For Quick Alerts
  ALLOW NOTIFICATIONS  
  For Daily Alerts

  'ಚಂಬಲ್' ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಡಿ.ಕೆ.ರವಿ ತಾಯಿ.!

  |

  Recommended Video

  Chambal movie: ಚಂಬಲ್ ಚಿತ್ರತಂಡದ ವಿರುದ್ಧ ದೂರು ನೀಡಿದ ಗೌರಮ್ಮ | FILMIBEAT KANNADA

  ನೀನಾಸಂ ಸತೀಶ್ ಅಭಿನಯಿಸಿರುವ ಜೇಕಬ್ ವರ್ಗೀಸ್ ನಿರ್ದೇಶನದ 'ಚಂಬಲ್' ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ ಬಿಡುಗಡೆಗೊಂಡಿತ್ತು. ದಿಟ್ಟ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ನೀನಾಸಂ ಸತೀಶ್ ನಟನೆಯ 'ಚಂಬಲ್' ಚಿತ್ರದ ಟ್ರೈಲರ್ ನ ಯೂಟ್ಯೂಬ್ ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 'ಚಂಬಲ್' ಚಿತ್ರದ ಟ್ರೈಲರ್ ಇದೀಗ ವಿವಾದಕ್ಕೆ ಕಾರಣವಾಗಿದೆ. 'ಚಂಬಲ್' ಚಿತ್ರದ ಕಥೆ ದಿವಂಗತ ಐಎಎಸ್ ಆಫೀಸರ್ ಡಿ.ಕೆ.ರವಿ ಅವರ ಜೀವನಶೈಲಿಯನ್ನೇ ಹೋಲುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  ಹೀಗಾಗಿ ಡಿ.ಕೆ.ರವಿ ಅವರ ತಾಯಿ ಗೌರಮ್ಮ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. 'ಚಂಬಲ್' ಚಿತ್ರತಂಡದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗೌರಮ್ಮ ದೂರು ನೀಡಿದ್ದಾರೆ. ಮುಂದೆ ಓದಿರಿ...

  ದೂರು ಕೊಟ್ಟ ಡಿ.ಕೆ.ರವಿ ತಾಯಿ

  ದೂರು ಕೊಟ್ಟ ಡಿ.ಕೆ.ರವಿ ತಾಯಿ

  ''ಚಂಬಲ್' ಚಿತ್ರದ ಟ್ರೈಲರ್ ನಲ್ಲಿ ನನ್ನ ಮಗನ ಕಥೆಯನ್ನು ನಮ್ಮ ಅನುಮತಿಯಿಲ್ಲದೆ ಚಿತ್ರೀಕರಣ ಮಾಡಲಾಗಿದೆ. ಇದರಿಂದಾಗಿ ಚಿತ್ರ ಬಿಡುಗಡೆಗೂ ಮುನ್ನ ನಾವು ಚಿತ್ರವನ್ನು ವೀಕ್ಷಿಸಬೇಕು'' ಎಂದು ಕೋರಿ ಡಿ.ಕೆ.ರವಿ ತಾಯಿ ಗೌರಮ್ಮ ಫಿಲಂ ಚೇಂಬರ್ ಗೆ ಪತ್ರ ಬರೆದಿದ್ದಾರೆ.

  ಕನ್ನಡ ಚಿತ್ರಗಳಿಗೆ ಅನ್ಯಾಯ: ಕೆರಳಿದ ನೀನಾಸಂ ಸತೀಶ್.!ಕನ್ನಡ ಚಿತ್ರಗಳಿಗೆ ಅನ್ಯಾಯ: ಕೆರಳಿದ ನೀನಾಸಂ ಸತೀಶ್.!

  ರಾಯಲ್ಟಿ ಕೊಡಬೇಕು

  ರಾಯಲ್ಟಿ ಕೊಡಬೇಕು

  ''ಒಂದು ವೇಳೆ 'ಚಂಬಲ್' ಚಿತ್ರದಲ್ಲಿ ನನ್ನ ಮಗನ ಕುರಿತು ಸತ್ಯಕ್ಕೆ ದೂರವಾದ ಅಂಶಗಳು ಇದ್ದಲ್ಲಿ ಚಿತ್ರಕ್ಕೆ ತಡೆ ತರುವ ಬಗ್ಗೆ ಮತ್ತು ನಿರ್ಮಾಪಕ-ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕುಟುಂಬಸ್ಥರಿಗೆ ರಾಯಲ್ಟಿ ಪಾವತಿಸಬೇಕಾಗಿ ಕೋರುತ್ತೇನೆ'' ಎಂದು ತಮ್ಮ ಪತ್ರದಲ್ಲಿ ಗೌರಮ್ಮ ತಿಳಿಸಿದ್ದಾರೆ.

  ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಾರೆ ಮಂಡ್ಯದ ಹುಡುಗ ಸತೀಶ್ ನೀನಾಸಂ!ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಾರೆ ಮಂಡ್ಯದ ಹುಡುಗ ಸತೀಶ್ ನೀನಾಸಂ!

  ಚಿತ್ರತಂಡ ಕೊಟ್ಟಿರುವ ಸ್ಪಷ್ಟನೆ

  ಚಿತ್ರತಂಡ ಕೊಟ್ಟಿರುವ ಸ್ಪಷ್ಟನೆ

  ಹಲವು ನೇರ, ನಿಷ್ಠಾವಂತ, ದಿಟ್ಟ ಅಧಿಕಾರಿಗಳಿಂದ ಸ್ಫೂರ್ತಿ ಪಡೆದು ಚಿತ್ರಕಥೆಯನ್ನು ರಚಿಸಲಾಗಿದೆ. 'ಚಂಬಲ್' ಚಿತ್ರದ ಕಥೆ ಕಾಲ್ಪನಿಕವಾಗಿದ್ದು, ಯಾವುದೇ ವ್ಯಕ್ತಿಯನ್ನು ಹೋಲುವುದಿಲ್ಲ. ಅಲ್ಲದೆ ಈ ಚಿತ್ರದಲ್ಲಿ ಯಾರನ್ನೂ ಕೀಳಾಗಿ ತೋರಿಸಿಲ್ಲ'' ಎಂದು 'ಚಂಬಲ್' ಚಿತ್ರತಂಡ ಸ್ಪಷ್ಟಪಡಿಸಿದೆ.

  ಚಂಬಲ್ ಚಿತ್ರತಂಡದ ಕುರಿತು...

  ಚಂಬಲ್ ಚಿತ್ರತಂಡದ ಕುರಿತು...

  'ಚಂಬಲ್' ಚಿತ್ರದಲ್ಲಿ ನೀನಾಸಂ ಸತೀಶ್, ಸೋನು ಗೌಡ, ಪವನ್ ಕುಮಾರ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ದಿನೇಶ್ ರಾಜ್ ಕುಮಾರ್ ಮತ್ತು ಮ್ಯಾಥ್ಯೂ ವರ್ಗೀಸ್ ಬಂಡವಾಳ ಹಾಕಿರುವ 'ಚಂಬಲ್' ಚಿತ್ರಕ್ಕೆ ಜೇಕಬ್ ವರ್ಗೀಸ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  DK Ravi's mother complaints against Kannada Movie 'Chambal' in KFCC.
  Saturday, February 9, 2019, 14:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X