twitter
    For Quick Alerts
    ALLOW NOTIFICATIONS  
    For Daily Alerts

    ಮದ್ಯ ಕೊಳ್ಳಲು ಹುಡುಗಿಯರ ಸಾಲು: ಗೇಲಿ ಮಾಡಿದವರಿಗೆ ಹರ್ಷಿಕಾ ಪೂಣಚ್ಚ ಚಾಟಿ

    |

    ಲಾಕ್‌ಡೌನ್‌ನಿಂದಾಗಿ ಮಚ್ಚಲ್ಪಟ್ಟಿದ್ದ ಮದ್ಯದಂಗಡಿಗಳನ್ನು ಕೆಲ ದಿನಗಳ ಹಿಂದೆ ತೆರೆಯಲು ರಾಜ್ಯ ಸರ್ಕಾರ ಆದೇಶ ನೀಡಿತು. ಅದರಂತೆ ಮದ್ಯ ಪ್ರಿಯರು ಮುಗಿಬಿದ್ದು ಮದ್ಯ ಖರೀದಿ ಮಾಡಿದರು. ಅದರಲ್ಲಿ ಯುವತಿಯರು, ಮಹಿಳೆಯರೂ ಸೇರಿದ್ದರು.

    Recommended Video

    ದಯವಿಟ್ಟು ಇದನ್ನೆಲ್ಲಾ ಕಡಿಮೆಮಾಡಿ ಅಂದ್ರು ಹರ್ಷಿಕಾ |

    ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮದ್ಯದಂಗಡಿಗಳ ಮುಂದೆ ಯುವತಿಯರು, ಮಹಿಳೆಯರು ಮದ್ಯಕ್ಕಾಗಿ ಸಾಲಿನಲ್ಲಿ ನಿಂತಿದ್ದರು. ಇದರ ವಿಡಿಯೋ, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಹಿಳೆಯರು ಕುಡಿತಕ್ಕೆ ಹಾತೊರೆಯುತ್ತಿದ್ದಾರೆಂದು ಗೇಲಿ ಮಾಡಲಾಗಿತ್ತು.

    ಹೀಗೆ ಮಹಿಳೆಯರನ್ನು ಗೇಲಿ ಮಾಡಿದ ಬಗ್ಗೆ ಆಕ್ಷೇಪಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದ್ದವು. ಈ ಆಕ್ಷೇಪದ ದನಿಗೆ ನಟಿ ಹರ್ಷಿಕಾ ಪೂಣಚ್ಚ ಸಹ ತಮ್ಮ ದನಿಯನ್ನು ಸೇರಿಸಿದ್ದು, ಮದ್ಯ ಖರೀದಿಸಲು ಸಾಲಿನಲ್ಲಿ ನಿಂತ ಮಹಿಳೆಯರನ್ನು ಗೇಲಿ ಮಾಡುವ ಕ್ರಮ ಸ್ವಲ್ಪವೂ ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

    ಮಹಿಳೆಯರೆಂಬ ತಾರತಮ್ಯ ಬೇಡ

    ಮಹಿಳೆಯರೆಂಬ ತಾರತಮ್ಯ ಬೇಡ

    'ಕನ್ನಡ ಫಿಲ್ಮೀಬೀಟ್‌' ಫೇಸ್‌ಬುಕ್ ಪೇಜ್‌ನ ಲೈವ್‌ನಲ್ಲಿ ಮಾತನಾಡಿದ ಅವರು, ಮದ್ಯ ಎಲ್ಲರಿಗೂ ಕೆಟ್ಟದ್ದೇ. ಆದರೆ 'ಮಹಿಳೆಯರು' ಕ್ಯೂ ನಲ್ಲಿ ನಿಂತಿದ್ದಾರೆ, 'ಮಹಿಳೆಯರು' ಕುಡಿಯುತ್ತಿದ್ದಾರೆ ಎಂದು ಬೇರ್ಪಡಿಸಿ ಅಥವಾ ತಾರತಮ್ಯದ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದಿದ್ದಾರೆ.

    ಮದ್ಯ ಎಲ್ಲರಿಗೂ ಕೆಟ್ಟದ್ದೇ: ಹರ್ಷಿಕಾ

    ಮದ್ಯ ಎಲ್ಲರಿಗೂ ಕೆಟ್ಟದ್ದೇ: ಹರ್ಷಿಕಾ

    'ಮಹಿಳೆಯರು ಕುಡಿಯುತ್ತಿದ್ದಾರೆ ನೋಡಿ' ಎಂದು ಚಿತ್ರಗಳನ್ನು ಹಂಚಿಕೊಳ್ಳುವ ಮಂದಿ ಹೆಣ್ತನವನ್ನು ಗೇಲಿ ಮಾಡಿದಂತೆಯೇ. ಕುಡಿತ ತಪ್ಪು ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ಅದನ್ನು ಪುರುಷ, ಮಹಿಳೆ ಇಬ್ಬರಿಗೂ ತಿಳಿಹೇಳಿ, ಅದನ್ನು ಬಿಟ್ಟು ಮಹಿಳೆಯರು ಕುಡಿಯುವುದು ಮಹಾಪರಾಧ ಎಂಬಂತೆ ಬಿಂಬಿಸಬೇಡಿ. ಕುಡಿತ ಎಲ್ಲರಿಗೂ ತಪ್ಪು ಎಂಬುದು ನನ್ನ ಅಭಿಪ್ರಾಯ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

    ಚಿತ್ರಗಳು-ವಿಡಿಯೋಗಳು ಹರಿದಾಡಿದ್ದವು

    ಚಿತ್ರಗಳು-ವಿಡಿಯೋಗಳು ಹರಿದಾಡಿದ್ದವು

    ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ಬಾರ್ ತೆರೆದ ದಿನ ಮಹಿಳೆಯರು ಕ್ಯೂ ನಲ್ಲಿ ನಿಂತಿದ್ದ ಚಿತ್ರಗಳು, ವಿಡಿಯೋಗಳು ವಿಪರೀತ ಎಂಬಷ್ಟು ಹರಿದಾಡಿದವು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಷೇಪ ವ್ಯಕ್ತವಾಗಿತ್ತು.

    ರಾಮ್‌ಗೋಪಾಲ್ ವರ್ಮಾ ಸಹ ಶೇರ್ ಮಾಡಿದ್ದರು

    ರಾಮ್‌ಗೋಪಾಲ್ ವರ್ಮಾ ಸಹ ಶೇರ್ ಮಾಡಿದ್ದರು

    ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಸಹ ಯುವತಿಯರು ಮದ್ಯ ಖರಿದಿಸಲು ಸಾಲಿನಲ್ಲಿ ನಿಂತಿರುವ ವಿಡಿಯೋ ಟ್ವೀಟ್ ಮಾಡಿ, ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದ್ದರು. ನಂತರ ಆ ಬಗ್ಗೆ ಸ್ಪಷ್ಟನೆ ನೀಡಿದರು.

    English summary
    Actress Harshika Poonacha express unhappy about people posting photos videos of women standing in queue front of liquor shop.
    Saturday, May 9, 2020, 13:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X