For Quick Alerts
  ALLOW NOTIFICATIONS  
  For Daily Alerts

  ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದೆ 'ಡಿ.ಕೆ.ಬೋಸ್'

  |

  ಶೀರ್ಷಿಕೆ ಮಾತ್ರದಿಂದಲೇ ಕುತೂಹಲ ಕೆರಳಿಸಿರುವ ಸಿನಿಮಾ 'ಡಿ.ಕೆ.ಬೋಸ್'. ಒಂದು ಡೈಮಂಡ್ ಮತ್ತು ಇಬ್ಬರು ಕಳ್ಳರು ಸುತ್ತ ನಡೆಯುವ ಕಥೆಯೇ 'ಡಿ.ಕೆ.ಬೋಸ್'.

  ಸಂತೋಷ್ ಮಹಂತೇಶ್ ಹಾಗೂ ನರಸಿಂಹಮೂರ್ತಿ ಅವರು ನಿರ್ಮಿಸಿರುವ 'ಡಿ.ಕೆ.ಬೋಸ್' ಚಿತ್ರದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ 'ಡಿ.ಕೆ.ಬೋಸ್' ಮಾರ್ಚ್ 15 ರಂದು ತೆರೆಗೆ ಬರಲಿದೆ.

  ಡೈಮಂಡ್ ಹುಡುಕಿಕೊಂಡು ಮಂಗಳೂರಿಗೆ ಇಬ್ಬರು ಕಳ್ಳರು ಬರುತ್ತಾರೆ. ಅವರು ಬಂದ ಮೇಲೆ ಅಲ್ಲಿ ಏನೇನು ಘಟನೆಗಳು ನಡೆಯುತ್ತವೆ ಎನ್ನುವ ಕಥಾಹಂದರವುಳ್ಳ ಈ ಚಿತ್ರವನ್ನು ನಿರ್ಮಾಪಕರಲೊಬ್ಬರಾದ ಸಂತೋಷ್ ಮಹಂತೇಶ್ ಅವರ ಸಹೋದರ ಸಂದೀಪ್ ಮಹಂತೇಶ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಮಂಗಳೂರು ಸುತ್ತಮುತ್ತ 21 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

  ಎರಡು ಹಾಡುಗಳಿರುವ ಈ ಚಿತ್ರಕ್ಕೆ ಡೊಲ್ವಿನ್ ಸಂಗೀತ ನೀಡಿದ್ದಾರೆ. ಉದಯ್ ಬಲ್ಲಾಳ್ ಛಾಯಾಗ್ರಹಣ ಹಾಗೂ ಸುರೇಶ್ ಆರ್ಮುಗಂ ಸಂಕಲನವಿದೆ. ಈ ಚಿತ್ರದ ತಾರಾಬಳಗದಲ್ಲಿ ಪೃಥ್ವಿ ಅಂಬರ್, ಭೋಜರಾಜ್ ವಾಮಂಜೂರ್, ಶೋಭ್ ರಾಜ್ ಪಾವೂರ್, ರಿಷ ನಿಜಗುಂದ್, ರಘು ಪಾಂಡೇಶ್ವರ್ ಮುಂತಾದವರಿದ್ದಾರೆ.

  English summary
  DK Bose movie to release on March 15th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X