For Quick Alerts
  ALLOW NOTIFICATIONS  
  For Daily Alerts

  ಪುಟ್ಟಣ್ಣ ಕಣಗಾಲ್ ಪುತ್ರನ ಸಾವಿಗೆ ಟಿಎನ್ ಸೀತಾರಾಮ್ ಸಂತಾಪ

  |

  ಕನ್ನಡ ಚಿತ್ರರಂಗಕಂಡ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ಶ್ರೀರಾಮು ಕಣಗಾಲ್ ಕೊರೊನಾಗೆ ಬಲಿಯಾಗಿದ್ದಾರೆ. ಪುಟ್ಟಣ್ಣ ಕಣಗಾಲ್ ಪುತ್ರನ ಸಾವಿಗೆ ಟಿಎನ್ ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.

  ''ಗುರುಗಳಾದ ಶ್ರೀ ಪುಟ್ಟಣ್ಣ ಕಣಗಾಲ್ ರವರ ಕೊನೆಯ ಮಗ ರಾಮು ಕಣಗಾಲ್ ಇಂದು ಕೊರೋನಾದಿಂದಾಗಿ ನಿಧನ ಹೊಂದಿದ್ದಾನೆ. ನಾನು ಮೊದಲ ಬಾರಿ ಮದರಾಸಿನ ಅವರ ಮನೆಯಲ್ಲಿ ನೋಡಿದಾಗ ಪುಟ್ಟ ಹುಡುಗ...ನೆನಪುಗಳು ಅನೇಕ. ಅತ್ಯಂತ ನೋವಿನ ವಿಚಾರ'' ಎಂದು ನಿರ್ದೇಶಕ ಟಿಎನ್ ಸೀತಾರಾಂ ಬೇಸರ ವ್ಯಕ್ತಪಡಿಸಿದ್ದಾರೆ.

  ಕೊರೊನಾದಿಂದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ ಸಾವುಕೊರೊನಾದಿಂದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ ಸಾವು

  ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಶ್ರೀರಾಮು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದರು.

  ಮುಂಬೈ ಏರ್ ಪೋರ್ಟ್ ನಲ್ಲಿ ಊರ್ವಶಿಯ ಡ್ರೆಸ್ ಗೆ ಗಾಳಿ ಕೊಟ್ಟ ಕಾಟ ಅಷ್ಟಿಷ್ಟಲ್ಲ | Filmibeat Kannada

  ಚಿಕಿತ್ಸೆ ಫಲಕಾರಿಯಾಗದೆ ಇಂದು (ಏಪ್ರಿಲ್ 28) ಬೆಳಗ್ಗೆ ಕೊನೆಯುಸಿರೆಳಿದ್ದಾರೆ. ಶ್ರೀರಾಮು ಕಣಗಾಲ್ 'ಕಣಗಾಲ್ ನೃತ್ಯಾಲಯ' ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದರು. ಭರತನಾಟ್ಯ ಪಂಡಿತರಾಗಿದ್ದ ಶ್ರೀರಾಮು ಅವರು ಅನೇಕ ಶಿಷ್ಯಂದಿರನ್ನು ಅಗಲಿದ್ದಾರೆ.

  ಮದರಾಸಿನಲ್ಲಿ ಓದಿ ಬೆಳೆದಿದ್ದ ಶ್ರೀರಾಮು ಕಣಗಾಲ್ ಅವರು ಈ ಹಿಂದೆ ತಂದೆಯ ಬಗ್ಗೆ ಮಾತನಾಡುತ್ತ, ತಂದೆ ಶಿಸ್ತು ಮತ್ತು ಗೌರವಯುತವಾಗಿ ಬದುಕಲು ಹೇಳಿ ಕೊಟ್ಟಿದ್ದರು. ಅವರು ಹಾಕಿ ಕೊಟ್ಟ ಗೆರೆಯಲ್ಲೇ ಇಂದು ನಾವು ಬಾಳುತ್ತಿದ್ದೇವೆ. ನಮ್ಮ ತಂದೆಗೆ ಅಭಿಮಾನಿಗಳಿದ್ದಾರೆ. ಈಗಲೂ ಅಭಿಮಾನಿಗಳು ನನ್ನಲ್ಲಿ ನನ್ನ ತಂದೆಯನ್ನು ಕಾಣುತ್ತಾರೆ ಎಂದು ಹೇಳಿದ್ದರು.

  54 ವರ್ಷ ವಯಸ್ಸಿನ ಶ್ರೀರಾಮು ಕಣಗಾಲ್ ಅವರು ಅವಿವಾಹಿತರಾಗಿದ್ದರು.ಪುಟ್ಟಣ್ಣ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿ ಪ್ರಧಾನ ಸಮಯಕ್ಕೆ, ಶಿಷ್ಟಾಚಾರಕ್ಕಾದರೂ ಪುಟ್ಟಣ್ಣ ಕುಡಿಗಳಾದ ನಮಗೆ ಆಹ್ವಾನ ನೀಡುವುದಿಲ್ಲ. ಚಿತ್ರರಂಗ 75 ವರ್ಷದ ಸಂಭ್ರಮದಲ್ಲಿ ಈ ರಾಜ್ಯ ಕಂಡ ಯಶಸ್ವೀ ನಿರ್ದೇಶಕ ಪುಟ್ಟಣ್ಣ ಅವರ ಕುಟುಂಬದವರಾದ ನಮಗೆ ಆಹ್ವಾನ ಪತ್ರಿಕೆ ಕಳುಹಿಸುವ ಸೌಜನ್ಯತೆ ಈ ಚಿತ್ರರಂಗದವರಿಗಿಲ್ಲ. ಮಾತು ಮಾತಿಗೆ ನಾವು ಪುಟ್ಟಣ್ಣ ಶಿಷ್ಯರೆಂದು ಹೇಳುತ್ತಾರೆಯೆ ಹೊರತು ಅವರಿಗೆ ನಮ್ಮ ತಂದೆಯ ಮೇಲೆ ಗೌರವವಿಲ್ಲ ಎಂದು ಕಳೆದ ಅನೇಕ ವರ್ಷಗಳ ಹಿಂದೆ ರಾಮು ಬೇಸರ ವ್ಯಕ್ತ ಪಡಿಸಿದ್ದರು.

  English summary
  Puttanna Kanagal son Sri Ramu kanagal passes away due to Corona. Director TN Seetharam Condolences To Ramu Kanagal's Death

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X