಾನಿ ಯಾವ ದೇವರಿಗೆ ಪ್ರಾರ್ಥನೆ ಮಾಡ್ತಾರೆ ಎಂಬುದು ತಿಳಿಯುವ ಕುತೂಹಲ ಈಗ ಸುನಿ ಮತ್ತು ಇತರರಿಗೆ ಬಂದಿದೆ.

ಆರ್.ಸಿ.ಬಿ ಮ್ಯಾಚ್ ಸೋತಿದ್ದಕ್ಕೆ ಬೇಡಿಕೆ ಬದಲಾಯಿಸಿದ ಸಿಂಪಲ್ ಸುನಿ

ಬಗೆ ಬಗೆಯ ದೇವರು

ಸುನಿ ಅವರ ಈ ಟ್ವೀಟ್ ಭಾರಿ ಚರ್ಚೆಯಾಗುತ್ತಿದ್ದು, ಬಗೆ ಬಗೆಯ ದೇವರ ಹೆಸರುಗಳನ್ನ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಬಂಡಿ ಕಾಳಮ್ಮ, ಗಣಪತಿ, ಅಟ್ಟಿ ಲಕ್ಕಮ್ಮ, ಇನ್ನು ಕೆಲವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.

ಭಾರತದ ಈ ಸ್ಟಾರ್ ಕ್ರಿಕೆಟಿಗನ ಮೇಲೆ ಕಾಜಲ್ ಗೆ ಕ್ರಶ್ ಆಗಿತ್ತಂತೆ.!

ಜೈ ಮಾಲಿಂಗ

ಇನ್ನು ಕೊನೆಯ ಓವರ್ ಬೌಲಿಂಗ್ ಮಾಡಿ ಮುಂಬೈ ಇಂಡಿಯನ್ಸ್ ಗೆಲುವಿಗೆ ಕಾರಣವಾದ ಮಾಲಿಂಗ ಅವರಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೈ ಎಂದಿದ್ದಾರೆ. ಮಾಲಿಂಗ ಅವರ ಫೋಟೋ ಶೇರ್ ಮಾಡಿ ಜೈ ಎಂದಿದ್ದಾರೆ.

ಮುಂಬೈ ಗೆಲುವಿನ ಹಿಂದೆ ನೀತಾ

ಮುಂಬೈ ಇಂಡಿಯನ್ಸ್ ಸೋಲಿನ ಸ್ಥಿತಿ ತಲುಪಿದಾಗ ಪ್ರತಿ ಬಾರಿಯೂ ನೀತಾ ಅಂಬಾನಿಯವರ ಕಡೆ ಕ್ಯಾಮೆರಾ ಪೋಕಸ್ ಆಗುತ್ತೆ. ಆ ವೇಳೆ ಅವರು ಪ್ರಾರ್ಥನೆ ಮಾಡ್ತಿರ್ತಾರೆ. ಬಹುಶಃ ಇವರ ಪ್ರಾರ್ಥನೆಯಿಂದಲೇ ಮುಂಬೈಗೆ ಗೆಲುವು ಸಿಕ್ತಿದೆ ಎಂದು ಕಾಲೆಳೆಯುತ್ತಿದ್ದಾರೆ. ಹೀಗೆ ಪ್ರಾರ್ಥನೆ ಮಾಡೋರನ್ನ ಆರ್.ಸಿ.ಬಿ ತಂಡಕ್ಕೆ ಕರೆದುಕೊಂಡು ಬರಬೇಕು ಎಂದು ಕೂಡ ಟ್ರೋಲ್ ಆಗ್ತಿದೆ.

English summary
Mumbai indians won the ipl session 12 against chennai in final. Kannada Director suni to know which god does nitha ambhani prays.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more