»   » ಕರ್ನಾಟಕದಲ್ಲಿ 'ರೆಮೋ' ವಿತರಣೆ ಮಾಡಲಿರುವ ದೀಪಕ್ ಸಾಮಿ

ಕರ್ನಾಟಕದಲ್ಲಿ 'ರೆಮೋ' ವಿತರಣೆ ಮಾಡಲಿರುವ ದೀಪಕ್ ಸಾಮಿ

By: Sony
Subscribe to Filmibeat Kannada

ಕಾಲಿವುಡ್ ಚಿತ್ರರಂಗ ಕ್ಷೇತ್ರದಲ್ಲಿ ಲೀಡಿಂಗ್ ನಲ್ಲಿರುವ ಕಾಮಿಡಿ ನಟ ಕಮ್ ಹೀರೋ ಶಿವಕಾರ್ತಿಕೇಯನ್ ಮತ್ತು ಮುದ್ದು ಮುಖದ ನಟಿ ಕೀರ್ತಿ ಸುರೇಶ್ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ರೆಮೋ' ಚಿತ್ರ ಅಕ್ಟೋಬರ್ ತಿಂಗಳಿನಲ್ಲಿ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸುತ್ತಿದೆ.

ಇದೀಗ 'ರೆಮೋ' ಚಿತ್ರವನ್ನು ನೋಡಲೆಂದು ಕಾಯುತ್ತಿರುವ ಕರ್ನಾಟಕದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ತಮಿಳು ಸಿನಿಮಾ 'ರೆಮೋ' ಕರ್ನಾಟಕದ ವಿತರಣಾ ಹಕ್ಕನ್ನು ತಿರು ದೀಪಕ್ ಸಾಮಿ ಅವರು ವಹಿಸಿಕೊಂಡಿದ್ದಾರೆ.['ರೆಮೋ' ಆಡಿಯೋ ಲಾಂಚ್ ಗೆ ದಿನಗಣನೆ ಶುರು]

Distributor Deepak Sami to release 'Remo' in Karnataka

ಎಂಜಿ (Minimum Guarantee)ಬೇಸ್ ಮೂಲಕ ಕಾಮಿಡಿ ಎಂರ್ಟಟೈನರ್ 'ರೆಮೋ' ಚಿತ್ರವನ್ನು ದೀಪಕ್ ಅವರು ಇಡೀ ಕರ್ನಾಟಕದಾದ್ಯಂತ ವಿತರಣೆ ಮಾಡಲಿದ್ದಾರೆ. ಈ ಮೊದಲು ದೀಪಕ್ ಅವರು ವಿಜಯ್ ಅವರ 'ತೆರಿ' ಚಿತ್ರವನ್ನು ಕೂಡ ಕರ್ನಾಟಕದಲ್ಲಿ ವಿತರಣೆ ಮಾಡಿದ್ದರು.[ಆನ್ ಲೈನ್ ಲೀಕ್ ತಡೆಯಲು 'ರೆಮೋ' ಫಸ್ಟ್ ಶೋ ತಮಿಳುನಾಡಿನಲ್ಲಿ ಮಾತ್ರ]

Distributor Deepak Sami to release 'Remo' in Karnataka

24AM ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ರೆಮೋ' ಸಿನಿಮಾ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದು, ನಟ ಶಿವಕಾರ್ತಿಕೇಯನ್ ಅವರಿಗೆ ಈ ಸಿನಿಮಾ ಅತ್ಯಂತ ದೊಡ್ಡ ಮಟ್ಟದ ಬ್ರೇಕ್ ಕೊಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.[ಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್]

Distributor Deepak Sami to release 'Remo' in Karnataka

ಸೆಪ್ಟೆಂಬರ್ 5 ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದ್ದು, ಅಕ್ಟೋಬರ್ 7 ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರಕ್ಕೆ ಭಾಗ್ಯರಾಜ್ ಕಣ್ಣನ್ ಆಕ್ಷನ್-ಕಟ್ ಹೇಳಿದ್ದು, ನಿರ್ಮಾಪಕ ಆರ್.ಡಿ ರಾಜಾ ಅವರು ಬಂಡವಾಳ ಹೂಡಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

English summary
Deepak Sami of South Side Studios has acquired the theatrical rights of 'Remo' in Karnataka on minimum guarantee (MG) basis, confirmed production house 24 AM Studios on its official micro-blogging page. South Side Studios distributed the Vijay, Samantha Ruth Prabhu and Amy Jackson-starrer 'Theri' in Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada