For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಗಳ ಚಿತ್ರಕ್ಕೆ ಟಿಕೆಟ್ ಬೆಲೆ ಏರಿಕೆ ಇಲ್ಲ : ಮಿಡ್ ನೈಟ್ ಶೋ ಮಾಡುವಂತಿಲ್ಲ

  |
  ಸ್ಟಾರ್ ಸಿನೆಮಾಗಳ ಅಬ್ಬರಕ್ಕೆ ಬಿತ್ತು ಕಡಿವಾಣ

  ಸ್ಟಾರ್ ಗಳ ಸಿನಿಮಾವನ್ನು ಮೊದಲ ದಿನವೇ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿರುತ್ತದೆ. ಆ ರೀತಿ ಆಸೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಹೋದರೆ ಟಿಕೆಟ್ ಬೆಲೆ ನೋಡಿ ಬೇಸರ ಆಗುತ್ತದೆ.

  ಬಿಗ್ ಸ್ಟಾರ್ ಗಳ ಬಿಗ್ ಸಿನಿಮಾಗೆ ಟಿಕೆಟ್ ದರ ದುಪ್ಪಟ್ಟು ಆಗಿರುತ್ತದೆ. ಆದರೆ, ಇನ್ನು ಮುಂದೆ ಸಿಂಗಲ್ ಸ್ಕ್ರೀನ್ ನಲ್ಲಿ ಈ ರೀತಿ ಆಗದೆ ಇರುವ ಹಾಗೆ ಚಿತ್ರ ಪ್ರದರ್ಶಕರು ಹಾಗೂ ವಿತರಕರು ನಿರ್ಧಾರ ಮಾಡಿದ್ದಾರೆ.

  ದೊಡ್ಡ ಸ್ಟಾರ್‌ ಗಳ ಸಿನಿಮಾಗಳು ಎಂದ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇದ್ದೆ ಇರುತ್ತದೆ. ಆ ರೀತಿ ಟಿಕೆಟ್ ಗೆ ಡಿಮ್ಯಾಂಡ್ ಇದ್ದ ಚಿತ್ರಗಳಿಗೆ ಚಿತ್ರಮಂದಿರದ ಮಾಲೀಕರು ದರ ಹೆಚ್ಚಿಗೆ ಮಾಡುತ್ತಿದ್ದರು. ಅಲ್ಲದೆ, ಬಿಡುಗಡೆಯ ಹಿಂದಿನ ದಿನದ ರಾತ್ರಿಯೇ ಚಿತ್ರದ ಪ್ರದರ್ಶನವನ್ನು ನಡೆಸುತ್ತಿದ್ದರು.

  ಆದರೆ, ಇನ್ನು ಮುಂದೆ ಯಾವುದೇ ಸ್ಟಾರ್ ನಟರ ಸಿನಿಮಾಗಳಿಗೆ ಆಗಲಿ ಟಿಕೆಟ್ ದರ ಏರಿಕೆ ಮಾಡಬಾರದು ಎಂದು ವಿತರಕರು ಹಾಗೂ ಪ್ರದರ್ಶಕರು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿದ್ದಾರೆ.

  ವಿತರಕರು ಹಾಗೂ ಪ್ರದರ್ಶಕರ ನಿರ್ಧಾರ ಮೆಚ್ಚುವಂತೆ ಇದೆ. ಆದರೆ, ಇದು ಯಾವ ಮಟ್ಟಿಗೆ ಸರಿಯಾಗಿ ಅನ್ವಯ ಆಗಲಿದೆ ಎನ್ನುವುದನ್ನು ಕಾದು ನೋಡಬೇಕು.

  English summary
  Kannada distributors and theater owners decided to not hike movie ticket price for star movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X