twitter
    For Quick Alerts
    ALLOW NOTIFICATIONS  
    For Daily Alerts

    'ದಾಸ' ದರ್ಶನ್ 10ನೇ ಕ್ಲಾಸ್‌ನಲ್ಲಿ ಪಡೆದ ಅಂಕ ಎಷ್ಟು? ಎಲ್ಲಾ ವಿಷಯದಲ್ಲೂ ಒಂದೇ ಮಾರ್ಕ್ಸ್!

    |

    ಸೆಲೆಬ್ರೆಟಿಗಳ ಬಗ್ಗೆ ಪ್ರತಿಯೊಂದು ವಿಷಯವನ್ನೂ ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಸೆಲೆಬ್ರೆಟಿಗಳು ಕೆಲವು ವಿಷಯಗಳನ್ನು ತಮ್ಮಲ್ಲಿಯೇ ಗೌಪ್ಯವಾಗಿಟ್ಟುಕೊಂಡಿರುತ್ತಾರೆ. ಅದರಲ್ಲೂ ಅವರ ಶಿಕ್ಷಣ, ಪಡೆದ ಅಂಕಗಳ ಎಷ್ಟು ಅನ್ನೋದನ್ನು ಅಪ್ಪಿ-ತಪ್ಪಿನೂ ಬಾಯ್ಬಿಡಲ್ಲ.

    ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗಲ್ಲ. ಅವರ ವಿದ್ಯಾಭ್ಯಾಸ ಹಿನ್ನೆಲೆ ತೀರ ರಹಸ್ಯವಾಗೇನೂ ಉಳಿದಿಲ್ಲ. ಅದೆಷ್ಟೋ ಬಾರಿ ಅವರೇ ಓದಿದ್ದೇ ಎಸ್‌ಎಸ್‌ಎಲ್‌ಸಿ ಅಂತ ಹೇಳಿಕೊಂಡಿದ್ದಾರೆ. ಹೀಗಾಗಿ ಡಿ ಬಾಸ್ ಫ್ಯಾನ್ಸ್‌ಗೆ ತಮ್ಮ ನೆಚ್ಚಿನ ನಟ 10ನೇ ತರಗತಿಯಲ್ಲಿ ಎಷ್ಟು ಮಾರ್ಕ್ಸ್ ಪಡೆದಿರಬಹುದು ಅನ್ನೋದನ್ನು ಕೆದಕುವುದಕ್ಕೆ ಹೋಗಿರಲಿಲ್ಲ.

    "ಲೆಗಸಿ ನಮಗೆ ದೊಡ್ಡ ಪ್ರಾಬ್ಲಂ": ಯಶ್ ಉದಾಹರಣೆ ಕೊಟ್ಟು ದರ್ಶನ್ ಹೇಳಿದ್ದೇನು?

    ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸರ್ಕಾರಿ ಶಾಲೆಯನ್ನು ಉಳಿಸುವ ಸಂದೇಶ ಹೊತ್ತು 'ಕ್ರಾಂತಿ' ಮಾಡಲು ಹೊರಟಿದ್ದಾರೆ. ಇದೇ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಸರ್ಕಾರಿ ಶಾಲೆಯಲ್ಲಿಯೇ ಓದಿರುವ ಬಗ್ಗೆ, ಎಸ್‌ಎಸ್ಎಲ್‌ಸಿ ಪಡೆದ ಅಂಕ ಎಷ್ಟು ಅನ್ನೋದನ್ನು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ರಿವೀಲ್ ಮಾಡಿದ್ದಾರೆ. ಅದರ ಫುಲ್ ಡಿಟೈಲ್ಸ್ ಇಲ್ಲಿದೆ.

    ನಾನು ಓದಿದ್ದೇ 10ನೇ ತರಗತಿ

    ನಾನು ಓದಿದ್ದೇ 10ನೇ ತರಗತಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಚ್ಚು ಓದಿಲ್ಲ. ಓದಿದ್ದೇ 10ನೇ ತರಗತಿ ಅನ್ನೋದನ್ನು ರಹಸ್ಯವಾಗೇ ಉಳಿಸಿಕೊಂಡಿಲ್ಲ. ಸರ್ಕಾರಿ ಶಾಲೆಯ ಹಿನ್ನೆಲೆ ಇಟ್ಟುಕೊಂಡೇ ಸಿನಿಮಾ ಮಾಡುತ್ತಿರುವುದರಿಂದ ತಾವು ಓದಿ ಶಾಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. "ನಾನು ಸರ್ಕಾರಿ ಶಾಲೆ ಹುಡುಗನೇ. ಮೈಸೂರಿನಲ್ಲಿ ಓದಿದ್ದು. ಮೊದಲು ಟೆರೇಸಿಯನ್ ಸ್ಕೂಲ್‌ನಲ್ಲಿ ಓದಿದೆ. ಜೆಎಸ್‌ಎಸ್‌ ಒಂದು ವರ್ಷ ಓದಿದೆ. ಆ ಮೇಲೆ ವೈಶಾಲಿಯಲ್ಲಿ ಓದಿದೆ. 10ನೇ ತರಗತಿವರೆಗೂ ಮೈಸೂರಿನಲ್ಲೇ ಓದಿದ್ದು, 10ನೇ ತರಗತಿನೇ ಕೊನೆ." ಎಂದು ದರ್ಶನ್ ಹೇಳಿದ್ದಾರೆ.

    'ಯಾವಾಗಲೂ ಒಂದೇ ಕಥೆ ಓದುತ್ತಿದೆ'

    'ಯಾವಾಗಲೂ ಒಂದೇ ಕಥೆ ಓದುತ್ತಿದೆ'

    "ನಾನು ತುಂಬಾನೇ ಅವರೇಜ್ ಸ್ಟುಡೆಂಟ್ ಇದೆ. ಒಂದು ವಿಷಯ ಅಂತಲ್ಲ. ಎಲ್ಲದನ್ನು ನೋಡಿದರೂ ಓಡಿ ಹೋಗೋಣ ಅಂತ ಅನಿಸುತ್ತಿತ್ತು. ಕ್ಲಾಸ್‌ನಿಂದ ಹೊರಗಡೆ ನಿಲ್ಲುತ್ತಿದ್ದ ವಿದ್ಯಾರ್ಥಿನೇ ನಾನು. ಏನಾದರೂ ಒಂದು ಕಾರಣಕ್ಕೆ ಹೊರಗಡೆ ನಿಲ್ಲುತ್ತಿದ್ದೆ. ಆದರೆ, ಕನ್ನಡದ ಒಂದು ಕಥೆ ತುಂಬಾನೇ ಇಷ್ಟ ಪಟ್ಟು ಓದುತ್ತಿದ್ದೆ. ಗೋಪಾಲ ಕೃಷ್ಣರ ಕಥೆ. ಯಾವಾಗಲೂ ಅದನ್ನೇ ಓದುತ್ತಿದ್ದೆ. ನಮ್ಮ ಅಪ್ಪ ಲೋ.. ಯಾವಾಗಲೂ ಅದೇ ಓದುತ್ತಿದ್ದೆಯಲ್ಲೋ ಅಂತ ಹೇಳುತ್ತಿದ್ದರು. ಯಾಕಂದ್ರೆ, ಹುಲಿ ಬರುತ್ತಲ್ಲಾ ಅಂತ ಓದುತ್ತಿದ್ದೆ." ಎಂದು ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಎಲ್ಲಾ ವಿಷಯಗಳಲ್ಲೂ ನಾನು ತೆಗೆದಿದ್ದು ಇಷ್ಟೇ!

    ಎಲ್ಲಾ ವಿಷಯಗಳಲ್ಲೂ ನಾನು ತೆಗೆದಿದ್ದು ಇಷ್ಟೇ!

    ದರ್ಶನ್ ಓದಿದ್ದು ಕೇವಲ 10ನೇ ತರಗತಿ ಅನ್ನೋದೇನೋ ನಿಜ. ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ದರ್ಶನ್ ಎಷ್ಟು ಅಂಕ ಪಡೆದಿದ್ದರು? ಯಾವ್ಯಾವ ವಿಷಯಕ್ಕೆ ಎಷ್ಟು ಮಾರ್ಕ್ಸ್ ಅನ್ನೋ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ. "10ನೇ ತರಗತಿಯ ನನ್ನ ಮಾರ್ಕ್ಸ್ 210. ಅವಾಗೆಲ್ಲಾ 35, 35.. ಅಲ್ಲದೆ ಹಿಂದಿಗೆ 80 ಮಾರ್ಕ್ಸ್ ಇತ್ತು. ಎಲ್ಲಾ ಒಟ್ಟು ಸೇರಿಸಿದರೆ, 210 ಮಾಕ್ಸ್. ನಮ್ಮ ಮನೆಯವರು ನನ್ನನ್ನು ಕರೆದುಕೊಂಡು ಹೋಗಿ ಮೆಕಾನಿಕಲ್ ಡಿಪ್ಲೊಮಾಗೆ ಹಾಕಿದ್ರು. ಜೆಎಸ್‌ಎಸ್‌ ಪಾಲಿಟಿಕ್ಸ್‌ನಲ್ಲಿ ಸೇರಿಸಿದ್ರು. 6 ತಿಂಗಳು ಹೆಂಗೋ ಕಷ್ಟ ಪಟ್ಟು ಹೋದೆ. ಆಮೇಲೆ ನನ್ನ ಕೈಯಲ್ಲಿ ಆಗಲ್ಲ ಇದು ಅಂತ ಕೈ ಮುಗಿದುಬಿಟ್ಟೆ." ಎಂದು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    'ಶಾಲೆಯಲ್ಲಿ ಇವರೇ ನನ್ನ ಮೆಚ್ಚಿನ ಶಿಕ್ಷಕಿ'

    'ಶಾಲೆಯಲ್ಲಿ ಇವರೇ ನನ್ನ ಮೆಚ್ಚಿನ ಶಿಕ್ಷಕಿ'

    " ಶಿಕ್ಷಕರು ಯಾರೂ ಸ್ಟ್ರಿಕ್ಟ್ ಇರಲಿಲ್ಲ. ಪಿಕೆ ಮಿಸ್ ಅಂತ ಇದ್ದರು. ಅವರು ಬಂದಾಗ ಸ್ವಲ್ಪ ಗಂಭೀರವಾಗಿರುತ್ತಿದ್ದೆವು. ಇನ್ನೊಬ್ಬರು ಚಂದ್ರಶೇಖರ್ ಸರ್ ಅಂತ ಇದ್ದರು ಅವರು ಬಂದರೆ ನಾವು ಹೆಸರುತ್ತಿದ್ದೆವು. ಯಾಕಂದರೆ, ಮೊದಲು ಒದೆ ಬೀಳುತ್ತಿದ್ದದ್ದು ನಮಗೆನೇ. ಯಾಕಂದ್ರೆ, ತುಂಬಾ ತೀಟೆ ಮಾಡುತ್ತಿದ್ದೆವು. ಆದರೆ, 7ನೇ ತರಗತಿಯಲ್ಲಿ ಮಾತ್ರ ಚೆಂಪಕಾ ಮಿಸ್ ಅಂತ ಇದ್ದರು. ಅವರು ಸ್ಕೂಲ್‌ನಲ್ಲಿ ನನ್ನ ಫೇವರಿಟ್ ಮಿಸ್. ಯಾಕಂದ್ರೆ, ಅವರು ತುಂಬಾನೇ ಸಾಫ್ಟ್ ಇದ್ರು." ಎಂದು 10ನೇ ತರಗತಿವರೆಗಿನ ಶಿಕ್ಷಣದ ಬಗ್ಗೆ ಮಾತಾಡಿದ್ದಾರೆ.

    English summary
    Do you Know Challenging Star Darshan Marks In SSLC In Mysore, Know More.
    Wednesday, November 23, 2022, 16:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X