"ಅದಕ್ಕಿಂತ್ಲೂ ಜಾಸ್ತಿ ಇರಬೋದು, ಟೆಕ್ನಿಕಲಿ ಕಲೆಕ್ಷನ್ ನಂಬರ್ಸ್ ಹೇಳುವಂತಿಲ್ಲ: ತರುಣ್ ಸುಧೀರ್

ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದೆ. 5ನೇ ದಿನವೂ ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. 4 ದಿನಕ್ಕೆ ಸಿನಿಮಾ 77 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನೀಡಿದ್ದ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು.

ಶುಕ್ರವಾರ ಮಧ್ಯರಾತ್ರಿಯಿಂದಲೇ ಥಿಯೇಟರ್‌ಗಳಲ್ಲಿ 'ಕಾಟೇರ'ನ ಆರ್ಭಟ ಜೋರಾಗಿದೆ. ದರ್ಶನ್ ಅಭಿಮಾನಿಗಳನ್ನು ರಂಜಿಸುವದರ ಜೊತೆಗೆ ಫ್ಯಾಮಿಲಿ ಆಡಿಯನ್ಸ್‌ನ ಕೂಡ ಚಿತ್ರ ಸೆಳೆಯುತ್ತಿದೆ. ಇದೇ ಕಾರಣಕ್ಕೆ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡುತ್ತಿದೆ. ಆದರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿಕೆ ಸಿನಿಮಾ 3 ದಿನಕ್ಕೆ 50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿಲ್ವಾ? ಎನ್ನುವ ಪ್ರಶ್ನೆ ಹುಟ್ಟಾಕ್ಕಿತ್ತು. ಇದೇ ಕಾರಣಕ್ಕೆ ಕೆಲವರು 'ಕಾಟೇರ' ಕಲೆಕ್ಷನ್ ಫೇಕ್ ಎಂದು ಟ್ರೋಲ್ ಮಾಡಲು ಆರಂಭಿಸಿದ್ದರು.

director Tharun sudhir responds about fake Kaatera collections allegations

ನಿರ್ಮಾಪಕರ ಮಾತಿನ ಬಗ್ಗೆ ಇದೀಗ ತರುಣ್ ಸುಧೀರ್ ಪ್ರತಿಕ್ರಿಯಿಸಿದ್ದಾರೆ. 'ಫಸ್ಟ್ ಡೇ ಫಸ್ಟ್ ಶೋ ಕನ್ನಡ' ಯೂಟ್ಯೂಬ್‌ ವಾಹಿನಿಗೆ ಮಾತನಾಡಿರುವ ತರುಣ್, "ಜನ ದಡ್ಡರಲ್ಲ. ಒಂದು ಪ್ರಾಡೆಕ್ಟ್ ನೋಡಿದ್ರೆ ಅದರ ಬೆಲೆ ಏನು ಎಂದು ಗೊತ್ತಾಗುತ್ತದೆ. ಅದೇ ರೀತಿ 'ಕಾಟೇರ' ಚಿತ್ರದ ರೀಚ್, ಜನರ ಪ್ರತಿಕ್ರಿಯೆ ನೋಡಿದ್ರೆ ಗೊತ್ತಾಗುತ್ತದೆ. ಅನುಮಾನ ಇದ್ದವರು ಅವರವರ ಏರಿಯಾ ಥಿಯೇಟರ್‌ಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ"

"ಥಿಯೇಟರ್ ಮಾಲೀಕರೆಲ್ಲಾ ಸಿನಿಮಾ ಗಳಿಕೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಬಾಕ್ಸಾಫೀಸ್ ಕಲೆಕ್ಷನ್ ನಂಬರ್ಸ್ ಯಾರದ್ದು, ಯಾವತ್ತು ನಿಜ ಇರಲ್ಲ. ಹಾಗಂತ ಅದು ಕಮ್ಮಿ ಇರಬೇಕು ಅಂತಲ್ಲ. ಜಾಸ್ತಿ ಕೂಡ ಇರಬಹುದು. ರಾಕ್‌ಲೈನ್ ಸರ್ ಅಷ್ಟು ಇಲ್ಲ ಅಂದ್ರೆ, ಕಮ್ಮಿ ಅಂತ ಯಾಕೆ ಅಂದುಕೊಳ್ಳಬೇಕು? ಜಾಸ್ತಿ ಕೂಡ ಇರಬಹುದು"

director Tharun sudhir responds about fake Kaatera collections allegations

"ಟೆಕ್ನಿಕಲಿ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ನಂಬರ್ಸ್ ಹೇಳುವಂತಿಲ್ಲ. ಅದಕ್ಕೆ ಸಾಕಷ್ಟು ಕನೆಕ್ಷನ್ ಇರುತ್ತೆ. ಹಾಗಾಗಿ ಮಾತನಾಡಬಾರದು. ಎಲ್ಲಾ ಲೆಕ್ಕಾಚಾರ ಆದಮೇಲೆ ಹೇಳುತ್ತಾರೆ. ಈಗ ನಂಬರ್ಸ್ ಹೇಗೆ ಬರುತ್ತಿದೆ ಅಂದ್ರೆ, ಎಷ್ಟು ಟಿಕೆಟ್ ಮಾರಾಟ ಆಗಿದೆ ಅನ್ನೋದು ನಿಜ. ಎಷ್ಟು ಲಕ್ಷ ಟಿಕೆಟ್ ಮಾರಾಟ ಆಗಿದೆ ಎನ್ನುವ ಅಂಕಿಅಂಶ ಸಿಗುತ್ತೆ. 1000 ರೂಪಾಯಿಯಿಂದ 100 ರೂಪಾಯಿವರೆಗೆ ಟಿಕೆಟ್ ದರ ಇದೆ. ಆ ಲೆಕ್ಕ ಹಾಕಿದ್ರೆ ಒಟ್ಟು ಕಲೆಕ್ಷನ್ ನಂಬರ್ ಸಿಗುತ್ತೆ. ನಿರ್ಮಾಪಕರು, ಚಿತ್ರತಂಡ, ಪ್ರೇಕ್ಷಕರು ಖುಷಿಯಾಗಿದ್ದಾರೆ. ಅದಕ್ಕಿಂತ ದೊಡ್ಡದು ಯಾವುದು ಇಲ್ಲ" ಎಂದಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, "ಈ ಕಲೆಕ್ಷನ್ ನಂಬರ್ಸ್ ಎಲ್ಲಾ ಸುಳ್ಳು ಎಂದು ಹೇಳ್ತೀನಿ. ಫ್ರಾಂಕ್ ಆಗಿ ಹೇಳ್ತೀನಿ, ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದೆ. ಈಗ 30 ಕೋಟಿ, 15 ಕೋಟಿ, 20 ಕೋಟಿ ಆಗಿದ್ಯಾ ಅನ್ನೋದು ನನಗೂ ಗೊತ್ತಿಲ್ಲ"

"ನಾನು ಯಾವಾಗಲೂ ನನ್ನ ಬ್ಯಾನರ್‌ನಲ್ಲಿ ಇಷ್ಟು ಬಜೆಟ್ ಆಯ್ತು, ಇಷ್ಟು ಕಲೆಕ್ಷನ್ ಆಯ್ತು ಅಂತ ನಾನು ಯಾವತ್ತೂ ಹೇಳ್ಕೊಂಡಿಲ್ಲ. ಎಲ್ಲಾ ಸಿನಿಮಾಗಳಿಗಿಂತ ಕಲೆಕ್ಷನ್ ಚೆನ್ನಾಗಿದೆ. ಪರಭಾಷಾ ಸಿನಿಮಾಗಳು ಬಿಡುಗಡೆ ಆಗಿದ್ದರೂ ಕೂಡ ಎಲ್ಲದ್ದಕ್ಕಿಂತ ಅದ್ಭುತ ಕಲೆಕ್ಷನ್ ಆಗ್ತಿದೆ" ಎಂದಿದ್ದರು.

More from Filmibeat

English summary
Tharun sudhir reacts To Troll Claiming Kaatera Box-Office Numbers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X