ನಟ ಜಗ್ಗೇಶ್ ಚಿತ್ರಗಳಲ್ಲಿ ಹೇಗೆ ಅವಕಾಶ ಕೇಳುತ್ತಿದ್ದರು ಗೊತ್ತಾ?
ಸದ್ಯ ಕನ್ನಡ ಚಿತ್ರರಂಗದಲ್ಲಿ ಇರುವ ಹಿರಿಯ ಕಲಾವಿದರಲ್ಲಿ ನಟ ಜಗ್ಗೇಶ್ ಕೂಡ ಒಬ್ಬರು. ಜಗ್ಗೇಶ್ ಚಿತ್ರರಂಗದ ಹಿರಿಯಣ್ಣನ ಸ್ಥಾನದಲ್ಲಿ ಇದ್ದಾರೆ. ಚಿತ್ರರಂಗದಲ್ಲಿ ಏನೆ ಆಗು ಹೋಗುಗಳಿದ್ದರೂ ಕೂಡ ನಟ ಜಗ್ಗೇಶ್ ಧ್ವನಿ ಎತ್ತುತ್ತಾರೆ. ಜಗ್ಗೇಶ್ ಅವರ ಸಿನಿಮಾಗಳ ಮೂಲಕ ಮಾತ್ರವಲ್ಲ, ಸಾಮಾಜಿಕ ಜಾಲತಾಣದ ಮೂಲಕ ಜನರ ಜೊತೆಗೆ ಸದಾ ಕನೆಕ್ಟ್ ಆಗಿ ಇರುತ್ತಾರೆ. ತಮ್ಮ ಬದುಕಿನ ಹಲವು ವಿಚಾರಗಳನ್ನು ಆಗಾಗ ರಿವೀಲ್ ಮಾಡುತ್ತಾ ಇರುತ್ತಾರೆ.
Recommended Video
1980ರ ದಶಕದಲ್ಲಿ ನಟ ಜಗ್ಗೇಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅವರು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಲೇ ನಾಯಕ ನಟನಾಗಿ ಅವಕಾಶ ಸಿಕ್ಕಿಲ್ಲ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದು ನಂತರ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಂತ ನಟ ಜಗ್ಗೇಶ್ ಜಗ್ಗೇಶ್ ಅವರ ಸಿನಿಮಾ ಜರ್ನಿಗೆ 18 ವರ್ಷ ತುಂಬಿದೆ.
ಈಗ ಜಗ್ಗೇಶ್ ಅವರ ಬಗ್ಗೆ ಮಾತನಾಡಲು ಕಾರಣ ಅವರು ಹಂಚಿಕೊಂಡಿರುವ ಒಂದು ವಿಡಿಯೋ. ಈ ವಿಡಿಯೋದಲ್ಲಿ 18 ವರ್ಷದ ಹಿಂದೆ ನಟ ಜಗ್ಗೇಶ್ ಏನು ಮಾಡ್ತಿದ್ದರು, ಚಿತ್ರರಂಗಕ್ಕೆ ಎಂಟ್ರಿ ಕೊಡಲು ಯಾವ ಟ್ರಿಕ್ ಬಳಸುತ್ತಿದ್ದರು ಎನ್ನುವುದನ್ನು ಹೇಳಿಕೊಂಡಿದ್ದಾರೆ.
ಹಳೇ ಸ್ಟೈಲ್‌ನಲ್ಲಿ ಜಗ್ಗೇಶ್ ವಿಡಿಯೋ!
ನಟ ಜಗ್ಗೇಶ್ ಸದ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಮೂಲಕ ಜಗ್ಗೇಶ್ ಅವರು 18 ವರ್ಷದ ಹಿಂದೆ ಚಿತ್ರಗಳಲ್ಲಿ ಹೇಗೆ ಅವಕಾಶ ಕೇಳುತ್ತಿದ್ದರು ಎನ್ನುವುದನ್ನು ಹಂಚಿಕೊಂಡಿದ್ದಾರೆ. " ನನಗೂ ಫೀಲಂನಲ್ಲಿ ಸೇರಬೇಕು ಅಂತ ತುಂಬಾ ಆಸೆ ಇದೆ ಸರ್, ನಾನು ಟ್ರೈನಿಂಗ್ ತಗೋತಾ ಇದಿನಿ, ಆಮೇಲೆ ಸ್ವಿಮ್ಮಿಂಗ್ ಹೋಗ್ತೀನಿ, ಹಾರ್ಸ್ ರೈಡಿಂಗ್ ಮಾಡ್ತೀನಿ, ನನಗೆ ತುಂಬಾ ಇಷ್ಟ ಆ್ಯಕ್ಟ್ ಮಾಡಬೇಕು ಅಂತ, ಚಾನ್ಸ್ ಇದ್ದರೆ ಕೊಡಿ ಸರ್, ತುಂಬಾ ಆಸೆ ಸರ್" ಎಂದು ಜಗ್ಗೇಶ್ ಕೇಳುತ್ತಿದ್ದರಂತೆ. ಇದನ್ನೇ ಅವರು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅದೂ ಸಹ ಅವರದೇ ಸ್ಟೈಲ್‌ನಲ್ಲಿ ಹೇಳಿರುವುದು ಗಮನಸೆಳೆಯುತ್ತಿದೆ.

ಹೀರೋಗಿಂತ ಮೊದಲು ವಿಲನ್ ಆಗಿದ್ದ ಜಗ್ಗೇಶ್!
ನಟ ಜಗ್ಗೇಶ್ ಚಿತ್ರಗಳಲ್ಲಿ ಹೀರೋ ಆಗುವುದಕ್ಕೂ ಮುನ್ನ ವಿಲನ್ ಆಗಿ ಅಭಿನಯಿಸಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ನಟ ಜಗ್ಗೇಶ್ ಖಳನಟನಾಗಿ ಅಭಿನಯಿಸದ್ದಾರೆ. ಆದರೆ ಜಗ್ಗೇಶ್ ಅಲ್ಲಿಗೆ ಸೀಮಿತ ಆಗಿಲ್ಲ. ಹಲವಾರು ಚಿತ್ರಗಳಲ್ಲಿ ಖಳನಟನಾಗಿ ಅಭಿನಯಿಸಿದ ಬಳಿಕ 'ಭಂಡ ನನ್ನ ಗಂಡ' ಚಿತ್ರದ ಮೂಲಕ ನಾಯಕ ನಟನಾಗಿ ಸಿನಿ ಜರ್ನಿ ಶುರು ಮಾಡಿದರು. ಹೀರೋ ಆಗಿ ಹಲವು ವರ್ಷಗಳಿಂದ, ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ನೆಚ್ಚಿನ ನಟನಾಗಿದ್ದಾರೆ ಜಗ್ಗಣ್ಣ.
ಮೈಸೂರಿನಲ್ಲಿ ಸುತ್ತಾಡಿದ ನಟ ಜಗ್ಗೇಶ್!
ನಟ ಜಗ್ಗೇಶ್ ಸದ್ಯ ಮೈಸೂರಿನಲ್ಲಿ ಸುತ್ತಾಡುತ್ತದ್ದಾರೆ. ರಾಘವೇಂದ್ರ ಸ್ಟೋರ್ಸ್ ಚಿತ್ರದ ಶೂಟಿಂಗ್‌ಗಾಗಿ ಜಗ್ಗೇಶ್ ಮೈಸೂರಿನಲ್ಲಿ ಇದ್ದಾರೆ. ಅಲ್ಲಿ ಸಿಕ್ಕ ಅಭಿಮಾನಿಗಳ ಜೊತೆಗೆ ನಿಂತು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಕೂಡ ಜಗ್ಗೇಶ್ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಶೂಟಿಂಗ್ ಬಿಡುವಿನ ಸಮಯದಲ್ಲಿ ಸಹ ನಟರಾದ ಮಿತ್ರ ಮತ್ತು ರವಿಗೌಡರ ಜೊತೆಗೆ ಜಗ್ಗೇಶ್ ಕಾಲ ಕಳೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ರಾಘವೇಂದ್ರ ಸ್ಟೋರ್ಸ್ ಮತ್ತೊಂದು ಲುಕ್ ರಿವೀಲ್!
ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ ನಟ ಜಗ್ಗೇಶ್ ಅವರದ್ದು ಅಡುಗೆ ಭಟ್ಟನ ಪಾತ್ರ ಹಾಗಾಗಿ ಜಗ್ಗೇಶ್ ಅವರು ಅಡುಗೆ ಭಟ್ಟನ ಅವತಾರದಲ್ಲಿ ಇರುತ್ತಾರೆ ಎನ್ನುವುದು ಗೊತ್ತಿರುವ ವಿಚಾರ. ಆದರೆ ವಿಡಿಯೋ ಒಂದರಲ್ಲಿ ನಟ ಜಗ್ಗೇಶ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಸೂಟು ಬೂಟು ತೊಟ್ಟು ಜಗ್ಗೇಶ್ ಸ್ಟೈಲ್ ಆಗಿ ನಡೆದು ಕೊಂಡು ಬರುತ್ತಾರೆ. ಅವರು ಮೇಕಪ್‌ನಲ್ಲಿ ಇರುವ ಕಾರಣ ಇದು ಕೂಡ ರಾಘವೇಂದ್ರ ಸ್ಟೋರ್ಸ್ ಚಿತ್ರದ ಒಂದು ಅವತಾರ ಎನ್ನುವುದು ರಿವೀಲ್ ಆಗಿದೆ.


Click it and Unblock the Notifications











