ಇದು ಕನ್ನಡದ ಯಾವ ಸ್ಟಾರ್ ನಟನ ಬಾಲ್ಯದ ಫೋಟೊ ಗುರ್ತಿಸಬಲ್ಲಿರಾ?
ಮೊದಲ ನೋಟಕ್ಕೆ ಈ ಫೋಟೊದಲ್ಲಿರುವ ಪುಟಾಣಿ ಯಾರೆಂದು ಗುರ್ತಿಸೋದು ಕೊಂಚ ಕಷ್ಟ. ಇವರು ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಕಮ್ ನಟ. ಬರೀ ಸ್ಯಾಂಡಲ್‌ವುಡ್ ಮಾತ್ರವಲ್ಲ, ತಮ್ಮ ಕ್ರೇಜಿ ಸಿನಿಮಾಗಳಿಂದ ಅಕ್ಕಪಕ್ಕದ ಇಂಡಸ್ಟ್ರಿಯವರು ದಶಕಗಳ ಹಿಂದೆಯೇ ಇತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಇವ್ರು. ವಿಭಿನ್ನವಾಗಿ ಆಲೋಚಿಸುವ, ವಿಭಿನ್ನವಾಗಿ ಸಿನಿಮಾಗಳನ್ನು ಮಾಡುವ ಫಿಲ್ಮ್ ಮೇಕರ್. ಹೀರೊ ಆಗಿ ನಟಿಸೋಕೆ ಆರಂಭಿಸಿದ ಮೇಲೂ ಇವರು ಸಿನಿಮಾ ನಿರ್ದೇಶನ ನಿಲ್ಲಿಸಿಲ್ಲ.
ಅಭಿನಯದ ಜೊತೆ ಜೊತೆಗೆ ಆಗೊಂದು ಈಗೊಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಾ ಬರ್ತಿದ್ದಾರೆ. ಇವರು ಸಿನಿಮಾ ನಿರ್ದೇಶನ ಮಾಡ್ತಾರೆ ಅಂದ್ರೆ ಸಹಜವಾಗಿಯೇ ಕುತೂಹಲ ಗರಿಗೆದರುತ್ತೆ. ಸ್ಯಾಂಡಲ್‌ವುಡ್ ಸ್ಟಾರ್ ನಟರು ಕೂಡ ಇವರ ನಿರ್ದೇಶನದಲ್ಲಿ ನಟಿಸೋಕೆ ಕಾಯ್ತಿರ್ತಾರೆ. ಕನ್ನಡದ ಸ್ಟಾರ್ ನಟರೆಲ್ಲಾ ಈ ಸಿನಿಮಾಗಳಿಗೆ ಅಭಿಮಾನಿಗಳಾಗಿದ್ದಾರೆ. ಇನ್ನು ಗೊತ್ತಾಗಲಿಲ್ವಾ? ಈ ಫೋಟೊದಲ್ಲಿರೋದು ಯಾರು ಅಂತ. ಇವರು ಮತ್ಯಾರು ಅಲ್ಲ ರಿಯಲ್ ಸ್ಟಾರ್ ಉಪೇಂದ್ರ.

ಹೌದು ಇದು ಸೂಪರ್ ಸ್ಟಾರ್ ಉಪೇಂದ್ರ ಬಾಲ್ಯದ ಫೋಟೊ. ಯಾವುದೇ ಸಿನಿಮಾ ಹಿನ್ನಲೆ ಇಲ್ಲದ ಸಾಮಾನ್ಯ ಕುಟುಂಬದಿಂದ ಬಂದ ಉಪ್ಪಿ ಇವತ್ತು ಕನ್ನಡ ಚಿತ್ರರಂಗದ ಟಾಪ್ ನಿರ್ದೇಶಕರಾಗಿದ್ಧಾರೆ. ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. 'ಕಬ್ಜ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ಬಹಳ ವರ್ಷಗಳ ನಂತರ 'UI' ಎನ್ನುವ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ಧಾರೆ. ಕಾಶಿನಾಥ್ ಗರಡಿಯಲ್ಲಿ ಪಳಗಿದ ಉಪೇಂದ್ರ, ಮುಂದೆ 'ತರ್ಲೆ ನನ್ ಮಗ' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾದರು.
ಶ್, ಓಂ, ಆಪರೇಷನ್ ಅಂತ, ಸ್ವಸ್ತಿಕ್ ಸಿನಿಮಾಗಳನ್ನು ನಿರ್ದೇಶಿಸಿದ ಉಪ್ಪಿ 'ಎ' ಸಿನಿಮಾ ಮೂಲಕ ಹೀರೊ ಆದರು. ಮುಂದೆ ಹೀರೊ ಆಗಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ನಡುವೆ 'ಸೂಪರ್', 'ಉಪ್ಪಿ- 2' ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿದರು. ತಮ್ಮದೇ ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದರು. ತೆಲುಗು ಸಿನಿಮಾಗಳಲ್ಲೂ ನಟಿಸಿ ಬಂದರು. ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರ ಸಾಲಿನಲ್ಲಿ ಉಪೇಂದ್ರ ಹೆಸರು ಕೂಡ ಇದೆ. ಉಪ್ಪಿ ನಿರ್ದೇಶನ ಮಾಡ್ತಾರೆ ಅಂದ್ರೆ ಆ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡುತ್ತದೆ.

ಸದ್ಯ ಉಪೇಂದ್ರ ನಟನೆಯ 'ಕಬ್ಜ' ಚಿತ್ರದ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಆರ್. ಚಂದ್ರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 5 ಭಾಷೆಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ ಅರ್ಕೇಶ್ವರ ಎನ್ನುವ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ರಿಯಲ್ ಸ್ಟಾರ್ ಮಿಂಚಿದ್ದಾರೆ. ಮಾರ್ಚ್ 2ಕ್ಕೆ ಸಿನಿಮಾ ಟ್ರೈಲರ್ ಲಾಂಚ್ ಪ್ಲ್ಯಾನ್ ನಡೀತಿದೆ. ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











