ಶಿವರಾಜ್ ಕುಮಾರ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಹಠಾತ್ ಭೇಟಿ

ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವರಾಜ್ ಕುಮಾರ್ ಅವರು ಇಂದು ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಹಠಾತ್ ಭೇಟಿ ನೀಡಿದ್ದಾರೆ.

Recommended Video

DK Shivakumar meets Shivarajkumar | Filmibeat Kannada

ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವೆಂದು ಹೇಳಲಾಗುತ್ತಿದ್ದು, ಇದೊಂದು ಸೌಜನ್ಯದ ಭೇಟಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಶಿವರಾಜ್‌ ಕುಮಾರ್

ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಶಿವರಾಜ್‌ ಕುಮಾರ್

ಶಿವರಾಜ್‌ ಕುಮಾರ್ ನಿವಾಸವಿರುವ ನಾಗವಾರಕ್ಕೆ ಮದುವೆ ಸಮಾರಂಭವೊಂದಕ್ಕೆ ಡಿ.ಕೆ.ಶಿವಕುಮಾರ್ ಬಂದಿದ್ದರಂತೆ. ಅಲ್ಲಿಯೇ ರಸ್ತೆಯಲ್ಲಿ ಶಿವರಾಜ್‌ ಕುಮಾರ್ ಕ್ರಿಕೆಟ್ ಆಡುತ್ತಿದ್ದುದನ್ನು ನೋಡಿ ಭೇಟಿ ಆಗಲು ಬಂದರಂತೆ ಡಿ.ಕೆ.ಶಿವಕುಮಾರ್.

ಅದ್ಧೂರಿಯಾಗಿ ಪದಗ್ರಹಣ ಮಾಡಿದ್ದಾರೆ

ಅದ್ಧೂರಿಯಾಗಿ ಪದಗ್ರಹಣ ಮಾಡಿದ್ದಾರೆ

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಅದ್ಧೂರಿಯಾಗಿ ಪದಗ್ರಹಣ ಮಾಡಿದ್ದಾರೆ. ಹಾಗಾಗಿಯೇ ಸಹಕಾರ ಕೋರಲು ಶಿವರಾಜ್ ಕುಮಾರ್ ನಿವಾಸಕ್ಕೆ ಡಿಕೆಶಿ ಭೇಟಿ ನೀಡಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ರಾಜ್‌ಕುಮಾರ್ ಅವರನ್ನು ಭೇಟಿ ಆಗುವ ಸಂಪ್ರದಾಯ ಇತ್ತು

ರಾಜ್‌ಕುಮಾರ್ ಅವರನ್ನು ಭೇಟಿ ಆಗುವ ಸಂಪ್ರದಾಯ ಇತ್ತು

ರಾಜ್‌ಕುಮಾರ್ ಅವರು ಇದ್ದಾಗ ಯಾರೇ ಸಿಎಂ ಆಗಲಿ ರಾಜ್‌ಕುಮಾರ್ ಅವರನ್ನು ಭೇಟಿಯಾಗುವ ಸಂಪ್ರದಾಯ ಇತ್ತು. ರಾಜ್‌ಕುಮಾರ್ ಅವರು ಕಾಲವಾದ ಬಳಿಕ ಕೆಲವು ಸಿಎಂಗಳು ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ರಾಹುಲ್ ಗಾಂಧಿ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು

ರಾಹುಲ್ ಗಾಂಧಿ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು

ಕಳೆದ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ರಾಹುಲ್ ಗಾಂಧಿ ಮಾತ್ರವೇ ಅಲ್ಲದೆ ಹಲವು ಬಿಜೆಪಿ ನಾಯಕರು ಸಹ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಆಗ ಸಿದ್ದರಾಮಯ್ಯ ಸಹ ಹಾಜರಿದ್ದರು.

ಎಲ್ಲಾ ಪಕ್ಷದಲ್ಲೂ ಗೆಳೆಯರನ್ನು ಹೊಂದಿರುವ ಶಿವರಾಜ್‌ ಕುಮಾರ್

ಎಲ್ಲಾ ಪಕ್ಷದಲ್ಲೂ ಗೆಳೆಯರನ್ನು ಹೊಂದಿರುವ ಶಿವರಾಜ್‌ ಕುಮಾರ್

ಗೀತಾ ಶಿವರಾಜ್ ಕುಮಾರ್ ಅವರು ಜೆಡಿಎಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಆದರೆ ಜಯಶಾಲಿ ಆಗಿರಲಿಲ್ಲ. ಆಗ ಶಿವರಾಜ್ ಕುಮಾರ್ ಅವರು ಗೀತಾ ಅವರ ಪರ ಪ್ರಚಾರ ಮಾಡಿದ್ದರು. ಶಿವರಾಜ್ ಕುಮಾರ್ ಅವರಿಗೆ ಎಲ್ಲ ಪಕ್ಷದ ಗೆಳೆಯರು ಇದ್ದಾರೆ.

More from Filmibeat

English summary
KPCC president DK Shivakumar visited Shiva Rajkumar's house. DKS told it is not a political visit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X