»   » ಸುದೀಪ್ ರ ಅಚ್ಚುಮೆಚ್ಚಿನ ನಿರ್ದೇಶಕರಿಗೆ ಇಂದು 62ನೇ ಜನುಮದಿನ

ಸುದೀಪ್ ರ ಅಚ್ಚುಮೆಚ್ಚಿನ ನಿರ್ದೇಶಕರಿಗೆ ಇಂದು 62ನೇ ಜನುಮದಿನ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗ ಕಂಡಂತ 'ಸೃಜನಶೀಲ' ನಿರ್ದೇಶಕರಲ್ಲಿ ಒಬ್ಬರಾದ 'ಸುನೀಲ್ ಕುಮಾರ್ ದೇಸಾಯಿ'ಯವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ 'ಸಸ್ಪೆನ್ಸ್ ಥ್ರಿಲ್ಲರ್' ಸಿನಿಮಾಗಳ ರೂವಾರಿಯಾದ ಸುನೀಲ್ ಕುಮಾರ್ ದೇಸಾಯಿ ಸಿನಿಮಾರಂಗಕ್ಕೆ ಕಾಲಿಟ್ಟು 27 ವರ್ಷಗಳಾಗಿವೆ.

ಅಂದಿನಿಂದ ಇಂದಿನವರೆಗೂ ತಮ್ಮದೇ ಶೈಲಿಯಲ್ಲಿ ವಿಭಿನ್ನ ರೀತಿಯ ಸಿನಿಮಾಗಳನ್ನ ನಿರ್ದೇಶಿಸುತ್ತಾ ಇಂದಿನ ಯುವಕರನ್ನೂ ತಮ್ಮ ಸಿನಿಮಾಗಳತ್ತ ಸೆಳೆಯುವಂತಹ ಶಕ್ತಿಯನ್ನ ಹೊಂದಿರುವ ನಿರ್ದೇಶಕ 'ಸುನೀಲ್ ಕುಮಾರ್ ದೇಸಾಯಿ'

'ಸೃಜನಾತ್ಮಕ' ನಿರ್ದೇಶಕನಿಗೆ ಹುಟ್ಟುಹಬ್ಬ

ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರು ಇಂದು 62ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಉತ್ತರ ಕರ್ನಾಟಕ ಮೂಲದವರಾದ ದೇಸಾಯಿ, ಬಿಜಾಪುರದಲ್ಲಿ ಹುಟ್ಟಿ, ಪುಣೆಯಲ್ಲಿ ವಿದ್ಯಾಭ್ಯಾಸವನ್ನ ಮುಗಿಸಿದ್ರು

ಸ್ಟಾರ್ ಡೈರೆಕ್ಟರ್ ಜೊತೆ ಕೆಲಸ

ಸುನೀಲ್ ಕುಮಾರ್ ದೇಸಾಯಿ ನಿರ್ದೇಶಕ 'ಕಾಶೀನಾಥ್' ಹಾಗೂ 'ಸುರೇಶ್ ಹೆಬ್ಳೀಕರ್' ಜೊತೆಯಲ್ಲಿ ಕೆಲಸ ಮಾಡಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟವರು. ಇಬ್ಬರು ನಿರ್ದೇಶಕರು ಬೇರೆ ಬೇರೆ ಜಾನರ್ ಸಿನಿಮಾಗಳನ್ನ ನಿರ್ದೇಶನ ಮಾಡುವ ಕಲೆ ಹೊಂದಿರುವವರು. ಆದ್ದರಿಂದ ದೇಸಾಯಿಯವರ ಸಿನಿಮಾದಲ್ಲಿ 'ಸಸ್ಪೆನ್ಸ್ ಥ್ರಿಲ್ಲರ್' ಜೊತೆಗೆ 'ಕಾಮಿಡಿ' ಕೂಡ ಇರುತ್ತೆ.

ಚಿತ್ರಕತೆ ಬರೆಯುವಲ್ಲಿ ಪ್ರಖ್ಯಾತಿ

ಕನ್ನಡ ಸಿನಿಮಾರಂಗಕ್ಕೆ 'ಸಸ್ಪೆನ್ಸ್-ಥ್ರಿಲ್ಲರ್' ಚಿತ್ರಗಳನ್ನ ಪರಿಚಯಿಸಿದ ಕೀರ್ತಿ ಸುನೀಲ್ ಕುಮಾರ್ ರಿಗೆ ಸಲ್ಲುತ್ತದೆ. ಸ್ಕ್ರೀನ್ ಪ್ಲೇ ವಿಚಾರದಲ್ಲಿ ದೇಸಾಯಿಯವರ ಸಿನಿಮಾಗಳು ಇಂದಿಗೂ ಕೂಡ ಮುಂಚೂಣಿಯಲ್ಲಿವೆ.

ನಿರ್ದೇಶಿಸಿದ್ದು ಕಡಿಮೆ ಚಿತ್ರ

ಸುಮಾರು 27 ವರ್ಷಗಳಿಂದ ಸಿನಿಮಾರಂಗದಲ್ಲಿದ್ದುಕೊಂಡು ದೇಸಾಯಿಯವರು ಹದಿನಾಲ್ಕು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ನಿರ್ದೇಶನ ಮಾಡಿದ್ದ ಹದಿನಾಲ್ಕು ಚಿತ್ರಗಳಲ್ಲಿ ಬಹುತೇಕ ಎಲ್ಲವೂ ಸಕ್ಸಸ್ ಕಂಡು ಇಂದಿಗೂ ಚಿತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿದೆ.

ದೇಸಾಯಿಯವರ ಸಿನಿಮಾಗಳು ಸಖತ್ ಫೇಮಸ್

ಸುನೀಲ್ ಕುಮಾರ್ ದೇಸಾಯಿಯವರು ನಿರ್ದೇಶನ ಮಾಡಿದ ಬಹುತೇಕ ಸಿನಿಮಾಗಳು ಇಂದಿನ ಯುವಕರಿಗೂ ಇಷ್ಟವಾಗುವಂಥದ್ದು. ಸಿನಿಮಾ ಪ್ರಾರಂಭದಿಂದ ಅಂತ್ಯದ ವರೆಗೂ ಕುತೂಹಲವನ್ನ ಕಾಯ್ದುಕೊಳ್ಳುವಂತಹ ಸಿನಿಮಾಗಳು 'ತರ್ಕ', 'ಬೆಳದಿಂಗಳ ಬಾಲೆ' , 'ಸ್ಪರ್ಶ', 'ನಮ್ಮೂರ ಮಂದಾರ ಹೂವೆ'.... ಇನ್ನೂ ಅನೇಕ ಚಿತ್ರಗಳು ಇಂದಿಗೂ ಹಾಟ್ ಫೇವರೆಟ್

'ಸುದೀಪ್' ಗೆ ಅಚ್ಚುಮೆಚ್ಚು

ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತೀಯ ಸಿನಿಮಾರಂಗದಲ್ಲೇ ಪ್ರಖ್ಯಾತಿ ಪಡೆದಿರುವ ನಟ-ನಿರ್ದೇಶಕ ಕಿಚ್ಚನನ್ನ ಸಿನಿಮಾರಂಗಕ್ಕೆ ನಾಯಕನಾಗಿ ಪರಿಚಯಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತೆ. 'ಸ್ಪರ್ಶ' ಸಿನಿಮಾ ಮೂಲಕ ಸುದೀಪ್ ರನ್ನ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದ್ರು ಸುನೀಲ್ ಕುಮಾರ್ ದೇಸಾಯ್. ಇದಷ್ಟೇ ಅಲ್ಲದೇ ದೇಸಾಯಿಯವರ ಬಗ್ಗೆ ಬರೆಯುತ್ತಾ ಹೋದರೆ ಸಾಕಷ್ಟು ವಿಚಾರಗಳಿವೆ. ಹುಟ್ಟುಹಬ್ಬದ ಸಂದರ್ಭದಲ್ಲಿ ದೇಸಾಯಿಯವರ ಬಗ್ಗೆ ಒಂದಿಷ್ಟು ಮಾಹಿತಿ ಜೊತೆಗೆ ಫಿಲ್ಮೀಬೀಟ್ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸೋಣ.

English summary
Kannada Director Sunil Kumar Desai celebrates his 62nd Birthday today (November 22nd)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada