ಸುದೀಪ್ ಚಿತ್ರಕ್ಕೂ ತಟ್ಟಿದ ಸಚಿವ 'ಡಿಕೆಶಿ' ಐಟಿ ದಾಳಿ ಬಿಸಿ

By Bharath Kumar

ಇಂದನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ, ಕಚೇರಿ ಹಾಗೂ ಅವರಿಗೆ ಸಂಬಂಧಿತ ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ನಿನ್ನೆ (ಆಗಸ್ಟ್ 2) ದಾಳಿ ನಡೆಸಿದ್ದರು. ಅಷ್ಟೆ ಅಲ್ಲದೆ ಡಿಕೆಶಿ ಅವರ ಆಪ್ತರ ನಿವಾಸಗಳ ಮೇಲೆಯೂ ಐಟಿ ದಾಳಿ ಮಾಡಿದ್ದರು. ಆದ್ರೆ, ಈ ದಾಳಿಯಲ್ಲಿ ಹೆಚ್ಚು ಸುದ್ದಿ ಆಗಿದ್ದು ಮಾತ್ರ ಬಿಡದಿ ಬಳಿ ಇರುವ 'ಈಗಲ್ ಟನ್ ರೆಸಾರ್ಟ್'.

ಯಾಕಂದ್ರೆ 'ಈಗಲ್ ಟನ್ ರೆಸಾರ್ಟ್'ನಲ್ಲಿ ಗುಜರಾತ್ ನ ಕಾಂಗ್ರೆಸ್ ಶಾಸಕರು ಬೀಡು ಬಿಟ್ಟಿದ್ದರು. ವಿಶೇಷ ಅಂದ್ರೆ, ಇದೇ ರೆಸಾರ್ಟ್ ನಲ್ಲಿ ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕೂಡ ತಂಗಿದ್ದರು. ಚಿತ್ರವೊಂದರ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಸುದೀಪ್ ಅವರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆದ್ರೆ, ಈ ಚಿತ್ರತಂಡಕ್ಕೆ ಡಿಕೆಶಿ ಐಟಿ ದಾಳಿಯ ಬಿಸಿ ತಟ್ಟಿದೆ.

ಹಾಗಿದ್ರೆ, ಸುದೀಪ್ ಯಾವ ಚಿತ್ರದಲ್ಲಿ ನಟಿಸಲು ಆ ರೆಸಾರ್ಟ್ ಗೆ ಬಂದಿದ್ದರು. ನಂತರ ಶೂಟಿಂಗ್ ನಡೆಯಿತಾ? ಮುಂದೆ ಓದಿ.....

ಚಿತ್ರತಂಡವನ್ನ ಒಳಗೆ ಬಿಡದ ಐಟಿ ಸಿಬ್ಬಂದಿ

ಚಿತ್ರತಂಡವನ್ನ ಒಳಗೆ ಬಿಡದ ಐಟಿ ಸಿಬ್ಬಂದಿ

ಇಂದು ಬೆಳಿಗ್ಗೆ ಈಗಲ್ ಟನ್ ರೆಸಾರ್ಟ್ ನಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಕನ್ನಡ ಮೀಡಿಯಂ ರಾಜು' ಚಿತ್ರದ ಚಿತ್ರೀಕರಣ ನಡೆಯಬೇಕಿತ್ತು. ಹೀಗಾಗಿ, ಚಿತ್ರೀಕರಣಕ್ಕೆಂದು ರೆಸಾರ್ಟ್ ಗೆ ಬಂದ ಚಿತ್ರತಂಡವನ್ನ ಒಳಗೆ ಪ್ರವೇಶಿಸಲು ಐಟಿ ಅಧಿಕಾರಿಗಳು ಆವಕಾಶ ನೀಡಿಲ್ಲ.

ಅರ್ಧ ಗಂಟೆ ಹೊರಗೆ ಕಾದ ಚಿತ್ರತಂಡ

ಅರ್ಧ ಗಂಟೆ ಹೊರಗೆ ಕಾದ ಚಿತ್ರತಂಡ

ಕಿಚ್ಚ ಸುದೀಪ್ ಅವರು ಮೊದಲೇ ರೆಸಾರ್ಟ್ ನಲ್ಲಿ ತಂಗಿದ್ದರು. ಆದ್ರೆ, ಚಿತ್ರತಂಡ ತಾಂತ್ರಿಕ ತಂಡದೊಂದಿಗೆ ಬೆಳಿಗ್ಗೆ ಆಗಮಿಸಿತ್ತು. ಆದ್ರೆ, ಸಚಿವ ಡಿಕೆ ಶಿವಕುಮಾರ್ ಅವರ ಮೇಲಿನ ಐಟಿ ದಾಳಿ ಹಿನ್ನೆಲೆ ಚಿತ್ರತಂಡದವರಿಗೆ ಪ್ರವೇಶ ನೀಡಲಿಲ್ಲ. ಹೀಗಾಗಿ, ಸುಮಾರು ಅರ್ಧ ಗಂಟೆ ಸಿನಿಮಾ ಸಿಬ್ಬಂದಿ ಹೊರಗೆ ಕಾಯುವಂತಾಗಿತ್ತು.

ಚಿತ್ರೀಕರಣಕ್ಕೆ ವಿಳಂಬವಾಯಿತು

ಚಿತ್ರೀಕರಣಕ್ಕೆ ವಿಳಂಬವಾಯಿತು

ಅರ್ಧಗಂಟೆಯ ನಂತರ ಚಿತ್ರತಂಡವನ್ನ ಒಳಗೆ ಬಿಟ್ಟ ಐಟಿ ಅಧಿಕಾರಿಗಳು ಶೂಟಿಂಗ್ ಮಾಡಲು ಅನುಮತಿ ನೀಡಿರಲಿಲ್ಲ. ತದ ನಂತರ ಮಾತುಕತೆಯ ನಂತರ ಚಿತ್ರೀಕರಣ ಮಾಡಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಗಂಟೆಗಳ ಕಾಲ 'ಕನ್ನಡ ಮಿಡೀಯಂ ರಾಜು' ಚಿತ್ರೀಕರಣಕ್ಕೆ ವಿಳಂಬವಾಯಿತು.

'ಕನ್ನಡ ಮೀಡಿಯಂ ರಾಜು' ಚಿತ್ರದಲ್ಲಿ ಕಿಚ್ಚ

'ಕನ್ನಡ ಮೀಡಿಯಂ ರಾಜು' ಚಿತ್ರದಲ್ಲಿ ಕಿಚ್ಚ

5 ದಿನಗಳ ಕಾಲ 'ಕನ್ನಡ ಮೀಡಿಯಂ ರಾಜು' ಚಿತ್ರೀಕರಣದಲ್ಲಿ ಸುದೀಪ್ ನಟಿಸಲಿದ್ದಾರಂತೆ. 'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್, ಅವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಅಭಿನಯಿಸುತ್ತಿರುವ ಈ ಚಿತ್ರವನ್ನ ನರೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ 'ಈಗಲ್ ಟಮ್ ರೆಸಾರ್ಟ್'ನಲ್ಲಿ ನಡೆಯುತ್ತಿದೆ.

More from Filmibeat

English summary
In a strange way Sandalwood star Sudeep had to face problem due to the ongoing income tax raids on energy minister DK Shivakumar. Becuse of Kannada Medium Raju Shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X