ಕುಡಿದು ರಂಪಾಟ ಆರೋಪ: ಸ್ಪಷ್ಟನೆ ಕೊಟ್ಟ ದಿವ್ಯಾ ಸುರೇಶ್

ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ವಿಡಿಯೋ ಒಂದು ಎರಡು ದಿನದ ಹಿಂದೆ ಮಾಧ್ಯಮಗಳಲ್ಲಿ ಹರಿದಾಡಿತ್ತು.

ದಿವ್ಯಾ ಸುರೇಶ್, ಕುಡಿದ ಮತ್ತಿನಲ್ಲಿ ಎಂಜಿ ರೋಡಿನಲ್ಲಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಮಾಧ್ಯಮದವರ ಮೇಲೂ ಗರಂ ಆಗಿ ಕ್ಯಾಮೆರಾ ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇಂದು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ನಟಿ ದಿವ್ಯಾ ಸುರೇಶ್.

ಕುಡಿದು ರಂಪಾಟ ಮಾಡಿದೆ ಎಂಬುದು ಸುಳ್ಳು, ನಾನು ಹೋಗಿದ್ದಿದ್ದು 'ರಾಸ್ತಾ ಕೆಫೆ'ಗೆ ರಾಸ್ತಾ ರೆಸ್ಟೊರೆಂಟ್‌ಗೆ ಅಲ್ಲ. ನಾನು ಕುಡಿದಿದ್ದೆ ಎನ್ನಲು ಏನಾದರೂ ಸಾಕ್ಷ್ಯ ಇದೆಯಾ ಅವರ ಬಳಿ? ಹೋಗಲಿ ನಾನು ಅಸಭ್ಯವಾಗಿ ಏನಾದರೂ ನಡೆದುಕೊಂಡೆನಾ? ಎಂದು ಕೋಪದಿಂದಲೇ ದಿವ್ಯಾ ಸುರೇಶ್ ಪ್ರಶ್ನೆ ಮಾಡಿದ್ದಾರೆ.

Divya Suresh Gives Clarification About December 29th MG Road Incident
ನಾನು ಹಾಗೂ ಗೆಳೆಯರು ರಾತ್ರಿ 9 ಗಂಟೆ ಸುಮಾರಿಗೆ ರಾಸ್ತಾ ಕೆಫೆ ಬಿಟ್ಟು ಕೆಳಗೆ ಬಂದೆವು, ನಾನು ರಾಸ್ತಾಗೆ ಪೇಮೆಂಟ್ ಮಾಡಿರುವ ದಾಖಲೆ ನನ್ನ ಬಳಿ ಇದೆ. ನಾನು ಎಷ್ಟು ಸಮಯಕ್ಕೆ ಬಿಲ್ ಪಾವತಿಸಿದೆ ಎಂಬುದರ ದಾಖಲೆ ಸಹ ಇದೆ. ಅದೇ ವೇಳೆಗೆ ಪೊಲೀಸರು ಬಂದು ಹೊರಡಲು ಹೇಳಿದರು. ನಾವು ಆ ವೇಳೆಗಾಗಲೆ ಕ್ಯಾಬ್ ಬುಕ್ ಮಾಡಿಕೊಂಡಿದ್ದೆವು. ಅದನ್ನೇ ನಾವು ಪೊಲೀಸರಿಗೂ ಮನದಟ್ಟು ಮಾಡುತ್ತಿದ್ದೆವು, ಅವರೂ ಸಹ ಹೊರಡಿ ಎಂದರು, ಅಷ್ಟರಲ್ಲಿ ಕೆಲವರು ಕ್ಯಾಮೆರಾ ಹಿಡಿದು ನಮ್ಮ ಮೇಲೆ ಮುಗಿಬಿದ್ದರು'' ಎಂದಿದ್ದಾರೆ ದಿವ್ಯಾ ಸುರೇಶ್.

ನಾನು ಒಬ್ಬ ನಟಿ, ನನಗೆ ಭಯ ಇದ್ದೇ ಇರುತ್ತದೆ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು. ನನಗೆ ಕೋಪ ಬಂದಿದ್ದು ನನ್ನ ವಿಡಿಯೋ ಮಾಡಿದ್ದಕ್ಕೆ. ಅಲ್ಲಿ ಎಲ್ಲವೂ ಸಾಮಾನ್ಯವಾಗಿ ಇದೆ ಹಾಗಿದ್ದರೆ ಸುಖಾ ಸುಮ್ಮನೆ ಏಕೆ ಮೊಬೈಲ್ ತೆಗೆದುಕೊಂಡು ವಿಡಿಯೋ ಮಾಡಬೇಕು ಎಂದು ದಿವ್ಯಾ ಸುರೇಶ್ ಪ್ರಶ್ನೆ ಮಾಡಿದರು.

ನಡೆದಿದ್ದೇನು?

ಬಿಗ್‍ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್ ಡಿಸೆಂಬರ್ 29ರಂದು ಎಂಜಿ ರಸ್ತೆಯಲ್ಲಿ ಸ್ನೇಹಿತರೊಂದಿಗೆ ಇದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಗುಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಕರ್ಫ್ಯೂ ಜಾರಿಯಾದ ಸಂದರ್ಭದಲ್ಲಿ ಯಾರೂ ಹೊರಗೆ ಬರುವಂತಿಲ್ಲವೆಂದು ಕಠಿಣ ಆದೇಶವನ್ನು ಜಾರಿ ಮಾಡಲಾಗಿದೆ. ಹೀಗಾಗಿ ಪೊಲೀಸರು ಕೂಡ ಕಟ್ಟೆಚ್ಚರ ವಹಿಸಿದ್ದಾರೆ. ಹೀಗಿದ್ದರೂ ಕನ್ನಡ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಎಂಜಿ ರಸ್ತೆಯಲ್ಲಿ ಸ್ನೇಹಿತರೊಂದಿಗಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ದಿವ್ಯ ಸುರೇಶ್ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಸ್ಪಷ್ಟನೆ ನೀಡಿರುವ ದಿವ್ಯಾ ಸುರೇಶ್ ತಾವು ಕುಡಿದಿರಲಿಲ್ಲ ಹಾಗೂ ಯಾರೊಟ್ಟಿಗೂ ಅಸಭ್ಯವಾಗಿ ವರ್ತಿಸಲಿಲ್ಲ ಎಂದಿದ್ದಾರೆ.

More from Filmibeat

English summary
Former Bigg Boss contestant Divya Suresh gives clarification about December 29th incident which happened in MG Road. Some media alleged that Divya Suresh miss behaved with police in influence of alcohol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X