ರಾಕಿಂಗ್ ಸ್ಟಾರ್ ಯಶ್ ಯಶಸ್ಸಿನ ಸೂತ್ರ ಇದೆ ನೋಡಿ!

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ 'ಕೆಜಿಎಫ್' ಯಶಸ್ಸಿನ ಮಲಿನಲ್ಲಿ ತೇಲಾಡುತ್ತಿದ್ದಾರೆ. ಕನ್ನಡದ ಪಾಲಿಗೆ, ಭಾರತೀಯ ಚಿತ್ರರಂಗದ ಪಾಲಿಗೆ ದೊಡ್ಡ ದಾಖಲೆ ಬರೆದ ಕೆಜಿಎಫ್ ಮೂಲಕ ಯಶ್ ಟಾಪ್ ಸ್ಟಾರ್ ಆಗಿ ಬಿಟ್ಟಿದ್ದಾರೆ. 'ಕೆಜಿಎಫ್' ಸಿಕ್ಕಿದ್ದೇ ಸಿಕ್ಕಿದ್ದು ಯಶ್ ಅದರಷ್ಟವೇ ಬದಲಾಗಿ ಹೋಗಿದೆ. ಯಶ್ ನ್ಯಾಷನಲ್ ಸ್ಟಾರ್ ಕೂಡ ಆಗಿ ಬಿಟ್ಟಿದ್ದಾರೆ.

ಕರ್ನಾಟಕದ ಹಳ್ಳಿ ಹುಡುಗ ಯಶ್ ಇಂದು ನ್ಯಾಷನಲ್ ಸ್ಟಾರ್. ಎಲ್ಲರೂ ಯಶ್ ರೀತಿ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಆದರೆ ತಮ್ಮ, ತಮ್ಮ ಪರಿಮಿತಿಯಲ್ಲಾದರೂ ಸಕ್ಸೆಸ್ ಕಾಣಬಹುದು. ಯಶ್ ನೋಡ ನೋಡುತ್ತಾ ಇದ್ದಂತೆ ದೊಡ್ಡ ಸ್ಟಾರ್ ಬೆಳೆದು ಬಿಟ್ಟಿದ್ದಾರೆ. ಇದು ಸಿನಿಮಾದಿಂದ ಮಾತ್ರ ಸಾಧ್ಯವಾಗಿಲ್ಲ.

ನಟ ಯಶ್ ಹಳ್ಳಿ ಹುಡುಗ ಆದ ಕಾರಣ ಅವರಿಗೂ ಮನಸ್ಸಲ್ಲಿ ಹಲವು ವಿಚಾರಗಳಿಗೆ ಕೀಳರಿಮೆ ಇತ್ತಂತೆ. ಆದರೆ ಅದೆಲ್ಲದರಿಂದ ಹೊರ ಬಂದ ಬಗ್ಗೆ ಯಶ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಇಂಗ್ಲೀಷ್ ಬರಲ್ಲ, ಡ್ರೆಸಪ್ ಆಗಲು ಗೊತ್ತಿಲ್ಲ!

ಇಂಗ್ಲೀಷ್ ಬರಲ್ಲ, ಡ್ರೆಸಪ್ ಆಗಲು ಗೊತ್ತಿಲ್ಲ!

ನಟ ಯಶ್ ಹಳ್ಳಿ ಹುಡುಗ ಆದ ಕಾರಣ ಮೊದ ಮೊದಲು ಅವರಿಗೆ ಇಂಗ್ಲೀಷ್ ಮಾತನಾಡುವುದು ಕಷ್ಟಕರವಾಗುತ್ತಿತ್ತಂತೆ, ಜೊತೆಗೆ ಇಲ್ಲಿನ ಜನ ನಿರೀಕ್ಷೆ ಮಾಡುವ ರೀತಿಯಲ್ಲಿ ಡ್ರೆಸಪ್ ಮಾಡಿಕೊಳ್ಳಲು ಗೊತ್ತಿರಲಿಲ್ಲ. ಈ ಕಾರಣಗಳಿಗೆ ಯಶ್‌ರನ್ನು ಹಳ್ಳಿ ಹುಡುಗ ಎಂದು ಕರೆಯಲಾಗುತ್ತಾ ಇತ್ತಂತೆ. ಆದರೆ ಇದೆಲ್ಲದಕ್ಕೂ ಮದ್ದು ನಮ್ಮ ಒಳಗಿನ ಕಾನ್ಫಿಡೆನ್ಸ್ ಎಂದಿದ್ದಾರೆ.

ಫೀಲ್ಡ್ ಬಗ್ಗೆ ಜ್ಞಾನ ಇರಬೇಕು!

ಫೀಲ್ಡ್ ಬಗ್ಗೆ ಜ್ಞಾನ ಇರಬೇಕು!

ಇನ್ನು ಕಾನ್ಸಫಿಡೆನ್ಸ್ ಬಗ್ಗೆ ಮಾತನಾಡಿರುವ ಯಶ್, ''ಯಾವ ಫೀಲ್ಡ್‌ನಲ್ಲಿ ಇರುತ್ತೇವೋ ಅದರ ಬಗ್ಗೆ ಜ್ಞಾನ ಇದ್ದರೆ ಭಯ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. "ನಾವು ಸಿನಿಮಾದಲ್ಲಿ ಇದ್ದೀವಿ ಅಂದರೆ, ಸಿನಿಮಾ ಬಗ್ಗೆ ಹೆಚ್ಚು ಜ್ಞಾನ ಸಂಪಾದಿಸಿದರೆ ಸಾಕು, ಮತ್ಯಾವುದಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ. ಯಾವಾಗ ಹೆಚ್ಚು ಜ್ಞಾನ ಇರುವುದಿಲ್ಲವೋ ಆಗಲೇ ಹೆಚ್ಚು ಭಯ ಆಗುತ್ತದೆ." ಎಂದಿದ್ದಾರೆ.

ಬೇರೆಯವರ ಮಾತಿಗಿಂತ, ನಿಮ್ಮಲ್ಲೇ ನಂಬಿಕೆ ಇಡಿ!

ಬೇರೆಯವರ ಮಾತಿಗಿಂತ, ನಿಮ್ಮಲ್ಲೇ ನಂಬಿಕೆ ಇಡಿ!

ಇನ್ನು ಯಶ್ ಕೆಳಮಟ್ಟದಿಂದ ಈ ಮಟ್ಟಕ್ಕೆ ಬೆಳೆಯಬೇಕು ಅಂದರೆ ಏನೆಲ್ಲಾ ಸವಾಲುಗಳು ಎದುರಾಗಿವೆ ಎನ್ನುವ ಬಗ್ಗೆ ಸರಳವಾಗಿ ಹೇಳಿದ್ದಾರೆ. "ಮೊದಲು ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು. ಯಾರೋ ಬೇರೆ ಹತ್ತು ಜನರ ಮಾತಿಗೆ ತಲೆಕೆಡಿಸಿಡಿಕೊಳ್ಳುವ ಬದಲು ನಮ್ಮ ಬಗ್ಗೆ ನಮಗೆ ಆತ್ಮ ವಿಶ್ವಾಸ ಇದ್ದರೆ ಆಗ ಬೇರೆಯವರ ಹತ್ತು ಹಲವು ಅಭಿಪ್ರಾಯಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ" ಎಂದಿದ್ದಾರೆ.

ಸಾವಿರ ಕೋಟಿ ಸರದಾರ ಯಶ್!

ಸಾವಿರ ಕೋಟಿ ಸರದಾರ ಯಶ್!

ಇನ್ನು ನಟ ಯಶ್ ಈಗ ಸಾವಿರ ಕೋಟಿ ಸರದಾರ ಎನಿಸಿಕೊಂಡಿದ್ದಾರೆ. 'ಕೆಜಿಎಫ್' ಒಂದು ಸಿನಿಮಾ ಯಶ್ ಯಶಸ್ಸಿನ ಉತ್ತುಂಗ ಏರುವಂತೆ ಮಾಡಿದೆ. ಇದಕ್ಕೆ ಎಲ್ಲದಕ್ಕಿಂತ ಮುಖ್ಯವಾಗಿ ಯಶ್ ಹಠ, ಛಲವೆ ಕಾರಣ. ಹಾಗಾಗಿ ಯಶ್ ಅದೇ ಮಾತನ್ನು ಎಲ್ಲರಿಗೂ ಹೇಳುತ್ತಾರೆ. ಛಲ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳುತ್ತಾರೆ.

More from Filmibeat

English summary
Do You Know Actor Yash Success Secret, know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X