ಚಿತ್ರೀಕರಣದಲ್ಲಿದ್ದಾಗಲೇ ಜಯಂ ನಿರ್ದೇಶಕ ತೇಜ ಗೆ ಕೊರೊನಾ ಪಾಸಿಟಿವ್

ಇತ್ತೀಚೆಗಷ್ಟೆ ಬಾಹುಬಲಿ ನಿರ್ದೇಶಕ ರಾಜಮೌಳಿ ಗೆ ಮತ್ತು ಅವರ ಕುಟುಂಬಕ್ಕೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇದೀಗ ಮತ್ತೊಬ್ಬ ಖ್ಯಾತ ನಿರ್ದೇಶಕರಿಗೆ ಕೊರೊನಾ ಪಾಸಿಟಿವ್ ಆಗಿದೆ.

Recommended Video

Sushant ತಂದೆ ಪ್ರಕಾರ ಕೊಲೆ , Police report ಪ್ರಕಾರ ಆತ್ಮಹತ್ಯೆ | Filmibeat Kannada

ಜಯಂ, ನುವ್ವು ನೇನು, ಚಿತ್ರಂ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ತೆಲುಗಿನ ಪ್ರತಿಭಾವಂತ ನಿರ್ದೇಶಕ ತೇಜ ಅವರಿಗೆ ಕೊರೊನಾ ಪಾಟಿಸಿವ್ ಆಗಿದೆ.

ಅದೂ ಚಿತ್ರೀಕರಣದಲ್ಲಿರುವಾಗಲೇ ತೇಜ ಗೆ ಕೊರೊನಾ ಪಾಸಿಟಿವ್ ಆಗಿದ್ದು, ತೇಜ ಕುಟುಂಬದ ಜೊತೆಗೆ ಇಡೀಯ ಚಿತ್ರತಂಡವೇ ಈಗ ಕ್ವಾರಂಟೈನ್ ಆಗುವಂತಾಗಿದೆ.

ಮುಂಬೈಗೆ ಹೋಗಿದ್ದ ತೇಜ

ಮುಂಬೈಗೆ ಹೋಗಿದ್ದ ತೇಜ

ತೇಜ ಅವರು ವೆಬ್ ಸೀರೀಸ್ ಒಂದರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣಕ್ಕಾಗಿ ತೇಜಾ ಅವರು ಮುಂಬೈ ಗೆ ಹೋಗಿದ್ದರು. ಅಲ್ಲಿ ಅವರಿಗೆ ಕೆಮ್ಮು ಬಂದಿದೆ. ಅಲ್ಲಿಂದ ಬಂದ ಮೇಲೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ತೇಜ ಗೆ ಪಾಸಿಟಿವ್ ಬಂದಿದೆ.

ನಂದಿನಿ ರಾಯ್ ನಾಯಕಿ

ನಂದಿನಿ ರಾಯ್ ನಾಯಕಿ

ವೆಬ್ ಸೀರೀನ್‌ಗೆ ನಂದಿನಿ ರಾಯ್ ಅವರನ್ನು ನಾಯಕಿಯನ್ನಾಗಿ ಮಾಡಲಾಗಿದ್ದು, ನಾಯಕಿಯಾಧಾರಿತ ವೆಬ್ ಸೀರೀಸ್ ಇದಾಗಲಿದೆ. ಇದೀಗ ತೇಜ ಗೆ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದ್ದು, ಇಡೀಯ ಚಿತ್ರತಂಡವೇ ಕ್ವಾರಂಟೈನ್‌ಗೆ ಒಳಪಟ್ಟಿದೆ.

ತೇಜ ಕುಟುಂಬ ಸದಸ್ಯರಿಗೆ ನೆಗೆಟಿವ್

ತೇಜ ಕುಟುಂಬ ಸದಸ್ಯರಿಗೆ ನೆಗೆಟಿವ್

ತೇಜ ಅವರಿಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೆ ಅವರ ಕುಟುಂಬದವರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ಕುಟುಂಬ ಸದಸ್ಯರಿಗೆ ಕೊರೊನಾ ನೆಗೆಟಿವ್ ಬಂದಿದೆ.

ಮನೆಯಲ್ಲೇ ಐಸೋಲೇಶನ್

ಮನೆಯಲ್ಲೇ ಐಸೋಲೇಶನ್

ಫಿಲಂ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತೇಜ ಸೆಲ್ಫ್ ಐಸೋಲೇಶನ್‌ಗೆ ಒಳಪಟ್ಟಿದ್ದು, ವೈದ್ಯರ ಸತತ ಸಲಹೆ ಮೇರೆಗೆ ಮನೆಯಲ್ಲಿಯೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಾರಂತೆ. ತಾವು ಶೀಘ್ರವಾಗಿ ಕೊರೊನಾ ದಿಂದ ಗುಣವಾಗುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

More from Filmibeat

English summary
Telugu movie director Teja tested coronavirus positive. He went to Mumbai few days back. his family tested negative.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X