'ಹುಲಿರಾಯ' ಚೆಲುವೆಗೆ ಒಲಿದು ಬಂತು ದೊಡ್ಡ ಅವಕಾಶ!

By Naveen

Recommended Video

ಹುಲಿರಾಯ ಸಿನಿಮಾದ ನಟಿ ದಿವ್ಯ ಉರುಡುಗಾಗೆ ಬಂತು ಅದೃಷ್ಟ | Filmibeat Kannada

'ಹುಲಿರಾಯ' ಸಿನಿಮಾ ನೋಡಿದವರಿಗೆ ಅದರಲ್ಲಿ ತುಂಬ ಇಷ್ಟ ಆಗುವ ಅಂಶಗಳಲ್ಲಿ ನಾಯಕಿ ಕೂಡ ಒಬ್ಬರು. ಹುಲಿರಾಯನಾಗಿ ನಟಿಸಿರುವ ನಾಯಕ ಬಾಲು ನಾಗೇಂದ್ರ ಜೊತೆ ಜಿಂಕೆಯಂತೆ ಕಾಣಿಸಿಕೊಂಡಿದ್ದು ನಟಿ ದಿವ್ಯ ಉರುಡುಗ. 'ಹುಲಿರಾಯ' ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದರು ಕೂಡ ದಿವ್ಯ ಸಿನಿಮಾ ರಿಲೀಸ್ ಆಗುವುದಕ್ಕೂ ಮುಂಚೆಯೇ ಫೇಮಸ್ ಆಗಿ ಬಿಟ್ಟಿದ್ದರು.

'ಹುಲಿರಾಯ' ಸಿನಿಮಾದ ನಂತರ ದಿವ್ಯ ಈಗ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಎರಡನೇ ಚಿತ್ರದಲ್ಲಿಯೇ ದೊಡ್ಡ ಅವಕಾಶ ಅವರ ಪಾಲಾಗಿದೆ. ಈ ಚಿತ್ರದಲ್ಲಿಯೂ ಬಜಾರಿ ಹುಡುಗಿಯಾಗಿ ಅವರು ನಟಿಸುತ್ತಿದ್ದಾರೆ. ಈ ವರ್ಷ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಎಂಟ್ರಿಯಾಗಿರುವ ಈ ನಟಿ ಈಗ ಎರಡ್ಮೂರು ಸಿನಿಮಾದಲ್ಲಿ ಬಿಜಿ ಇದ್ದಾರೆ. ಅಂದಹಾಗೆ, ತಮ್ಮ ಹೊಸ ಚಿತ್ರದ ಬಗ್ಗೆ ನಟಿ ದಿವ್ಯ ಉರುಡುಗ 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. ಮುಂದೆ ಓದಿ...

'ಧ್ವಜ' ಸಿನಿಮಾ

'ಧ್ವಜ' ಸಿನಿಮಾ

'ಹುಲಿರಾಯ' ನಂತರ ದಿವ್ಯ ಈಗ 'ಧ್ವಜ' ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಪೋಸ್ಟರ್ ಮತ್ತು ಚಿತ್ರೀಕರಣದ ಫೋಟೋವನ್ನು ಅವರ ಫೇಸ್ ಬುಕ್ ಖಾತೆಯಲ್ಲಿ ದಿವ್ಯ ಹಂಚಿಕೊಂಡಿದ್ದಾರೆ.

ಪ್ರಿಯಾಮಣಿ ಜೊತೆ ದಿವ್ಯ

ಪ್ರಿಯಾಮಣಿ ಜೊತೆ ದಿವ್ಯ

ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಅವರ 'ಧ್ವಜ' ಚಿತ್ರದಲ್ಲಿ ದಿವ್ಯ ಕೂಡ ನಟಿಸುತ್ತಿದ್ದಾರೆ. ರವಿ ಗೌಡ ಚಿತ್ರದ ನಾಯಕ ಆಗಿದ್ದಾರೆ. ರವಿ ನಟ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಮೊಟ್ಟೆ ಮಹಾಲಕ್ಷ್ಮಿ

ಮೊಟ್ಟೆ ಮಹಾಲಕ್ಷ್ಮಿ

ದಿವ್ಯ ಈ ಚಿತ್ರದಲ್ಲಿಯೂ ಬಜಾರಿ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. 'ಧ್ವಜ' ಸಿನಿಮಾದಲ್ಲಿ ಅವರ ಪಾತ್ರದ ಹೆಸರು ಮೊಟ್ಟೆ ಮಹಾಲಕ್ಷ್ಮಿ ಅಂತೆ.

ಅಶೋಕ್ ಕಶ್ಯಪ್ ನಿರ್ದೇಶನ

ಅಶೋಕ್ ಕಶ್ಯಪ್ ನಿರ್ದೇಶನ

'ಧ್ವಜ' ಚಿತ್ರವನ್ನು ಕನ್ನಡದ ಜನಪ್ರಿಯ ಸಿನಿಮಾಟೋಗ್ರಾಫರ್ ಆಗಿರುವ ಅಶೋಕ್ ಕಶ್ಯಪ್ ನಿರ್ದೇಶನ ಮಾಡುತ್ತಿದ್ದಾರೆ. 'ಧ್ಜಜ' ಒಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾವಾಗಿದೆ.

ಜನವರಿ ಅಂತ್ಯಕ್ಕೆ ರಿಲೀಸ್

ಜನವರಿ ಅಂತ್ಯಕ್ಕೆ ರಿಲೀಸ್

ಈಗಾಗಲೇ 'ಧ್ವಜ' ಚಿತ್ರದ ಚಿತ್ರೀಕರಣ ಮುಗಿದಿದೆ. ಸಿನಿಮಾ ಮುಂದಿನ ವರ್ಷದ ಜನವರಿ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ದಿವ್ಯ ಸಿನಿಮಾಗಳು

ದಿವ್ಯ ಸಿನಿಮಾಗಳು

'ಧ್ಜಜ' ಸಿನಿಮಾದ ಜೊತೆಗೆ 'ಫೇಸ್ ಟು ಫೇಸ್' ಎಂಬ ಸಿನಿಮಾದಲ್ಲಿಯೂ ನಟಿ ದಿವ್ಯ ಉರುಡುಗ ಸದ್ಯ ನಟಿಸುತ್ತಿದ್ದಾರೆ.

More from Filmibeat

English summary
Kannada movie 'Huliraya' fame actress Divya Uruduga playing an important role with actress Priyamani in new kannada movie Dhwaja. The movie directed by cinematographer Ashok Cashyap.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X