ಇದು ಪೈಲ್ವಾನ್-ಕುರುಕ್ಷೇತ್ರ ಯುದ್ಧವಲ್ಲ: ಮುನಿರತ್ನ

ಸ್ಯಾಂಡಲ್ ವುಡ್ ನಲ್ಲಿ ಆಗಸ್ಟ್ ತಿಂಗಳು ಬಾಕ್ಸ್ ಆಫೀಸ್ ವಾರ್ ಗೆ ಸಜ್ಜಾಗಿದೆ. ಚಂದನವನದ ಬಿಗ್ ಸ್ಟಾರ್ಸ್ ನ ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಕಾಣುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತು ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರುತ್ತಿದೆ.

ಮಾಜಿ ಗೆಳೆಯರ ಬಹು ನಿರೀಕ್ಷೆಯ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವುದು ಈಗಾಗಲೆ ಫ್ಯಾನ್ಸ್ ವಾರ್ ಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಎರಡು ಸಿನಿಮಾಗಳು ರಿಲೀಸ್ ಆಗುತ್ತಿರುವುದುದನ್ನ ಬಿಗ್ ವಾರ್ ಎಂತಲೆ ಹೇಳಲಾಗುತ್ತಿದೆ. ಎರಡು ಸಿನಿಮಾಗಳ ನಡುವೆ ದೊಡ್ಡ ಫೈಟ್ ನಡೆಯುಲಿದೆ ಎಂತೆಲ್ಲ ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ನಿರ್ಮಾಪಕ ಮುನಿರತ್ನ ಮಾತನಾಡಿದ್ದಾರೆ.

"ಪೈಲ್ವಾನ್ ಮತ್ತು ಕುರುಕ್ಷೇತ್ರ ಒಟ್ಟಿಗೆ ರಿಲೀಸ್ ಆಗುತ್ತಿರುವುದನ್ನು ಯುದ್ಧ ಎಂದು ಭಾವಿಸಬೇಡಿ. ಎರಡು ಕನ್ನಡ ಸಿನಿಮಾಗಳೆ. ನಾವೆಲ್ಲರು ಒಂದೇ ಮನೆಯವರು, ಒಂದೇ ತಾಯಿಯ ಮಕ್ಕಳು" ಎಂದು ಹೇಳಿದ್ದಾರೆ.

Do not assume that the release of Pailwan and Kurukshetra together is a war

"ಪೈಲ್ವಾನ್ ಸಿನಿಮಾ ರಿಲೀಸ್ ಆಗುವುದರಿಂದ ಏನು ತೊಂದರೆ ಆಗುವುದಿಲ್ಲ. ಇಬ್ಬರು ಸ್ಟಾರ್ಸ್ ಗಳ ಸಿನಿಮಾ ರಿಲೀಸ್ ಆದ್ರೂ ಏನು ಆಗಲ್ಲ. ಈ ಇಬ್ಬರಿಗೂ ಅವರದೇ ಆದ ಅಭಿಮಾನಿ ದೇವರುಗಳಿದ್ದಾರೆ" ಎಂದು ಮುನಿರತ್ನ ಹೇಳಿದ್ದಾರೆ.

ಯಾವುದೆ ಕಾರಣಕ್ಕು 'ಕುರುಕ್ಷೇತ್ರ' ರಿಲೀಸ್ ಡೇಟನ್ನು ಬದಲಾಯಿಸುವ ಮಾತೆ ಇಲ್ಲ ಎಂದು ನಿರ್ಮಾಪಕ ಮುನಿರತ್ನ ಹೇಳಿದ್ದಾರೆ. ಮತ್ತೊಂದೆಡೆ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಕೂಡ ಆಗಸ್ಟ್ 8ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ. 'ಕುರುಕ್ಷೇತ್ರ' ಸಿನಿಮಾ ಆಗಸ್ಟ್ 9ಕ್ಕೆ ಪ್ರಪಂಚದಾದ್ಯಂತ ತೆರೆಗೆ ಬರುತ್ತಿದೆ.

More from Filmibeat

English summary
Do not assume that the release of Pailwan and Kurukshetra together is a war said produser Muniratna. Darshan starrer kurukshetra and sudeep starrer pailwan are all set to released in august.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X