twitter
    For Quick Alerts
    ALLOW NOTIFICATIONS  
    For Daily Alerts

    ಹೀರೋಗಳನ್ನು ವಿಜೃಂಭಿಸುವ ಕತೆ ಬರೆಯಬೇಡಿ: ಸುದೀಪ್

    |

    ಸ್ಟಾರ್ ನಟರ ಸಿನಿಮಾಗಳೆಲ್ಲವೂ ಬಹುತೇಕ ಒಂದೇ ಮಾದರಿಯಲ್ಲಿರುತ್ತವೆ. ಅಲ್ಲಿ ಕತೆಗಿಂತಲೂ ಹೆಚ್ಚು ನಾಯಕನ ಇಮೇಜು ಹೆಚ್ಚು ಮಾಡುವುದು, ಬಿಲ್ಡಪ್ ಡೈಲಾಗ್‌, ನಾಲ್ಕು ಫೈಟ್, ಇಂಟ್ರೊಡಕ್ಷನ್ ಹಾಡು ಇಂಥಹುವೇ ತುಂಬಿರುತ್ತವೆ. ನಾಯಕನನ್ನು ವೈಭವೀಕರಿಸುವುದು ಬಿಟ್ಟರೆ ಸಿನಿಮಾದಲ್ಲಿ ಇನ್ನೇನೂ ಇರುವುದಿಲ್ಲ.

    Recommended Video

    ಇಷ್ಟೆಲ್ಲ ಅಡೆತಡೆಗಳ ನಡುವೆ ನಿಜಕ್ಕೂ ಗೆದ್ರ ಕಿಚ್ಚ ಸುದೀಪ್

    ಕನ್ನಡದಲ್ಲಿಯೂ ಸ್ಟಾರ್ ನಾಯಕರ ಸಿನಿಮಾಗಳು ಇದೇ ರೀತಿ ಇವೆ. ಆದರೆ, ಸ್ವತಃ ಮಾಸ್ ಹೀರೋ ಆಗಿರುವ ಸುದೀಪ್ ಇಂಥಹಾ ಕತೆಗಳಿಗೆ, ಇಂಥಹಾ ಸಿನಿಮಾಗಳಿಗೆ ಅಂತ್ಯ ಹಾಡಬೇಕು ಎಂದಿದ್ದಾರೆ. ಆ ಮೂಲಕ ಮಾಸ್ ಅಥವಾ ಬಿಲ್ಡಪ್ ಮಾದರಿ ಸಿನಿಮಾಗಳಿಂದ ಸ್ಟಾರ್ ನಾಯಕ ನಟರು ಹೊರಗೆ ಬರಬೇಕು, ಹೀರೋ ಅನ್ನು ಗಮನದಲ್ಲಿಟ್ಟುಕೊಂಡು ಕತೆ ಬರೆಯುವುದನ್ನು ಸಹ ನಿರ್ದೇಶಕರು ಕೈ ಬಿಡಬೇಕು ಎಂದು ಸುದೀಪ್ ಹೇಳಿದ್ದಾರೆ.

    'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆದ ಬಳಿಕ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುದೀಪ್, ''ನಾಯಕನ ನಟರಿಗಾಗಿ ಕತೆಯನ್ನು ಬರೆಯುವುದು ಬಿಡಬೇಕು'' ಎಂದಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಬಿಲ್ಡಪ್‌ಗಿರಿಯನ್ನೂ ಬಿಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

    ನಾಯಕನಿಗಾಗಿ ಕತೆ ಬರೆಯಬೇಡಿ: ಸುದೀಪ್

    ನಾಯಕನಿಗಾಗಿ ಕತೆ ಬರೆಯಬೇಡಿ: ಸುದೀಪ್

    ''ಸಿನಿಮಾದಲ್ಲಿ ಇಂಟ್ರೊಡಕ್ಷನ್ ಸೀನ್‌ ಮಾತ್ರ ನಿಮ್ಮ ಸ್ಟಾರ್‌ಡಮ್‌ ಮೇಲೆ ನಡೆಯುತ್ತದೆ. ಅದಕ್ಕೆ ಬೇಕಾದಂತೆ ಸೀನ್ ಬರೆಯಬೇಕು ಆದರೆ ಅದರ ನಂತರ ಆ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಏನು ಕೊಡುತ್ತಿದ್ದೀಯ ಎಂಬುದೇ ಮುಖ್ಯವಾಗುತ್ತದೆ. ಇಂಟ್ರೊಡಕ್ಷನ್‌ ಸೀನ್‌ಗೆ ನಟರ ಜನಪ್ರಿಯತೆಯಿಂದ ಶಿಳ್ಳೆಗಳು ಬೀಳುತ್ತವೆ ಅದಾದ ನಂತರ ಮುಂದೇನು? ಅವರಿಗೆ ನೀನು ಯಾವ ಕತೆ ಹೇಳುತ್ತೀಯ ಎಂಬುದು ಮುಖ್ಯವಾಗುತ್ತದೆ. ಈಗಲೂ ಅದೇ 'ನಾನು ಬಂದ್ರೆ ಹಾಗೆ, ನಾನು ಹೊಡೆದ್ರೆ ಹೀಗೆ' ಎಂದುಕೊಂಡು ಇತಿಹಾಸ ಇಟ್ಟುಕೊಂಡು ಕತೆ ಹೇಳಲು ಹೊರಟರೆ ಅದು ಸರಿಯಲ್ಲ. ಪ್ರತಿ ಸಿನಿಮಾವೂ ಹೊಸ ಹೋರಾಟ. ಸಿನಿಮಾ ಮುಗಿದಾಗ ಈ ಸಿನಿಮಾ ಮೂಲಕ ಜನರಿಗೆ ನೀವು ಏನು ಹೇಳಿದಿರಿ, ಜನರನ್ನು ಖುಷಿ ಪಡಿಸಿದ್ದೀರಾ ಎಂದು ಕೇಳುತ್ತಾರೆ'' ಎಂದಿದ್ದಾರೆ ಸುದೀಪ್.

    ಸಿನಿಮಾದ ಮೊದಲ ಐದು ನಿಮಿಷವಷ್ಟೆ ಹೀರೋಯಿಸಂ: ಸುದೀಪ್

    ಸಿನಿಮಾದ ಮೊದಲ ಐದು ನಿಮಿಷವಷ್ಟೆ ಹೀರೋಯಿಸಂ: ಸುದೀಪ್

    ''ಹಿರೋಯಿಸಂ, ಜನಪ್ರಿಯತೆ ಎಲ್ಲವೂ ಸಿನಿಮಾದ ಮೊದಲ ಐದು ನಿಮಿಷವಷ್ಟೆ ಆ ನಂತರ ಕತೆಯೇ ಮುಖ್ಯ. ಮೊದಲ ಐದು ನಿಮಿಷದ ಬಳಿಕ ಇನ್ನುಳಿದ 2:30 ಗಂಟೆ ಸಮಯ ಸಿನಿಮಾದ ಕಂಟೆಂಟ್ ಹೀರೋ ಆಗಿರಬೇಕಾಗಿರುತ್ತದೆ. ನಿಮ್ಮ ಹಿಂದಿನ ಸಿನಿಮಾ ನೋಡಿ ಖುಷಿ ಪಟ್ಟು ಪ್ರೇಕ್ಷಕ ಒಳಗೆ ಬಂದಿರುತ್ತಾನೆ. ಆವನಿಗೆ ಈ ಸಿನಿಮಾ ಮೂಲಕವೂ ನೀವು ಒಳ್ಳೆಯದನ್ನೇ ಕೊಡಬೇಕು. ಈ ಸಿನಿಮಾ ಕೆಟ್ಟದಾಗಿದ್ದರೆ ಆತ ಮುಂದಿನ ಬಾರಿ ಚಿತ್ರಮಂದಿರಕ್ಕೆ ಬರುವುದಿಲ್ಲ. ಹಾಗಾಗಿ ನಾವು ಮೊದಲು ನಾಯಕ ನಟರಿಗಾಗಿ ಕತೆ ಬರೆಯುವುದು ಬಿಡಬೇಕು'' ಎಂದು ವಿಶ್ಲೇಷಿಸಿದ್ದಾರೆ ಸುದೀಪ್.

    ರಾಜ್‌ಕುಮಾರ್, ವಿಷ್ಣುವರ್ಧನ್ ನನಗೆ ಸ್ಪೂರ್ತಿ: ಸುದೀಪ್

    ರಾಜ್‌ಕುಮಾರ್, ವಿಷ್ಣುವರ್ಧನ್ ನನಗೆ ಸ್ಪೂರ್ತಿ: ಸುದೀಪ್

    ಸುದೀಪ್‌ ಸಿನಿಮಾ ನೋಡಲು ಕುಟುಂಬ ಸಮೇತ ಬರುತ್ತಾರೆ ಎಂಬ ಬಗ್ಗೆ ಮಾತನಾಡಿದ ಸುದೀಪ್ ''ನಟನಾಗಿ ಅದೊಂದು ಜರ್ನಿ, ಫ್ಯಾಮಿಲಿ ಆಡಿಯನ್ಸ್‌ ಈಗ ಹುಟ್ಟಿಕೊಂಡವರಲ್ಲ. 'ಹುಚ್ಚ', 'ಸ್ವಾತಿಮುತ್ತು' ಅಂಥಹಾ ಸಿನಿಮಾಗಳಿಂದಲೂ ನನ್ನದೊಂದು ವ್ಯಕ್ತಿತ್ವ ಬಿಲ್ಡ್ ಮಾಡಿಕೊಂಡು ಬಂದಿದ್ದೇನೆ. ನಾನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದು ವಿಷ್ಣುವರ್ಧನ್ ಅಂಥಹವರನ್ನು ರಾಜ್‌ಕುಮಾರ್ ಅಂಥಹವರನ್ನು. ಅವರು ಎಂತೆಂಥಾ ಅದ್ಭುತ ಸಿನಿಮಾ ಮಾಡಿಕೊಂಡು ಬಂದಿದ್ದಾರೆ. ಶಿವಣ್ಣ ಅವರ ದೊಡ್ಡ ಹಿಟ್ ಸಿನಿಮಾಗಳು ಕೌಟುಂಬಿಕ ಸಿನಿಮಾಗಳು. ಸಿನಿಮಾದಲ್ಲಿ ಕೌಟುಂಬಿಕ ಮೌಲ್ಯಗಳೂ ಇರಬೇಕು, ಮನರಂಜನೆಯೂ ಇರಬೇಕು. ನಾವು ಯಾವುದೋ ಒಂದು ವರ್ಗಕ್ಕೆ ಸಿನಿಮಾ ಮಾಡುತ್ತೇವೆ ಎಂದುಕೊಂಡರೆ ಹೆಚ್ಚು ದಿನ ಉದ್ಯಮದಲ್ಲಿ ಉಳಿಯಲಾಗುವುದಿಲ್ಲ'' ಎಂದರು ಸುದೀಪ್.

    ''ಸಿನಿಮಾದ ಹೊರತಾದ ಕಾರಣಗಳಿಂದಲೂ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ''

    ''ಸಿನಿಮಾದ ಹೊರತಾದ ಕಾರಣಗಳಿಂದಲೂ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ''

    ''ಇವತ್ತು ಮಹಿಳೆಯರು ನನ್ನ ಸಿನಿಮಾ ನೋಡಲು ಬರುತ್ತಿದ್ದಾರೆಂದರೆ ಅದು ನನ್ನ ಇಷ್ಟು ವರ್ಷದ ಶ್ರಮವೆಂದೇ ಹೇಳಬೇಕು. ಬಿಗ್‌ಬಾಸ್ ಸಹ ಅದರಲ್ಲಿ ಒಂದು. ಆ ವೇದಿಕೆಯನ್ನು ನಾನು ಬಳಸಿಕೊಂಡ ರೀತಿಯಿಂದ ಇನ್ನಷ್ಟು ಜನ ನನ್ನನ್ನು ಬೆಂಬಲಿಸಿದರು, ನನ್ನ ವೈಯಕ್ತಿಕ ಜೀವನದಲ್ಲಿ ನಾನು ಮಾಡಿಕೊಂಡ ಬದಲಾವಣೆಯಿಂದ ಇನ್ನಷ್ಟು ಮಂದಿ ಫ್ಯಾನ್ಸ್ ಆದರು. ಸಿನಿಮಾ ಮಾತ್ರವೇ ಅಲ್ಲ ಬೇರೆ ಕಾರಣಗಳಿಂದಲೂ ಅಭಿಮಾನಿಗಳು ಸೃಷ್ಟಿಯಾಗುತ್ತಾ ಹೋದರು. ಇಷ್ಟು ವರ್ಷಗಳ ನನ್ನ ಸಿನಿಮಾ, ವೈಯಕ್ತಿಕ ಜೀವನದ ಶಿಸ್ತುಗಳು ಇತರೆ ವಿಷಯಗಳಿಂದ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಆ ಶ್ರಮ, ಶಿಸ್ತು ಇಂದು ಟಿಕೆಟ್ ಆಗಿ ಬದಲಾವಣೆ ಆಗುತ್ತಿವೆ'' ಎಂದಿದ್ದಾರೆ ಸುದೀಪ್.

    English summary
    Actor Sudeep said do not write hero oriented stories. He said enough hero oriented movies, content should be hero in the movie.
    Monday, October 18, 2021, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X