ಮತ್ತೊಂದು 'ಕಂಬಳ': ಅಖಾಡಕ್ಕೆ ಧುಮುಕಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ಕರಾವಳಿಯ ಜನಪದ ಕ್ರೀಡೆ ಕಂಬಳದ ಬಗ್ಗೆ ಸಿನಿಮಾ ಮಾಡುವ ನಿರ್ದೇಶಕ-ಕಥೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಕನ್ನಡದ ಖ್ಯಾತ ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಇಂತಹದೊಂದು ಆಸೆ ವ್ಯಕ್ತಪಡಿಸಿದ್ದು, ಶೀಘ್ರವೇ ಕಂಬಳ ಕ್ರೀಡೆ ಆಧರಿತವಾಗಿ ಸಿನಿಮಾ ಮಾಡಲಿದ್ದೇನೆ ಎಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Recommended Video

ಒಂದೇ ಕಥೆಯ ಹಿಂದೆ ಬಿದ್ದ 3 ಜನ ಸ್ಟಾರ್ ಡೈರೆಕ್ಟರ್ ಗಳು

ಇತ್ತೀಚಿಗಷ್ಟೆ ಮಂಗಳೂರಿಗೆ ಭೇಟಿ ನೀಡಿದ್ದ ಎಸ್ ವಿ ರಾಜೇಂದ್ರ ಸಿಂಗ್ ಬಾಬು, 'ಕಂಬಳ ಕ್ರೀಡೆ ಆಧರಿಸಿ ಸಿನಿಮಾ ಮಾಡುವುದಕ್ಕಾಗಿ ಎಲ್ಲಾ ತಯಾರಿ ಮಾಡ್ತಿದ್ದೇನೆ. ನಾಲ್ಕೈದು ತಿಂಗಳಿನಿಂದ ಈ ಪ್ರಾಜೆಕ್ಟ್‌ಗೆ ಪೂರ್ವ ತಯಾರಿ ನಡೆದಿದೆ. ತುಳು ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಜೊತೆ ಚರ್ಚಿಸಿ ಸ್ಕ್ರಿಪ್ಟ್ ರೆಡಿ ಮಾಡ್ತಿದ್ದೇವೆ. ಕಂಬಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಿದ್ವಾಂಸರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದೇವೆ. ಇದೊಂದು ಸಾಮಾನ್ಯ ಸಿನಿಮಾ ರೀತಿಯಲ್ಲದೇ ಬಹಳ ವಿಶೇಷವಾಗಿ ತಯಾರಿಸಬೇಕು ಎಂಬ ಅಸೆ ಇದೆ. ಎಆರ್ ಪ್ರೊಡಕ್ಷನ್‌ನ ಅರುಣ್ ರಾಯ್ ಜೊತೆ ಸೇರಿ ನಾನು ಈ ಚಿತ್ರ ಮಾಡುತ್ತಿದ್ದೇನೆ'' ಎಂದಿದ್ದಾರೆ.

ಸದ್ಯಕ್ಕೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಟ ದರ್ಶನ್ ಜೊತೆ 'ರಾಜವೀರ ಮದಕರಿ ನಾಯಕ' ಸಿನಿಮಾ ಮಾಡುತ್ತಿದ್ದಾರೆ. ಕೋವಿಡ್ ಭೀತಿಯಿಂದ ಈ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಸಿನಿಮಾದ ನಡುವೆ ಕಂಬಳ ಆಧರಿತ ಚಿತ್ರ ಆರಂಭಿಸಬಹುದು ಎಂಬ ನಿರೀಕ್ಷೆ ಇದೆ. ಮುಂದೆ ಓದಿ...

ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ

ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ

ನಟ-ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚಿಗಷ್ಟೆ ಹೊಸ ಸಿನಿಮಾ ಘೋಷಣೆ ಮಾಡಿದ್ದರು. ಹೊಂಬಾಳೆ ಫಿಲಂಸ್ ಸಂಸ್ಥೆ ಜೊತೆ ಕೈ ಜೋಡಿಸಿರುವ ರಿಷಬ್, ಕಾಂತಾರ ಎಂಬ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದರು. ಕಾಂತಾರ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಪೋಸ್ಟರ್‌ನಲ್ಲಿ ಕರಾವಳಿ ಕ್ರೀಡೆ ಕಂಬಳವನ್ನು ಪ್ರಮುಖ ಕಥಾವಸ್ತುವನ್ನಾಗಿಸಿ ಸಿನಿಮಾ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಶಿವಣ್ಣನ 'ವೈರಮುಡಿ'

ಶಿವಣ್ಣನ 'ವೈರಮುಡಿ'

'ರಥಾವರ್' ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೈರಮುಡಿ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಎರಡು ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದರು. ಈ ಚಿತ್ರವೂ ಕಂಬಳದ ಸುತ್ತ ತಯಾರಾಗುತ್ತಿದೆ ಎಂದು ಬಂಡಿಯಪ್ಪಾ ಮಾಹಿತಿ ನೀಡಿದ್ದರು. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಶಿವಣ್ಣ ಕಂಬಳ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

ರಿಷಬ್ ವಿರುದ್ಧ ಬಂಡಿಯಪ್ಪಾ ಬೇಸರ

ರಿಷಬ್ ವಿರುದ್ಧ ಬಂಡಿಯಪ್ಪಾ ಬೇಸರ

ಈಗಾಗಲೇ ಕಂಬಳ ಆಧರಿಸಿ ಶಿವರಾಜ್ ಕುಮಾರ್ ಜೊತೆ ನಾನು ಸಿನಿಮಾ ಮಾಡ್ತಿದ್ದೇನೆ, ಈಗ ರಿಷಬ್ ಅದೇ ಕಥೆಯನ್ನು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಮ್ಮ ತಂಡದ ಬಳಿಕ ಒಮ್ಮೆ ಚರ್ಚಿಸಬೇಕಿತ್ತು. ಇದು ಹಿರಿಯ ನಟರಿಗೆ ಮಾಡಿದ ಅಪಮಾನ ಎಂದು ವಿರೋಧ ವ್ಯಕ್ತಪಡಿಸಿದ್ದರು. ಒಂದೇ ಕಥೆಯ ಬಗ್ಗೆ ಇಬ್ಬರು ಸಿನಿಮಾ ಮಾಡುವಂತಹ ಸಂದರ್ಭದಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಸದ್ಯಕ್ಕೆ ವೈರಮುಡಿ ಮಾಡಲ್ಲ

ಸದ್ಯಕ್ಕೆ ವೈರಮುಡಿ ಮಾಡಲ್ಲ

"ಒಂದೇ ವಿಷಯದ ಮೇಲೆ ಸಿನಿಮಾ ಅನೇಕ ಸಿನಿಮಾಗಳು ಬಂದಿವೆ. ಆದರೆ ಕಂಬಳ ವಿಭಿನ್ನವಾದ ವಿಷಯ. ಒಂದು ವಿಷಯದ ಬಗ್ಗೆ ಸಿನಿಮಾ ಬಂದಮೇಲೆ ನಾನು ಮತ್ತದೆ ವಿಷಯದ ಮೇಲೆ ಸಿನಿಮಾ ಮಾಡಲ್ಲ. ಸದ್ಯಕ್ಕೆ ವೈರಮುಡಿ ಮಾಡುವುದಿಲ್ಲ. ಕಾಂತಾರ ಬಿಡುಗಡೆಯಾದ ಮೇಲೆ ಹೇಗಿದೆ ಎಂದು ನೋಡುತ್ತೀನಿ" ಎಂದು ಚಂದ್ರಶೇಖರ್ ಬಂಡಿಯಪ್ಪಾ ಹೇಳಿದ್ದಾರೆ.

More from Filmibeat

English summary
Kannada senior Director SV Rajendra singh babu will direct movie on karavali based sports 'Kambala'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X