Just In
Don't Miss!
- News
ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡದ ಟಾಪ್ ಹೀರೋಗಳ ಗಾಡ್ ಫಾದರ್ ಇವರೇ ನೋಡಿ!

ಒಬ್ಬ ನಿರ್ದೇಶಕ ಒಂದು ಸಿನಿಮಾದ ನಿಜವಾದ ಹೀರೋ ಎಂಬ ಮಾತಿದೆ. ನಿರ್ದೇಶಕ ಮನಸು ಮಾಡಿದ್ದರೆ ಒಬ್ಬ ದೊಡ್ಡ ಸ್ಟಾರ್ ಅನ್ನು ಹುಟ್ಟಿಸಬಹುದು. ಕಥೆ ಮತ್ತು ನಿರ್ದೇಶಕ ಇಬ್ಬರು ಒಂದು ಸಿನಿಮಾದ ದೊಡ್ಡ ಆಸ್ತಿ.
ಅಂದಹಾಗೆ, ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ದರ್ಶನ್, ಗಣೇಶ್, ದುನಿಯಾ ವಿಜಯ್ ಈ ರೀತಿಯ ನಟರಿಗೆ ಮೊದಲ ಆಕ್ಷನ್ ಕಟ್ ಹೇಳಿದ ನಿರ್ದೇಶಕರು ಯಾರು ಎಂಬುದು ಎಲ್ಲರಿಗು ಇರುವ ಸಣ್ಣ ಕುತೂಹಲವಾಗಿದೆ. ಆ ರೀತಿಯ ಕನ್ನಡದ ಟಾಪ್ ಹೀರೋಗಳನ್ನು ಪರಿಚಯ ಮಾಡಿದ್ದ ನಿರ್ದೇಶಕರ ಪಟ್ಟಿ ಮುಂದಿದೆ ಓದಿ...

ಸಂಗೀತಂ ಶ್ರೀನಿವಾಸ್
ನಟ ಶಿವರಾಜ್ ಕುಮಾರ್ 'ಆನಂದ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ವರನಟ ರಾಜ್ ಕುಮಾರ್ ಅವರ ಮಗನನ್ನು ಸಿನಿಮಾರಂಗಕ್ಕೆ ಪರಿಚಯ ಮಾಡಿದ್ದು ನಿರ್ದೇಶಕ ಸಂಗೀತಂ ಶ್ರೀನಿವಾಸ್. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾಗಿದ್ದ ಸಂಗೀತಂ ಶ್ರೀನಿವಾಸ್ ಮೊದಲು ಶಿವಣ್ಣನಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕನಾಗಿದ್ದಾರೆ.

ಸುನೀಲ್ ಕುಮಾರ್ ದೇಸಾಯಿ
ನಟ ಕಿಚ್ಚ ಸುದೀಪ್ 'ಸ್ಪರ್ಶ' ಚಿತ್ರಕ್ಕೆ ಮುಂಚೆ ಕೆಲವು ಸಿನಿಮಾಗಳನ್ನು ಮಾಡಿದ್ದರು ಸಹ ಆ ಚಿತ್ರಗಳು ರಿಲೀಸ್ ಆಗಿರಲಿಲ್ಲ. ಈ ವೇಳೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಹೊಸ ಸಿನಿಮಾಗೆ ಸುದೀಪ್ ಅವರನ್ನು ಆಯ್ಕೆ ಮಾಡಿದರು. ಮೊದಲ ಸಿನಿಮಾದಲ್ಲಿಯೇ ಸುದೀಪ್ ನಟನೆ ಮೂಲಕ ಎಲ್ಲರ ಗಮನ ಸೆಳೆದರು. ಅಂದಿನಿಂದ ಇಂದಿನವರಗೆ ಸುದೀಪ್ ಯಾವ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುತ್ತಾರೆ.

ಪಿ ಎನ್ ಸತ್ಯ
ನಿರ್ದೇಶಕ ಪಿ.ಎನ್.ಸತ್ಯ ದರ್ಶನ್ ಅವರ ಮೊದಲ ಸಿನಿಮಾ 'ಮೆಜೆಸ್ಟಿಕ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಖಳನಾಯಕನ ಮಗನಾಗಿದ್ದ ದರ್ಶನ್ ಒಬ್ಬ ಹೀರೋ ಆಗಿ ಇಂಡಸ್ಟ್ರಿ ಯಲ್ಲಿ ಎದ್ದು ನಿಂತರು. ಮೊದಲ ಸಿನಿಮಾದಲ್ಲಿಯೇ ಮಾಸ್ ಅವತಾರದಲ್ಲಿ ದರ್ಶನ್ ಎಂಟ್ರಿ ಕೊಟ್ಟರು.

ಉಪೇಂದ್ರ
ನಟ ಉಪೇಂದ್ರ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವರು. ನಿರ್ದೇಶಕನಾಗಿ ದೊಡ್ಡ ಯಶಸ್ಸು ಪಡೆದಿದ್ದ ಉಪ್ಪಿ 'ಎ' ಸಿನಿಮಾದ ಮೂಲಕ ನಾಯಕ ಕೂಡ ಆದರು. ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ, ನಟನೆ ಎಲ್ಲ ಜವಾಬ್ದಾರಿಗಳನ್ನು ಉಪೇಂದ್ರ ನಿರ್ವಹಿಸಿದರು.
ನನ್ನ ಮೊದಲ ಸಿನಿಮಾ : ಎಲ್ಲೂ ರಿವೀಲ್ ಆಗದ 'A' ಚಿತ್ರದ ರೋಚಕ ಕತೆ

ಪೂರಿ ಜಗನ್ನಾಥ್
ಬಾಲ ನಟನಾಗಿದ್ದ ಪುನೀತ್ ರಾಜ್ ಕುಮಾರ್ 'ಅಪ್ಪು' ಸಿನಿಮಾದ ಮೂಲಕ ನಾಯಕ ನಟ ಆದರು. ಈ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಪುನೀತ್ ಅವರ ಮೊದಲ ಸಿನಿಮಾವಾದ 'ಅಪ್ಪು' ನೂರು ದಿನ ಪ್ರದರ್ಶನ ಕಂಡಿದೆ.
ಓದುಗರ ಆಯ್ಕೆ: 2017ರ ಅತ್ಯುತ್ತಮ ನಿರ್ದೇಶಕ ಸಂತೋಷ್ ಆನಂದ್ ರಾಮ್

ಶಶಾಂಕ್
ರಾಕಿಂಗ್ ಸ್ಟಾರ್ ಯಶ್ 'ಜಂಬದ ಹುಡುಗಿ' ಸಿನಿಮಾದ ಒಂದು ಪಾತ್ರದಲ್ಲಿ ನಟಿಸಿದ್ದರು. ಹೀರೋ ಆಗಿ 'ಮೊಗ್ಗಿನ ಮನಸು' ಮೂಲಕ ಯಶ್ ಚಿತ್ರರಂಗಕ್ಕೆ ಬಂದರು. ಈ ಚಿತ್ರವನ್ನು ಶಶಾಂಕ್ ನಿರ್ದೇಶನ ಮಾಡಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಇದೇ ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದರು.
ಇವರಲ್ಲಿ 2017ರ ಕನ್ನಡದ ಬೆಸ್ಟ್ ನಿರ್ದೇಶಕರು ಯಾರು?

ಸೂರಿ
'ದುನಿಯಾ' ಸಿನಿಮಾದ ಮೂಲಕ ಹೀರೋ ಪಟ್ಟ ಪಡೆದ ನಟ ದುನಿಯಾ ವಿಜಯ್ ಇಂದು ಸ್ಟಾರ್ ನಟನಾಗಿದ್ದಾರೆ. 'ದುನಿಯಾ' ಸಿನಿಮಾವನ್ನು ಸೂರಿ ನಿರ್ದೇಶನ ಮಾಡಿದ್ದು, ಇದೇ ಶುಕ್ರವಾರ ಅಂದರೆ ಫೆಬ್ರವರಿ 23ಕ್ಕೆ ಸಿನಿಮಾ ಬಿಡುಗಡೆಯಾಗಿ 10 ವರ್ಷ ಪೂರೈಸಲಿದೆ. ವಿಶೇಷ ಅಂದರೆ ಅದೇ ದಿನ ಶಿವಣ್ಣ ಮತ್ತು ಸೂರಿ ಕಾಂಬಿನೇಶನ್ ನಲ್ಲಿ ಬರ್ತಿರುವ 'ಟಗರು' ಬಿಡುಗಡೆಯಾಗುತ್ತಿದೆ.

ಎಂ.ಡಿ. ಶ್ರೀಧರ್
ನಟ ಗಣೇಶ್ 'ಚೆಲ್ಲಾಟ' ಚಿತ್ರದ ಮೂಲಕ ನಾಯಕ ನಟನಾದರು. ಈ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡಿದ್ದರು. 'ಚೆಲ್ಲಾಟ' ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ ಗಣೇಶ್ ನಂತರ ಗೋಲ್ಡನ್ ಸ್ಟಾರ್ ಆದರು.