twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕನಾಗಲು ಸಂತೋಷ್ ಆನಂದ್ ರಾಮ್‌ಗೆ ಸ್ಫೂರ್ತಿ ಯಾರು ಗೊತ್ತೇ?

    |

    ಮೇ 3 ನಿರ್ದೇಶಕರ ದಿನ. ಸಿನಿಮಾ ನಿರ್ದೇಶಕರೆಲ್ಲ ಲಾಕ್ ಡೌನ್ ಅವಧಿಯಲ್ಲಿ ಸಿನಿಮಾ ಚಟುವಟಿಕೆಗಳಿಲ್ಲದ ಸಂದರ್ಭದಲ್ಲಿ ನಿರ್ದೇಶಕರ ದಿನವನ್ನು ಆಚರಿಸುವಂತಾಗಿದೆ. ಆದರೆ ಅನೇಕ ನಿರ್ದೇಶಕರು ತಾವು ಚಿತ್ರರಂಗಕ್ಕೆ, ಅದರಲ್ಲಿಯೂ ನಿರ್ದೇಶನದ ಜವಾಬ್ದಾರಿ ಹೊತ್ತುಕೊಳ್ಳುವ ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಅನೇಕ ನಿರ್ದೇಶಕರನ್ನು ನೆನಪಿಸಿಕೊಂಡಿದ್ದಾರೆ.

    Recommended Video

    ಅಜ್ಜಿ ಜೊತೆ ಬೆಣ್ಣೆ ಕಡೆಯೋದನ್ನ ಕಲಿತ ಮಗಧೀರ | Ram Charan in Kitchen

    'ಮಿ. ಆಂಡ್ ಮಿಸೆಸ್ ರಾಮಚಾರಿ' ಮತ್ತು 'ರಾಜಕುಮಾರ'ದಂತಹ ಸತತ ಎರಡು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮೂರನೇ ಸಿನಿಮಾವನ್ನು ಗೆಲ್ಲಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರ್ದೇಶಕ ಎಂದು ಗುರುತಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. 'ಯುವರತ್ನ' ಚಿತ್ರದ ತಯಾರಿಯಲ್ಲಿರುವ ಅವರು, ನಿರ್ದೇಶಕದ ದಿನದಂದು ತಾವು ನಿರ್ದೇಶನ ರಂಗಕ್ಕೆ ಬರಲು ಕಾರಣ ಯಾರು ಎಂಬುದನ್ನು ತಿಳಿಸಿದ್ದಾರೆ. ಮುಂದೆ ಓದಿ...

    'ಯುವರತ್ನ' ಟ್ರೇಲರ್, ಹಾಡು ಬಿಡುಗಡೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ್ದೇನು?'ಯುವರತ್ನ' ಟ್ರೇಲರ್, ಹಾಡು ಬಿಡುಗಡೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ್ದೇನು?

    ನಿರ್ದೇಶಕನನ್ನು ಎಚ್ಚರಗೊಳಿಸಿದವರು

    ನಿರ್ದೇಶಕನನ್ನು ಎಚ್ಚರಗೊಳಿಸಿದವರು

    ತಮ್ಮೊಳಗಿನ ಸಿನಿಮಾ ನಿರ್ದೇಶಕನನ್ನು ಎಚ್ಚರಗೊಳಿಸುವ ಮೂಲಕ ತಾವು ನಿರ್ದೇಶಕನೆಂಬ ಹೆಸರು ಗಳಿಸಿಕೊಳ್ಳಲು ಪ್ರೇರಣೆಯಾದವರು ಉಪೇಂದ್ರ ಎಂದು ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ. ತಾವು ಉಪೇಂದ್ರ ಅವರ ಅಭಿಮಾನಿ ಎಂದು ಅವರು ಈ ಹಿಂದೆಯೂ ಹೇಳಿಕೊಂಡಿದ್ದರು.

    ಉಪ್ಪಿಗಿಂತ ರುಚಿ ಬೇರೆ ಇಲ್ಲ

    ಉಪ್ಪಿಗಿಂತ ರುಚಿ ಬೇರೆ ಇಲ್ಲ

    ನನ್ನಲ್ಲಿದ್ದ ನಿರ್ದೇಶಕನನ್ನ ಬಡಿದೆಬ್ಬಿಸಿದ ನಿರ್ದೇಶಕರ ನಿರ್ದೇಶಕನಿಗೆ ನಿರ್ದೇಶಕರ ದಿನದ ಶುಭಾಶಯಗಳು. "ಉಪ್ಪಿಗಿಂತ ರುಚಿ ಬೇರೆ ಇಲ್ಲ, ಒಪ್ಪಿಕೊಂಡೋರು ದಡ್ಡರಲ್ಲ'' ಎಂದು ಕನ್ನಡದ ಎಲ್ಲ ನಿರ್ದೇಶಕರಿಗೂ ಶುಭಾಶಯ ಕೋರಿರುವ ಸಂತೋಷ್, ಉಪೇಂದ್ರ ಅವರ ಫೋಟೊ ಹಂಚಿಕೊಂಡಿದ್ದಾರೆ. ಇದನ್ನು ಉಪೇಂದ್ರ ರೀ ಟ್ವೀಟ್ ಮಾಡಿ ನಮಸ್ಕಾರದ ಎಮೋಜಿ ಹಾಕಿಕೊಂಡಿದ್ದಾರೆ.

    ಕ್ಷಮೆ ಕೇಳಿದ 'ಯುವರತ್ನ' ನಿರ್ದೇಶಕ ಸಂತೋಷ್ ಆನಂದ್ ರಾಮ್ಕ್ಷಮೆ ಕೇಳಿದ 'ಯುವರತ್ನ' ನಿರ್ದೇಶಕ ಸಂತೋಷ್ ಆನಂದ್ ರಾಮ್

    'ಉಪೇಂದ್ರ' ನೀಡಿದ ಸ್ಫೂರ್ತಿ

    'ಉಪೇಂದ್ರ' ನೀಡಿದ ಸ್ಫೂರ್ತಿ

    ಉಪೇಂದ್ರ ಕುರಿತಾದ ತಮ್ಮ ಅಭಿಮಾನವನ್ನು ಅವರು ಹಂಚಿಕೊಂಡಿರುವುದು ಇದೇ ಮೊದಲೇನಲ್ಲ. 'ಉಪ್ಪಿ 2' ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅವರು ಸಿನಿಮಾ ನೋಡಲು ಕಾತರರಾಗಿವುದಾಗಿ ತಿಳಿಸಿದ್ದರು. 1999ರಲ್ಲಿ ಕ್ಲಾಸಿಕ್ ಚಿತ್ರ 'ಉಪೇಂದ್ರ' ನೋಡಿದ ಬಳಿಕ ತಾವೂ ನಿರ್ದೇಶಕರಾಗಬೇಕೆಂಬ ಬಯಕೆ ಮೂಡಿದ್ದಾಗಿ ಹೇಳಿಕೊಂಡಿದ್ದರು.

    ಲಕ್ಷಾಂತರ ಜನರಿಗೆ ಪ್ರೇರಣೆ

    ಲಕ್ಷಾಂತರ ಜನರಿಗೆ ಪ್ರೇರಣೆ

    'ಲಕ್ಷಾಂತರ ಮನಸುಗಳಿಗೆ ಸಿನಿಮಾಕ್ಕೆ ಬರುವಂತೆ ಉಪ್ಪಿ ಸರ್ ಸ್ಫೂರ್ತಿ ನೀಡಿದ್ದರು. ಅವರಲ್ಲಿ ನಾನೂ ಒಬ್ಬ. ಉಪೇಂದ್ರ ಚಿತ್ರದ ಬಳಿಕ ಯಾವುದೂ ಬದಲಾಗಿಲ್ಲ. ನಾನು ಇಂದಿಗೂ ಅವರ ಅಭಿಮಾನಿ' ಎಂದು ಸಂತೋಷ್ ತಿಳಿಸಿದ್ದರು.

    20 ವರ್ಷದ ಹಿಂದೆಯೇ ಉಪ್ಪಿ ಮಾಡಿದ್ದರು

    20 ವರ್ಷದ ಹಿಂದೆಯೇ ಉಪ್ಪಿ ಮಾಡಿದ್ದರು

    ತೆಲುಗಿನ 'ಅರ್ಜುನ್ ರೆಡ್ಡಿ' ಮತ್ತು ತಮಿಳಿನ 'ವಿಕ್ರಂ ವೇದ' ಚಿತ್ರಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿಯೂ ಸಂತೋಷ್ ಆನಂದ್ ರಾಮ್, ಉಪೇಂದ್ರ ಹೆಸರನ್ನು ಪ್ರಸ್ತಾಪಿಸಿದ್ದರು. 20 ವರ್ಷಗಳ ಹಿಂದೆಯೇ ಉಪೇಂದ್ರ ಇಂತಹ ಮಾದರಿಯ ಚಿತ್ರಗಳನ್ನು ಮಾಡಿದ್ದರು. ಅವರೇ ಇಂತಹ ಕಲ್ಟ್‌ಗಳ ಸೃಷ್ಟಿಕರ್ತ ಎಂದಿದ್ದರು.

    English summary
    On Directors day, Santhosh Ananddram said Upendra was his inspiration to become a director.
    Monday, May 4, 2020, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X