'ಕಾಟೇರ' ಸೆನ್ಸಾರ್ ಕಥೆ ಏನಾಯ್ತು? ಟ್ರೈಲರ್ ಲಾಂಚ್ ಎಲ್ಲಿ? ಡಿ.23ರ ಪ್ಯ್ಲಾನ್ ಏನು? ತರುಣ್ ಮಾಹಿತಿ
ರಿಲೀಸ್ ಡೇಟ್ ಹತ್ತಿರವಾಗ್ತಿದ್ದಂತೆ ದರ್ಶನ್ ನಟನೆಯ 'ಕಾಟೇರ' ಆರ್ಭಟ ಹೆಚ್ಚಾಗ್ತಿದೆ. ಈಗಾಗಲೇ ಚಿತ್ರದ 2 ಹಾಡುಗಳು ರಿಲೀಸ್ ಆಗಿ ಅಭಿಮಾನಿಗಳ ಮನಗೆದ್ದಿದೆ. ಸದ್ಯ ಟ್ರೈಲರ್ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿಬರ್ತಿದೆ.
ಡಿಸೆಂಬರ್ 29ಕ್ಕೆ 'ಕಾಟೇರ' ಸಿನಿಮಾ ತೆರೆಗಪ್ಪಳಿಸಲಿದೆ. ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ 70ರ ದಶಕದ ಕಥೆ ಹೇಳುತ್ತಿರುವುದು ಕುತೂಹಲ ಮೂಡಿಸಿದೆ. ಇನ್ನು ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸದ್ಯ 'ಕಾಟೇರ' ಕ್ರೇಜ್ ಜೋರಾಗಿದೆ. 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ಬೆನ್ನಲ್ಲೇ 'ಕಾಟೇರ' ಸಿನಿಮಾ ತೆರೆಗೆ ಬರುತ್ತಿರುವುದು ಬಾಕ್ಸಾಫೀಸ್‌ನಲ್ಲಿ ಕದನ ಕುತೂಹಲ ಮೂಡುವಂತೆ ಮಾಡಿದೆ.

ನಿರೀಕ್ಷಿಸಿದ್ದಕ್ಕಿಂತ ಮೊದ್ಲೆ 'ಕಾಟೇರ' ಸಿನಿಮಾ ಟ್ರೈಲರ್ ಲಾಂಚ್ ಆಗುತ್ತಿದೆ. ಬಹಳ ಅದ್ಧೂರಿಯಾಗಿ ಟ್ರೈಲರ್ ರಿಲೀಸ್ ಈವೆಂಟ್ ಪ್ಲ್ಯಾನ್ ಮಾಡಲಾಗ್ತಿದೆ. ಈಗಾಗಲೇ ಚಿತ್ರತಂಡ ಪ್ರಮೋಷನ್ ಸ್ಪೀಡ್ ಹೆಚ್ಚಿಸಿದೆ. ದರ್ಶನ್ ಬಿಟ್ಟು ಉಳಿದ ಕಲಾವಿದರು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡುತ್ತಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸಿನಿಮಾ ಪ್ರಚಾರದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲು ಸಜ್ಜಾಗಿದೆ.
ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮೂವರು ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಹಾಗಾಗಿ 'ಕಾಟೇರ' ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಗುತ್ತಾ? ಹೇಳಿದಂತೆ ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತಾ ಎನ್ನುವ ಅನುಮಾನ ಕೆಲವರಲ್ಲಿತ್ತು. ಟ್ರೈಲರ್ ಲಾಂಚ್ ಎಲ್ಲಿ? ಎನ್ನುವ ಬಗ್ಗೆ ಕುತೂಹಲವಿತ್ತು. ಈ ಬಗ್ಗೆ ಸ್ವತಃ ತರುಣ್ ಸುಧೀರ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.
"ಹುಬ್ಬಳ್ಳಿಯಲ್ಲಿ ಡಿಸೆಂಬರ್ 16ಕ್ಕೆ 'ಕಾಟೇರ' ಟ್ರೈಲರ್ ಲಾಂಚ್ ನಡೆಯಲಿದೆ. ಈಗಾಗಲೇ ಅದಕ್ಕಾಗಿ ಸಕಲ ಸಿದ್ಧತೆಗಳು ನಡೀತಿದೆ. ಡಿಸೆಂಬರ್ 23ಕ್ಕೆ ರೈತರ ದಿನದಂದು 'ಕಾಟೇ

"ಕಾಟೇರ ಚಿತ್ರಕ್ಕೆ ಇನ್ನೆರಡು ದಿನಗಳಲ್ಲಿ ಸೆನ್ಸಾರ್ ಸರ್ಟಿಫಿಕೇಟ್ ಸಿಗಲಿದೆ. ಈಗಾಗಲೇ ಹೊಸ ಸೆನ್ಸಾರ್ ಅಧಿಕಾರಿ ನೇಮಕವಾಗಿದ್ದು ಸಿನಿಮಾಗಳನ್ನು ನೋಡಿ ಸರ್ಟಿಫಿಕೇಟ್ ನೀಡುವ ಕೆಲಸ ಆರಂಭವಾಗಿದೆ. ನಾವು 'ಕಾಟೇರ'ಸಿನಿಮಾ ಸೆನ್ಸಾರ್ ಸರ್ಟಿಫಿಕೇಟ್‌ಗಾಗಿ ಅಪ್ಲೆ ಮಾಡಿದ್ದೀವಿ. ನಮ್ಮ ಸರದಿ ಬಂದ ಕೂಡಲೇ ಸೆನ್ಸಾರ್ ಮಂಡಳಿ ಸದಸ್ಯರು ಸಿನಿಮಾ ವೀಕ್ಷಿಸಲಿದ್ದಾರೆ. ಶನಿವಾರದ ವೇಳೆಗೆ ಸೆನ್ಸಾರ್ ಮುಗಿಯುವ ಸಾಧ್ಯತೆಯಿದೆ" ಎಂದು ತರುಣ್ ಸುಧೀರ್ ವಿವರಿಸಿದ್ದಾರೆ.
ತಮ್ಮ ಸಿನಿಮಾ ಬಗ್ಗೆ ಬಹಳ ಭರವಸೆಯಿಂದ ಇರುವ ಚಿತ್ರತಂಡ ಎರಡು ದೊಡ್ಡ ಸಿನಿಮಾಗಳ ಎದುರು ಸಿನಿಮಾ ರಿಲೀಸ್ ಮಾಡುವ ಧೈರ್ಯ ಮಾಡಿದೆ. ಅಭಿಮಾನಿಗಳು ಕೂಡ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಪ್ರಚಾರ ಆರಂಭಿಸಿದ್ದಾರೆ. ಚಿತ್ರದ 'ಪಸಂದಾಗವನೇ' ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 2 ದಿನಗಳಲ್ಲಿ ಒಂದು ಕೋಟಿಗೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡಿತ್ತು. 'ಯಾವ ಜನುಮದ ಗೆಳತಿ' ಹಾಡು ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ.
'ಕಾಟೇರ' ಚಿತ್ರದಲ್ಲಿ ದರ್ಶನ್ ಹಳ್ಳಿ ಹೈದನ ಪಾತ್ರದಲ್ಲಿ ನಟಿಸಿದ್ದಾರೆ. ಲುಂಗಿ ಉಟ್ಟು ಖಡಕ್ ಲುಕ್‌ನಲ್ಲಿ ಬರ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಗ್ಲಿಂಪ್ಸ್ ಹಿಟ್ ಆಗಿದೆ. ಜಗಪತಿ ಬಾಬು, ಕುಮಾರ್ ಗೋವಿಂದ್, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಶ್ರುತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ, ತರುಣ್ ಸುಧೀರ್ ಹಾಗೂ ಜಡೇಶ್ ಹಂಪಿ ಕಥೆ, ಚಿತ್ರಕಥೆ 'ಕಾಟೇರ' ಚಿತ್ರಕ್ಕಿದೆ.


Click it and Unblock the Notifications











