'ಭರ್ಜರಿ'ಗಿದ್ದ ಭಯ ಮಾಯ: ಇನ್ನೇನಿದ್ರು 'ಘರ್ಜನೆ' ಮಾತ್ರ ಬಾಕಿ

By Bharath Kumar

ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದ ಸಮಯದಲ್ಲಿ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಗುಡ್ ನ್ಯೂಸ್ ಕೊಟ್ಟಿದ್ದರು.

ಇನ್ನೇನೂ ಸಿನಿಮಾ ರಿಲೀಸ್ ಆಗುತ್ತೆ ಎನ್ನುವಷ್ಟರಲ್ಲಿ ಮತ್ತೊಂದು ವಿಘ್ನ ಎದರಾಗೇ ಹೋಯ್ತು. ನಿರ್ದೇಶಕ ಯೋಗರಾಜ್ ಭಟ್ ಮತ್ತು 'ಭರ್ಜರಿ' ಚಿತ್ರದ ನಿರ್ಮಾಪಕ ಶ್ರೀನಿವಾಸ್ ಅವರ ನಡುವಿನ ಸಂಭಾವನೆ ವಿವಾದದಿಂದ 'ಭರ್ಜರಿ' ಚಿತ್ರದ ಬಿಡುಗಡೆಗೆ ಕಂಟಕ ಎದುರಾಯಿತು.

ಯೋಗರಾಜ್ ಭಟ್ ಅವರು ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕೋರ್ಟ್ ಮೆಟ್ಟಿಲೇರಲು ಸಿದ್ದರಾಗಿದ್ದರು. ಆದ್ರೀಗ, ಈ ಎಲ್ಲ ಸಮಸ್ಯೆಗಳನ್ನ ಬಗೆಹರಿಸಿಕೊಂಡ ನಿರ್ಮಾಪಕರು ಸದ್ಯಕ್ಕೆ ನಿರಾಳವಾಗಿದ್ದಾರೆ. ಹಾಗಿದ್ರೆ, ಭಟ್ ಮತ್ತು ಶ್ರೀನಿವಾಸ್ ಅವರ ನಡುವೆ ಆದ ಒಪ್ಪಂದ ಯಾವುದು? ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಸೆಪ್ಟಂಬರ್ 15 ರಂದು 'ಭರ್ಜರಿ' ಪಕ್ಕಾ

ಸೆಪ್ಟಂಬರ್ 15 ರಂದು 'ಭರ್ಜರಿ' ಪಕ್ಕಾ

ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತು 'ದನಕಾಯೋನು' ಚಿತ್ರದ ನಿರ್ದೇಶಕ ಯೋಗರಾಜ್ ಅವರ ನಡುವಿನ ಹಣಕಾಸಿನ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಈ ಮೂಲಕ 'ಭರ್ಜರಿ' ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಇಲ್ಲ. ಸೆಪ್ಟಂಬರ್ 15 ರಂದು ಭರ್ಜರಿ ಬಿಡುಗಡಯಾಗುವುದು ಪಕ್ಕಾ.

ಸಂಧಾನದಲ್ಲಿ ಬಗೆಹರಿದ ಸಮಸ್ಯೆ

ಸಂಧಾನದಲ್ಲಿ ಬಗೆಹರಿದ ಸಮಸ್ಯೆ

'ದನ ಕಾಯೋನು' ಚಿತ್ರಕ್ಕಾಗಿ ತಮಗೆ ಬರಬೇಕಿದ್ದ ಸಂಭಾವನೆಯನ್ನ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇನ್ನೂ ನೀಡದ ಕಾರಣ ನಿರ್ದೇಶಕ ಯೋಗರಾಜ್ ಭಟ್ ಕೋರ್ಟ್ ಮೆಟ್ಟಿಲೇರಲು ಸಿದ್ದವಾಗಿದ್ದರು. ಆದ್ರೀಗ, ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಿಕೊಂಡಿದ್ದಾರೆ.

3 ಚೆಕ್ ನೀಡಿರುವ 'ಭರ್ಜರಿ' ನಿರ್ಮಾಪಕ

3 ಚೆಕ್ ನೀಡಿರುವ 'ಭರ್ಜರಿ' ನಿರ್ಮಾಪಕ

ನಿರ್ದೇಶಕ ಯೋಗರಾಜ್ ಭಟ್ ಅವರಿಗೆ, ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಮೂರು ಚೆಕ್ ಗಳನ್ನ ನೀಡುವ ಮೂಲಕ ಬಾಕಿ ಸಂಭಾವನೆಯನ್ನ ಪಾವತಿಸಿದ್ದಾರೆ. ಹೀಗಾಗಿ ತಡೆಯಾಜ್ಞೆ ತರುವ ನಿರ್ಧಾರವನ್ನ ಭಟ್ಟರು ಬದಲಾಯಿಸಿಕೊಂಡಿದ್ದಾರೆ.

ಸದ್ಯಕ್ಕೆ ತಾತ್ಕಾಲಿಕ ಅಂತ್ಯ

ಸದ್ಯಕ್ಕೆ ತಾತ್ಕಾಲಿಕ ಅಂತ್ಯ

ಸದ್ಯಕ್ಕೆ ಭಟ್ ಮತ್ತು ಶ್ರೀನಿವಾಸ್ ಅವರ ನಡುವಿನ ವಿವಾದ ತಾತ್ಕಾಲಿಕವಾಗಿ ಅಂತ್ಯವಾಗಿದೆ. ಒಂದು ವೇಳೆ ಶ್ರೀನಿವಾಸ್ ಅವರು ಕೊಟ್ಟಿರುವ ಚೆಕ್ ಬೌನ್ಸ್ ಆದರೆ, ಯೋಗರಾಜ್ ಭಟ್ ಅವರು ಮತ್ತೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಆದ್ರೆ, 'ಭರ್ಜರಿ' ಬಿಡುಗಡೆಗೆ ಯಾವುದೇ ಸಮಸ್ಯೆ ಆಗಲ್ಲ.

More from Filmibeat

English summary
Kannada Director Yograj Bhat and Kannada Movie 'Bharjari' Producer Kanakapura Srinivas Remuneration controversy Ends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X