ಮುತ್ತಿಟ್ಟ ಪುಣ್ಯಾತ್ಮನಿಗೆ, ವಿಡಿಯೋ ಮಾಡಿದ ಮಗಳಿಗೆ ದೊಡ್ಡ ಧನ್ಯವಾದ: ಯೋಗರಾಜ್ ಭಟ್

'ಗಾಳಿಪಟ-2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಹಣದ ಹೊಳೆ ಹರಿಸುತ್ತಿದೆ. ಸಕ್ಸಸ್ ಮೀಟ್ ಮಾಡಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ. ಮುಖ್ಯವಾಗಿ ನಿರ್ದೇಶಕ ಯೋಗರಾಜ್ ಭಟ್ರು ಥಿಯೇಟರ್ ಮುಂದೆ ಮುತ್ತಿಟ್ಟ ಪುಣ್ಯಾತ್ಮನಿಗೂ ಧನ್ಯವಾದ ತಿಳಿಸಿದ್ದಾರೆ.

ಶುಕ್ರವಾರ ಥಿಯೇಟರ್ ಅಂಗಳಲ್ಲಿ ಸಿನಿಮಾ ರಿಲೀಸ್ ಸೆಲೆಬ್ರೇಷನ್ ಜೋರಾಗಿತ್ತು. ಅಭಿಮಾನಿಗಳ ಜೊತೆ ತಮಟೆ ಬಾರಿಸಿ ನಿರ್ದೇಶಕ ಯೋಗರಾಜ್ ಭಟ್ ಸಂಭ್ರಮಿಸಿದ್ದರು. ಇನ್ನು ಅಭಿಮಾನಿಯೊಬ್ಬ ಭಟ್‌ರಿಗೆ ಮುತ್ತಿಟ್ಟ ಪ್ರಸಂಗವೂ ನಡೆದು ಹೋಯ್ತು. ಅಷ್ಟು ಸಾಲದು ಎಂಬಂತೆ ಇದೇ ವಿಚಾರವಾಗಿ ಅಪ್ಪನನ್ನು ಕಿಚಾಯಿಸಿ ಭಟ್ರ ಮಗಳು ಪುನರ್ವಸು ಒಂದು ಫನ್ನಿ ವಿಡಿಯೋ ಕೂಡ ಮಾಡಿದ್ದರು. ಅದನ್ನು ಗೋಲ್ಡನ್ ಸ್ಟಾರ್ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್‌ ಆಗೋಗಿದೆ. ಇದೇ ವಿಚಾರಕ್ಕೆ ಭಟ್ರನ್ನು ನೋಡಿ ಗಣೇಶ್ ಬಹಳ ತಮಾಷೆ ಮಾಡ್ತಿದ್ದಾರೆ.

ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಇವರಿಬ್ಬರ ಕಾಂಬಿನೇಷನ್‌ ತೆರೆಮೇಲೆ ವರ್ಕ್‌ಔಟ್ ಆಗಿದ್ದು ಪ್ರೇಕ್ಷಕರು ಹೊಸ 'ಗಾಳಿಪಟ'ವನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದ್ದಾರೆ. ನಗಿಸಿ, ಅಳಿಸುವ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದಿದೆ. ಎಲ್ಲಾ ವಿಭಾಗಗಳಲ್ಲೂ ಫಸ್ಟ್ ಕ್ಲಾಸ್ ಎನ್ನಿಸಿಕೊಂಡಿರುವ ಸಿನಿಮಾ ಎರಡನೇ ವಾರದತ್ತ ದಾಪುಗಾಲು ಇಟ್ಟಿದೆ. ಗಣೇಶ್ ಜೊತೆಗೆ ಹಿರಿಯ ನಟ ಅನಂತ್ ನಾಗ್, ದಿಗಂತ್, ಲೂಸಿಯಾ ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. 'ಗಾಳಿಪಟ-2' ಗಣಿ- ಭಟ್ರ ಕರಿಯರ್‌ನಲ್ಲಿ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಂಡ ಸಿನಿಮಾ ಎನಿಸಿಕೊಂಡಿದೆ.

 ಮುತ್ತಿಟ್ಟ ಪುಣ್ಯಾತ್ಮನಿಗೆ ಭಟ್ರ ಧನ್ಯವಾದ

ಮುತ್ತಿಟ್ಟ ಪುಣ್ಯಾತ್ಮನಿಗೆ ಭಟ್ರ ಧನ್ಯವಾದ

'ಗಾಳಿಪಟ-2' ಸಿನಿಮಾ ಸಕ್ಸಸ್‌ ಮೀಟ್‌ನಲ್ಲಿ ವೇದಿಕೆಯಲ್ಲಿ ಮಾತನಾಡಿರುವ ಯೋಗರಾಜ್‌ ಭಟ್ರು ಮುತ್ತಿಟ್ಟ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ. "ಮುತ್ತಿಟ್ಟ ಪುಣ್ಯಾತ್ಮನಿಗೆ, ತಮಟೆ ಕೊಟ್ಟ ಪುಣ್ಯಾತ್ಮನಿಗೆ ಸಣ್ಣ ವಿಡಿಯೋ ಮಾಡಿದ ಮಗಳಿಗೆ ಧನ್ಯವಾದ" ಎಂದು ಹೇಳಿದ್ದಾರೆ. ಭಟ್ರ ಈ ಮಾತಿಗೆ ನೆರೆದಿದ್ದವರೆಲ್ಲಾ ಗೊಳ್ಳೆಂದು ನಕ್ಕಿದ್ದಾರೆ.

 ಥಿಯೇಟರ್ ಅಂಗಳದಲ್ಲಿ ನಡೆದಿದ್ದೇನು?

ಥಿಯೇಟರ್ ಅಂಗಳದಲ್ಲಿ ನಡೆದಿದ್ದೇನು?

ಅಂದು ವೀರೇಶ್ ಥಿಯೇಟರ್ ಅಂಗಳದಲ್ಲಿ ಕುಡಿದು ತೂರಾಡುತ್ತಿದ್ದ ಅಭಿಮಾನಿಯೊಬ್ಬ ನಿರ್ದೇಶಕ ಯೋಗರಾಜ್ ಭಟ್‌ಗೆ ಮುತ್ತು ಕೊಟ್ಟಿದ್ದ. ಫಸ್ಟ್‌ ಡೇ ಫಸ್ಟ್ ಪ್ರೇಕ್ಷಕರ ಜೊತೆ ಸಿನಿಮಾ ನೋಡಲು ಭಟ್ರ ಕಾರಿಳಿದು ಥಿಯೇಟರ್ ಮುಂದೆ ಬಂದಿದ್ದರು. ಒಂದಷ್ಟು ಜನ ಅವರನ್ನು ಮೇಲಕ್ಕೆತ್ತೊ ಸಂಭ್ರಮಿಸಿದ್ದರು. ಇದೇ ವೇಳೆ ಗುಂಪಿನಲ್ಲಿದ್ದ ಒಬ್ಬ ಭಟ್ರ ಕಾಲಿಗೆ ಬಿದ್ದಿದ್ದ. ಆತನನ್ನು ಆಲಂಗಿಸಿಕೊಂಡಿದ್ದ ಭಟ್ರ ಆತನ ಹಣೆಗೆ ಮುತ್ತು ಕೊಟ್ಟಿದ್ದರು. ಆತ ಕೂಡ ಭಟ್ಟರನ್ನು ಮುದ್ದಾಡಿದ್ದ ವಿಡಿಯೋ ವೈರಲ್ ಆಗಿತ್ತು.

 ಫನ್ನಿ ವಿಡಿಯೋ ಮಾಡಿದ್ದ ಭಟ್ರ ಮಗಳು

ಫನ್ನಿ ವಿಡಿಯೋ ಮಾಡಿದ್ದ ಭಟ್ರ ಮಗಳು

ಇತ್ತೀಚೆಗೆ ಯೋಗರಾಜ್ ಭಟ್ರ ಮನೆಯಲ್ಲಿ ಒಂದು ತಮಾಷೆಯ ಪ್ರಸಂಗ ನಡೆದಿತ್ತು. ಭಟ್ರು ಪತ್ನಿ ಜೊತೆ ಸೇರಿ ಮಗಳು ಪುನರ್ವಸುಳನ್ನ ಗದರುವ ವಿಡಿಯೋ ಅದು. ಶೂ ಧರಿಸಿ ಎಲ್ಲೋ ಹೊರಟ ಯೋಗರಾಜ್ ಭಟ್ಟರ ವಿಡಿಯೋ ಮಾಡಿರೋ ಪುನರ್ವಸು, ನಮ್ ಅಪ್ಪ ಲೂಸ್ ಆಗಿದ್ದಾರಂತ ನಮ್ ಅಮ್ಮ ಹೇಳ್ತಿದ್ದಾರೆ ನೋಡಿ ಎಂದು ಗೇಲಿ ಮಾಡಿದ್ದಳು. ವಿಡಿಯೋದಲ್ಲಿ "ನಮ್ಮಪ್ಪನ ಕೈಗೆ ತಮಟೆ ಕೊಟ್ಟುಬಿಡಿ, ಪ್ಲೀಸ್ ಡೋಂಟ್ ಕಿಸ್ ಹಿಮ್" ಹೇಳಿದ್ದಳು. ಈ ವಿಡಿಯೋವನ್ನು ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Recommended Video

ಅದೇ ಕಥೆ ಸಿನಿಮಾ ಮಾಡಿದ್ರೆ ರಿಲೀಸ್ ಆಗ್ತಿರ್ಲಿಲ್ಲ | Gaalipata 2 | Ganesh *Press Meet
 ಬಾಕ್ಸಾಫೀಸ್‌ ಕೊಳ್ಳೆ ಹೊಡೀತಿದೆ 'ಗಾಳಿಪಟ-2'

ಬಾಕ್ಸಾಫೀಸ್‌ ಕೊಳ್ಳೆ ಹೊಡೀತಿದೆ 'ಗಾಳಿಪಟ-2'

ದೇಶ ವಿದೇಶಗಳಲ್ಲಿ 'ಗಾಳಿಪಟ-2' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಸಿನಿಮಾ ಸದ್ದು ಮಾಡ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದು ಸಿನಿಮಾವನ್ನು ಗೆಲ್ಲಿಸಿದ ಪ್ರತಿಯೊಬ್ಬರಿಗೂ ವಂದಿಸಿದ್ದರು. 'ಗಾಳಿಪಟ-2' ಸಕ್ಸಸ್ ಮೀಟ್‌ನಲ್ಲಿ ಪ್ರೇಕ್ಷಕರು, ಮಾಧ್ಯಮದವರು, ವಿತರಕರು, ಪ್ರದರ್ಶಕರು ಹೀಗೆ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Director Yogaraj Bhat Says Thanks To Kisser Fan. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X