For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ಸಿನಿಮಾಗಳನ್ನು ತಲೆ ಮೇಲೆ ಹೊತ್ತು ತಿರುಗಬೇಡಿ: ಶಶಾಂಕ್

  |

  ನಿರ್ದೇಶಕ ಶಶಾಂಕ್ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಪ್ರಕಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಡಬ್ಬಿಂಗ್ ಸಿನಿಮಾ ಬಗ್ಗೆ ಶಶಾಂಕ್ ಹಾಕಿದ್ದ ಪೋಸ್ಟ್‌ಗೆ ವಿರೋಧ ವ್ಯಕ್ತವಾಗಿತ್ತು. ಆಗ ಎದ್ದಿದ್ದ ಪ್ರಶ್ನೆಗಳಿಗೆ ಶಶಾಂಕ್ ಈಗ ಪತ್ರದ ಮೂಲಕ ಉತ್ತರ ನೀಡಿದ್ದಾರೆ.

  ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾಗಳು ಬಿಡುಗಡೆ ಮಾಡಲಾಗದೇ ಇದ್ದದರ ಬಗ್ಗೆ ಪ್ರಶ್ನಿಸಿದ್ದವರಿಗೆ ಉತ್ತರಿಸಿರುವ ಶಶಾಂಕ್, ಸಿನಿಮಾ ಒಂದು ಯಾವಾಗ ಬಿಡುಗಡೆ ಆಗಬೇಕು ಎಂಬುದನ್ನು ಸಿನಿಮಾ ಮೇಲೆ ಕೋಟ್ಯಂತರ ಹಣ ಹೂಡಿರುವ ನಿರ್ಮಾಪಕನ ಹಿತಾಸಕ್ತಿ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆಯೇ ವಿನಃ ಯಾರದ್ದೊ ಟೀಕೆಗಳಿಗೆ ಉತ್ತರಿಸಲು ಅಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ ಶಶಾಂಕ್.

  2010 ರಲ್ಲಿ 'ರಾವನ್' ಸಿನಿಮಾದ ಎದುರು ಕೃಷ್ಣನ್ ಲವ್ ಸ್ಟೋರಿ ಸಿನಿಮಾ ಗೆದ್ದಿತ್ತು. ಬಾಹುಬಲಿ ಎದುರು ರಂಗಿತರಂಗ ಗೆದ್ದಿದೆ. ಪಿಕೆ ಸಿನಿಮಾದ ಎದುರು 'ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ' ಸಿನಿಮಾಗಳು ಗೆದ್ದಿವೆ ಎನ್ನುವ ಮೂಲಕ ದೊಡ್ಡ ಸಿನಿಮಾಗಳನ್ನು ಎದುರಿಸುವ ತಾಕತ್ತು ಕನ್ನಡ ಸಿನಿಮಾಗಳಿಗೆ ಇಲ್ಲ ಎಂದವರ ಬಾಯಿ ಮುಚ್ಚಿಸಿದ್ದಾರೆ ಶಶಾಂಕ್.

  ಪರಭಾಷೆ ಸಿನಿಮಾಗಳು ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲು ಕಾರಣ, ಕನ್ನಡಿಗರು ಆ ಸಿನಿಮಾಗಳನ್ನು ನೋಡಲು ತಯಾರಿರುವುದು. ಕನ್ನಡ ಸಿನಿಮಾಗಳನ್ನು ನೋಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಬಹುದೇ ವಿನಃ, ಬೇರೆ ಭಾಷೆ ಸಿನಿಮಾ ನೋಡಬೇಡಿ ಎಂದು ನಾವು ಹೇಳುವಂತಿಲ್ಲ ಎಂದಿದ್ದಾರೆ ಶಶಾಂಕ್.

  ಹೊರ ರಾಜ್ಯದ ಸಿನಿಮಾ ಕನ್ನಡದಲ್ಲಿ ಡಬ್ ಆದ ಮಾತ್ರಕ್ಕೆ ಕನ್ನಡ ಸಿನಿಮಾ ಆಗಿಬಿಡುವುದಿಲ್ಲ. ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅಷ್ಟೇ ಪ್ರಾಮುಖ್ಯತೆ ನೀಡಬೇಕು. ಕನ್ನಡದ ಹೆಸರಲ್ಲಿ ಬೇರೆ ಭಾಷೆಯ ಡಬ್ಬಿಂಗ್ ಸಿನಿಮಾವನ್ನು ತಲೆ ಮೇಲೆ ಹೊತ್ತು ತಿರುಗಬಾರದು ಎಂದಿದ್ದಾರೆ ಶಶಾಂಕ್.

  Recommended Video

  ಮಾಜಿ ಗೆಳೆಯನ ರಾಬರ್ಟ್ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ | Sudeep | Darshan | Roberrt

  ಕನ್ನಡದ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದ ಶಶಾಂಕ್, 'ನುಗ್ಗಿ ಹೊಡೆಯೋದು ಅಂದ್ರೆ ಇದೇ ! ಯಾವ ಡಬ್ಬಿಂಗ್ ಸಿನಿಮಾಗೂ ಒಂದು ಥಿಯೇಟರ್ ಕೂಡ ಸಿಗಬಾರದು. ಜೈ ಕನ್ನಡ ಸಿನೆಮಾ'' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದರು.

  English summary
  Director Shashank said do not give Unnecessary importance to dubbing movies in the name of Kannada.
  Saturday, January 30, 2021, 20:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X