ಮಠ ಗುರುಪ್ರಸಾದ್ ಹ್ಯಾಟ್ರಿಕ್ ಹೊಡೀತಾರಾ?

By Rajendra

Director Guruprasad
ಸತತ ಮೂರು ವರ್ಷಗಳ ಬಳಿಕ ಗುರು ಪ್ರಸಾದ್ ನಿರ್ದೇಶನದ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಕಾಡಿಸಿ, ಬೇಡಿಸಿ ಚಿತ್ರಗಳನ್ನು ಮಾಡುವ ಜಾಯಾಯದ ಪೈಕಿಯ ನಿರ್ದೇಶಕ ಗುರುಪ್ರಸಾದ್. ಇದೇ ಮೇ 31ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ.

ಚಲನಚಿತ್ರ ನಿರ್ದೇಶನಕನೊಬ್ಬನ ಒದ್ದಾಟಗಳೇ ಈ ಚಿತ್ರದ ಕಥಾವಸ್ತು. ಆರಂಭದಲ್ಲಿ ಕೋಮಲ್ ಅವರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಲಾಗಿತ್ತು. ಸಂಪೂರ್ಣ ಕಥೆ ಕೇಳಿದ ಬಳಿಕ ಅವರು ಕೈಎತ್ತಿದರು. ಪತ್ರಿಕಾಗೋಷ್ಠಿಯನ್ನೂ ಕರೆದು ನಾನು ಆ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಹೇಳಿದರು.

ಬಳಿಕ ಕಥೆಯಲ್ಲಿ ಒಂಚೂರು ಬದಲಾವಣೆಗಳನ್ನು ಮಾಡಿಕೊಂಡು ಹೊಸಬರಿಗೆ ಬಣ್ಣ ಹಾಕಿಸಿದರು ಗುರುಪ್ರಸಾದ್. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಸಹ ಅವರದೇ. ಅವರ ಮೆಚ್ಚಿನ ತಾಂತ್ರಿಕ ಬಳಗವಾದ ಅನೂಪಿ ಸೀಳಿನ್ (ಸಂಗೀತ), ಮಹೇಂದ್ರ ಸಿಂಹ (ಛಾಯಾಗ್ರಹಣ) ಜೊತೆಗಿದೆ.

ಸಿನಿಮಾ 'ಸಂಬಂಧ ಸುತ್ತ' ಕಥೆ ಸುತ್ತುತ್ತದೆ. ಗಾಂಧಿನಗರಕ್ಕೆ ಹತ್ತಿರವಾದ ಸಬ್ಜೆಕ್ಟ್. ಮಠ, ಎದ್ದೇಳು ಮಂಜುನಾಥ ಚಿತ್ರಗಳ ಯಶಸ್ಸಿನ ನಂತರ ನಮಗೊಂದು ಚಿತ್ರ ಮಾಡಿಕೊಡಿ ಎಂದು ಸಾಕಷ್ಟು ನಿರ್ಮಾಪಕರು ಗುರು ಬೆನ್ನಿಗೆ ಬಿದ್ದರೂ ಪ್ರಯೋಜನವಾಗಿರಲಿಲ್ಲ.

ಕಡೆಗೆ ಅಜೇಯ ಪಿಕ್ಚರ್ಸ್ ಹಾಗೂ ಗುರುಪ್ರಸಾದ್ ಇಂಕ್ ಲಾಂಛನದಲ್ಲಿ ಎಂ.ಗೋವಿಂದ ನಿರ್ಮಿಸಿರುವ ಚಿತ್ರಕ್ಕೆ ಓಕೆ ಎಂದರು. ಬಿ.ಎಸ್.ಕೆಂಪರಾಜ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.

ಚಿಂತಾಮಣಿಯ ಹೆಮ್ಮೆಯ ಕವಿ ಬಿ.ಆರ್.ಲಕ್ಷ್ಮಣರಾವ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಗುರುಪ್ರಸಾದ್ ಅವರೇ ಕಲಾ ನಿರ್ದೇಶನ ಮಾಡಿರುವ ಈ ಚಿತ್ರದ ತಾರಾಬಳಗದಲ್ಲಿ ಧನಂಜಯ್, ರಂಗಾಯಣರಘು, ಪೂಜಾಗಾಂಧಿ, ರಾಮ್ ಮುಂತಾದವರಿದ್ದಾರೆ. (ಏಜೆನ್ಸೀಸ್)

More from Filmibeat

English summary
Matha and Eddelu Manjunatha fame Guruprasad's 'Directors Special' film slated for release on 31st May. The film got U/A certificate from censor board. The film has a story of a filmy background. ‘Director’s Special’ chronicles the travails of a struggling Kannada film director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X