For Quick Alerts
  ALLOW NOTIFICATIONS  
  For Daily Alerts

  ಯಶ್ 'KGF' ಚಿತ್ರದ ಚಿತ್ರೀಕರಣಕ್ಕೆ ಮೈಸೂರು ವಿದ್ಯಾರ್ಥಿಗಳ ವಿರೋಧ!

  By ಮೈಸೂರು ಪ್ರತಿನಿಧಿ
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್' ಚಿತ್ರದ ಶೂಟಿಂಗ್ ಗೆ ಈಗ ಅಡ್ಡಿ ಉಂಟಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ವಿದ್ಯಾರ್ಥಿಗಳು ಚಿತ್ರದ ಚಿತ್ರೀಕರಣವನ್ನು ವಿರೋಧಿಸಿದ್ದಾರೆ.

  'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ರೆಟ್ರೋ ಸ್ಟೈಲ್ ಬಹಿರಂಗ

  'ಕೆಜಿಎಫ್' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಯಶ್ ಅಭಿಮಾನಿಗಳಂತೂ ಈ ಸಿನಿಮಾವನ್ನು ತೆರೆ ಮೇಲೆ ನೋಡುವುದಕ್ಕೆ ಕಾದು ಕುಳಿತಿದ್ದಾರೆ. ಹೀಗಿರುವಾಗಲೇ ಚಿತ್ರದ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಮುಂದೆ ಓದಿ...

  ಮೈಸೂರಿನಲ್ಲಿ ಶೂಟಿಂಗ್

  ಮೈಸೂರಿನಲ್ಲಿ ಶೂಟಿಂಗ್

  'ಕೆಜಿಎಫ್' ಚಿತ್ರದ ಶೂಟಿಂಗ್ ಕಳೆದ 4 ದಿನಗಳಿಂದ ಮೈಸೂರಿನ ಹಲವೆಡೆ ನಡೆಯುತ್ತಿತ್ತು. ಆದರೆ ಈಗ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ವಿದ್ಯಾರ್ಥಿಗಳು ಚಿತ್ರದ ಚಿತ್ರೀಕರಣವನ್ನು ವಿರೋಧಿಸಿದ್ದಾರೆ.

  ಹೊಸ ಮನೆ ಖರೀದಿಸಿದ ಯಶ್ - ರಾಧಿಕಾ ಪಂಡಿತ್ ಜೋಡಿ

  ಕಾರಣ ಏನು..?

  ಕಾರಣ ಏನು..?

  'ಕೆಜಿಎಫ್' ಸಿನಿಮಾದ ಚಿತ್ರೀಕರಣ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ನಡೆಯುತ್ತಿದ್ದು, ಈ ವೇಳೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿದ ಆರೋಪದಲ್ಲಿ ಶೂಟಿಂಗ್ ಗೆ ತಡೆಯೊಡ್ಡಿದ ಘಟನೆ ನಡೆದಿದೆ.

  ವಿದ್ಯಾರ್ಥಿಗಳಿಂದ ಆರೋಪ

  ವಿದ್ಯಾರ್ಥಿಗಳಿಂದ ಆರೋಪ

  ಚಿತ್ರೀಕರಣ ನೋಡಲು ಬಂದಿದ್ದ ವಿದ್ಯಾರ್ಥಿಗಳಿಗೆ ಚಿತ್ರತಂಡದವರು ಕೆಟ್ಟ ಪದ ಬಳಸಿದ್ದಾರೆಂದು ಆರೋಪಿಸಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

  ಅಸಮಾಧಾನ

  ಅಸಮಾಧಾನ

  ಚಿತ್ರದ ಶೂಟಿಂಗ್ ಗಾಗಿ ಕಾಲೇಜು ಕ್ಯಾಂಪಸ್ ನಲ್ಲಿ ಪಬ್ ರೀತಿಯ ಸೆಟ್ ಹಾಕಿದ್ದು, ಧೂಮಪಾನ ಮಾಡಿ ಡ್ಯಾನ್ಸ್ ಮಾಡುವ ದೃಶ್ಯಗಳನ್ನು ಚಿತ್ರೀಕರಣ ನಡೆಸುವುದು ತಪ್ಪು ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಚಿತ್ರದ ಬಗ್ಗೆ

  ಚಿತ್ರದ ಬಗ್ಗೆ

  'ಕೆಜಿಎಫ್' ಯಶ್ ನಟನೆಯ ಸಿನಿಮಾವಾಗಿದ್ದು, 'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  English summary
  Disruption for Yash's 'KGF movie' shooting in Mysore Manasagangotri college.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X