ಅಭಿಷೇಕ್ ಅಂಬರೀಶ್ 4ನೇ ಚಿತ್ರಕ್ಕೆ ತಯಾರಿ, ಫೇಮಸ್ ಡೈರೆಕ್ಟರ್ ಯಾರು?

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಆಗಿದೆ. ಈಗಾಗಲೇ ‌ಮೊದಲ ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದಾರೆ. 'ಅಮರ್' ಸಿನಿಮಾದೊಂದಿಗೆ ಅಭಿಷೇಕ್ ಒಂದು ಮಟ್ಟಿಗೆ ಅಭಿನಯದ ಮೂಲಕ ಜನ ಮನ ಗೆದ್ದಿದ್ದಾರೆ.

'ಅಮರ್' ಸಿನಿಮಾ ಅಂದುಕೊಂಡ ಮಟ್ಟಿಗೆ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿಲ್ಲ. ಆದರೆ ಅಭಿಷೇಕ್ ಅಂಬರೀಶ್ ಹೀರೋ ಆಗಿ ಲಾಂಚ್ ಆಗಿದ್ದಾರೆ‌. ಇವರ ಮುಂದಿನ ಸಿನಿಮಾ ಹೇಗೆ ಇರಲಿದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಅಭಿ ಎರಡನೇ ಸಿನಿಮಾದ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಅಭಿಷೇಕ್ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಒಂದು ಕಡೆ ಚಿತ್ರೀಕರಣ ಮತ್ತೊಂದೆಡೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗೆ ಅಭಿಷೇಕ್ ಮೂರನೇ ಚಿತ್ರದ ಬಗ್ಗೆಯೂ ಸುದ್ದಿ ಹಬ್ಬಿತ್ತು. ಆದ್ರೀಗ ಅಭಿ ನಾಲ್ಕನೇ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ.

ಅಭಿಷೇಕ್ 4ನೇ ಚಿತ್ರದ ಡೈರೆಕ್ಟರ್ ಯಾರು?

ಅಭಿಷೇಕ್ 4ನೇ ಚಿತ್ರದ ಡೈರೆಕ್ಟರ್ ಯಾರು?

ಅಭಿ ಎರಡನೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಆದರೆ ಅದಾಗಲೇ ಮೂರು ಮತ್ತು ನಾಲ್ಕನೆ ಸಿನಿಮಾದ ತಯಾರಿಯಲ್ಲಿದ್ದಾರೆ ಅಭಿಷೇಕ್. ಈಗಾಗಲೇ ತಮ್ಮ 3ನೇ ಸಿನಿಮಾದ ಕಥೆ ಕೇಳಿ ಓಕೆ ಮಾಡಿದ್ದಾರೆ. 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮುಗಿಯುತ್ತಲೇ, ಅಭಿಷೇಕ್ ಮೂರನೇ ಸಿನಿಮಾ ಸೆಟ್ಟೇರಲಿದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ. ಇದರ ಜೊತೆಗೆ ಈಗ ಬಂದ ಹೊಸ ಸುದ್ದಿ ಅಂದರೆ ಅಭಿ‍ಷೇಕ್ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಿಟ್ಟಪ್ಪ ನಿರ್ದೇಶನ ಮಾಡಲಿದ್ದಾರೆ.

ಅಭಿಷೇಕ್‌ಗೆ ಹೆಬ್ಬುಲಿ ಕೃಷ್ಣ ನಿರ್ದೇಶನ!

ಅಭಿಷೇಕ್‌ಗೆ ಹೆಬ್ಬುಲಿ ಕೃಷ್ಣ ನಿರ್ದೇಶನ!

ಅಭಿಶೇಕ್‌ಗೆ ನಿರ್ದೇಶನ ಮಾಡಲು ಹೆಬ್ಬುಲಿ ಕೃಷ್ಣ ತಯಾರಿ ನಡೆಸಿದ್ದಾರೆ. ಈಗಾಗಲೇ ಕಥೆಯನ್ನು ಕೇಳಿ ಓಕೆ ಎಂದಿದ್ದಾರಂತೆ. ಆದರೆ ಡೇಟ್‌ನಿಂದ ಹಿಡಿದು ಎಲ್ಲವೂ ಹೊಂದಾಣಿಕೆ ಆದರೆ ಆದಷ್ಟು ಬೇಗ ಚಿತ್ರ ಸೆಟ್ಟೇರಲಿದೆ. ಈ ಚಿತ್ರ ಮೊದಲು ಶುರುವಾದರೆ ಇದುವೇ ಅಭಿಷೇಕ್ ಮೂರನೆ ಚಿತ್ರ ಆಗಲಿದೆ. ಹೆಬ್ಬುಲಿ ಕೃಷ್ಣ ಈಗಾಗಲೇ ಒಬ್ಬ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ಹಾಗಾಗಿ ಈ ಕಾಂಬಿನೇಷನ್ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ.

ನಿರ್ದೇಶಕ ಮಹೇಶ್ ಕುಮಾರ್ ಚಿತ್ರಕ್ಕೂ ಗ್ರೀನ್ ಸಿಗ್ನಲ್!

ನಿರ್ದೇಶಕ ಮಹೇಶ್ ಕುಮಾರ್ ಚಿತ್ರಕ್ಕೂ ಗ್ರೀನ್ ಸಿಗ್ನಲ್!

ಈ ಮೊದಲು ಎರಡು ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಮಹೇಶ್ ಕುಮಾರ್ ಅಭಿ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಚಿತ್ರಕ್ಕೆ ಇನ್ನೂ ಸಮಯ ಇದೆ. ಹಾಗಾಗಿ ಈ ಗ್ಯಾಪ್‌ನಲ್ಲಿ ಅಭಿಷೇಕ್, ನಿರ್ದೇಶಕ ಕೃಷ್ಣನಿಗೆ ಡೇಟ್ ಕೊಟ್ಟಿದ್ದಾರೆ. ಇದರಲ್ಲಿ ಯಾವ ಸಿನಿಮಾದ ಜೊತೆಗೆ ದಿನಾಂಕ ಹೊಂದಾಣಿಕೆ ಆಗಲಿದೆಯೋ, ಅ ಚಿತ್ರವನ್ನು ಅಭಿ ಮೊದಲು ಶುರು ಮಾಡಲಿದ್ದಾರೆ.

ಈ ಬಾರಿ ಅಭಿಷೇಕ್ ಅದೃಷ್ಟ ಬದಲಾಗುತ್ತಾ?

ಈ ಬಾರಿ ಅಭಿಷೇಕ್ ಅದೃಷ್ಟ ಬದಲಾಗುತ್ತಾ?

'ಬ್ಯಾಡ್ ಮ್ಯಾನರ್ಸ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಫಸ್ಟ್ ಲುಕ್‌ನಲ್ಲಿ ಅಭಿಷೇಕ್ ಸಿಕ್ಕಾ ಪಟ್ಟೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿ, ಎರಡನೇ ಚಿತ್ರದಲ್ಲಿ ಸಂಪೂರ್ಣ ಬದಲಾಗಿದ್ದಾರೆ. 'ಅಮರ್' ಚಿತ್ರದಲ್ಲಿ ಅಭಿಷೇಕ್ ಅಷ್ಟಾಗಿ ಗಮನ ಸೆಳೆಯಲು ಸಾಧ್ಯವಾಗಿರಲಿಲ್ಲ. ಈ ಸೂರಿ ನಿರ್ದೇಶಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್' ಅದೃಷ್ಟ ಕೊಡುತ್ತಾ? ಅಥವಾ ಮುಂದಿನ ಎರಡು ಚಿತ್ರಗಳಲ್ಲಿ ಅಭಿನಯಿಸುವವರೆಗೂ ಕಾಯಬೇಕಾ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Abhishek Ambareesh Next Movie With Director Hebbuli Krishna, Know More Detiles,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X