'ಪುಷ್ಪಕ ವಿಮಾನ' ನಿರ್ದೇಶಕನ ಹೊಸ ಸಿನಿಮಾ ಪ್ರಾರಂಭ
'ಪುಷ್ಪಕ ವಿಮಾನ' ನಟ ರಮೇಶ್ ಅರವಿಂದ್ ಅವರ ನೂರನೇ ಸಿನಿಮಾವಾಗಿತ್ತು. ಈ ಚಿತ್ರವನ್ನು ಹೊಸ ನಿರ್ದೇಶಕ ಎಸ್ ರವೀಂದ್ರನಾಥ್ ನಿರ್ದೇಶನ ಮಾಡಿದ್ದರು.
ಆ ಚಿತ್ರದ ನಂತರ ಈಗ ರವೀಂದ್ರನಾಥ್ ತಮ್ಮ ಹೊಸ ಸಿನಿಮಾವನ್ನು ಶುರು ಮಾಡಿದ್ದಾರೆ. ಅವರ ಎರಡನೇ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ಸಿನಿಮಾಗೆ 'ಕಾಂಟ್ರಿಮೇಡ್ ಚಾರಿ' ಎಂಬ ಹೆಸರನ್ನು ಇಡಲಾಗಿದೆ.
ಟೈಟಲ್ ಕೇಳಿದ ತಕ್ಷಣ 'ಕಾಂಟ್ರಿಮೇಡ್ ಚಾರಿ' ಅಂದರೆ ಏನು ಎಂಬ ಕುತೂಹಲ ಮೂಡಿದೆ. ಸಿಂಪಲ್ ಪೋಸ್ಟರ್ ಮೂಲಕ ಟೈಟಲ್ ರಿವೀಲ್ ಮಾಡಿದ್ದಾರೆ. ಸುಶೀಲ್ ಸತ್ಯರಾಜ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ.

ಈ ಹೊಸ ಸಿನಿಮಾಗೆ ಚಿತ್ರರಂಗದ ಸಾಕಷ್ಟು ಜನರು ವಿಶ್ ಮಾಡಿದ್ದಾರೆ. 'ದೇವಕಿ' ನಿರ್ದೇಶಕ ಲೋಹಿತ್ ಕೂಡ ಸಿನಿಮಾಗೆ ಶುಭಾಶಯ ತಿಳಿಸಿದ್ದಾರೆ.
'ಕಾಂಟ್ರಿಮೇಡ್ ಚಾರಿ' ಸಿನಿಮಾದ ಟೈಟಲ್ ಯುಗಾದಿ ಹಬ್ಬದ ವಿಶೇಷವಾಗಿ ಹೊರಬಂದಿದ್ದು, ಸದ್ಯದಲ್ಲಿಯೇ ಕಲಾವಿದರ ಹೆಸರು ಸೇರಿದಂತೆ ಅನೇಕ ಮಾಹಿತಿ ತಿಳಿಯಲಿದೆ.
More from Filmibeat
English summary
'Pushpaka Vimana' fame director S Ravindranath 2nd movie titled as Country Made Chaari'.


Click it and Unblock the Notifications











