ಇಲ್ಲಿಯವರೆಗೆ ಜೈಲಿನಲ್ಲಿ ದಾಸನ ದರ್ಶನ ಭಾಗ್ಯ ಯಾರಿಗೆಲ್ಲ ಸಿಕ್ಕಿದೆ ಗೊತ್ತಾ..?
ಒಂದು ಕಡೆ ಜನಪ್ರಿಯತೆಯ ಅಮಲಿನಲ್ಲಿ ಮೈ ಮರೆತು ದರ್ಶನ್ ಜೈಲು ಪಾಲಾಗಿದ್ದಾರೆ. ಇನ್ನೊಂದು ಕಡೆ ವಿವೇಚನೆಯನ್ನು ಕಳೆದುಕೊಂಡು, ಮಾನವೀಯತೆಯನ್ನೇ ಮರೆತವರಂತೆ ಇವರ ಕೆಲ ಅಂಧಾಭಿಮಾನಿಗಳು ವರ್ತಿಸುತ್ತಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿ ನೀಡಿರುವ ಖೈದಿ ನಂಬರ್ 6016 ಎನ್ನುವ ನಂಬರನ್ನೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ.
ಇನ್ನೂ.. ದರ್ಶನ್ ವಿಚಾರದಲ್ಲಿ ಕನ್ನಡ ಚಿತ್ರರಂಗದಲ್ಲಿ ಎರಡು ಬಣಗಳಾಗಿವೆ. ಒಂದು ವರ್ಗ ದರ್ಶನ್ ಪರ ನಿಂತರೆ ಇನ್ನೊಂದು ಬಳಗ ದರ್ಶನ್ ಇರುವ ವಿರುದ್ಧ ದಿಕ್ಕಿನಲ್ಲಿದೆ. ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ ಈ ಐವತ್ತು-ಐವತ್ತೈದು ದಿನದಲ್ಲಿ ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್ ಅವರ ದರ್ಶನವನ್ನು ಯಾರೆಲ್ಲ ಪಡೆದಿದ್ದಾರೆ ಅನ್ನುವ ಮಾಹಿತಿ ಸದ್ಯಕ್ಕೆ ಹೊರ ಬಂದಿದೆ.

ಹೌದು, ಅಸಲಿಗೆ.. ಆರ್ ಟಿ ಐ ಕಾರ್ಯಕರ್ತ ನರಸಿಂಹಮೂರ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರವನ್ನು ನೀಡಿರುವ ಪೊಲೀಸರು ದರ್ಶನ್ ಅವರನ್ನು ಇಲ್ಲಿಯವರೆಗೆ ಯಾರೆಲ್ಲ ಬಂದು ಭೇಟಿಯಾಗಿದ್ದಾರೆ ಎಂಬ ವಿಚಾರವನ್ನೂ ಬಹಿರಂಗಗೊಳಿಸಿದ್ದಾರೆ.
ಆ ಪ್ರಕಾರ ಜೂನ್ 25ರಿಂದ ಜುಲೈ 26ರವರೆಗೆ ಸತಿ ವಿಜಯಲಕ್ಷ್ಮೀ ತಮ್ಮ ಪತಿಯ ದರ್ಶನವನ್ನೂ ನಾಲ್ಕು ಬಾರಿ ಪಡೆದಿದ್ದಾರೆ. ಇನ್ನೂ ದರ್ಶನ್ ಅವರ ಜೊತೆ ರಕ್ತ ಹಂಚಿಕೊಂಡಿರುವ ಅವರ ಸಹೋದರ ದಿನಕರ್ ತೂಗುದೀಪ ಮೂರು ಬಾರಿ ಜೈಲಿಗೆ ತೆರಳಿ ತಮ್ಮ ಅಣ್ಣನನ್ನೂ ಮಾತನಾಡಿಸಿಕೊಂಡು ಬಂದಿದ್ದರೆ, ದರ್ಶನ್ ಅವರ ತಾಯಿ ಮೀನಾ ತೂಗುದೀಪ ಒಂದು ಭಾರೀ ದರ್ಶನ್ ಅವರನ್ನು ನೋಡಿಕೊಂಡು ಮಾತನಾಡಿಸಿಕೊಂಡು ಬಂದಿದ್ದಾರೆ

ಜೂನ್ 29ರಂದು ದರ್ಶನ್ ಅವರ ಆಪ್ತ ಸ್ನೇಹಿತೆ ರಕ್ಷಿತಾ ಅವರ ಪತಿ ಪ್ರೇಮ್ ಜೊತೆ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ಧಾರೆ. ರೆಜಿಸ್ಟರ್ ಬುಕ್‌ನಲ್ಲಿ ಸ್ನೇಹಿತೆ ಎಂದು ನಮೂದಿಸಿದ್ದಾರೆ. ಜುಲೈ ಒಂದರಂದು ದಿನಕರ್ ಮತ್ತು ಅವರ ತಾಯಿ ದರ್ಶನ್ ಜೊತೆ ಕಷ್ಟ-ಸುಖ ಹಂಚಿಕೊಂಡಿದ್ದರೆ, ಜುಲೈ 02ರಂದು ಈ ಇಡೀ ಕರ್ಮಕಾಂಡಕ್ಕೆ ಕಾರಣವಾದ ಪವಿತ್ರಾ ಗೌಡ ಅವರ ಸ್ನೇಹಿತೆ ಸಮತಾ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ಧಾರೆ. ಇನ್ನೂ ಜುಲೈ ಹತ್ತರಂದು ತಮ್ಮ ಮಗನ ಜೊತೆ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿ ಮಾಡಿದ್ದರೆ, ಅವತ್ತೇ ಸುಶಾಂತ್ ಕೂಡ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ಇನ್ನೂ ಮರು ದಿನ ಜುಲೈ ಹನ್ನೊಂದರಂದು ಕನ್ನಡ ಚಿತ್ರರಂಗದ ಭರವಸೆಯ ನಾಯಕ ಧನ್ವೀರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ್ ದರ್ಶನ್ ದರ್ಶನದಿಂದ ಪುನೀತರಾಗಿದ್ದಾರೆ. ಜುಲೈ ಹದಿನೈದರಂದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ನಿತೀನ್, ದಿನಕರ್, ಮತ್ತು ಅನುಶ್ ಶೆಟ್ಟಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.

ಜುಲೈ ಹತ್ತೊಂಬತ್ತರಂದು ದರ್ಶನ್ ಪುಟ್ಟಣ್ಣಯ್ಯ, ರಾಘವ, ರಾಬರ್ಟ್ ಮತ್ತು ಕಾಟೇರ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಜೊತೆ ಹೇಮಂತ, ನವೀನ್, ಕೀರ್ತನ್, ಕುಮಾರ್ ದರ್ಶನ್ ಅವರ ಕುಶಲೋಪರಿ ವಿಚಾರಿಸಿಕೊಂಡು ಬಂದಿದ್ದಾರೆ. ಜುಲೈ 22ರಂದು ವಿನೋದ್ ರಾಜ್ , ದಿನಕರ್ ತೂಗುದೀಪ್, ಸುಶಾಂತ್ ನಾಯ್ಡು, ಶ್ರೀನಿವಾಸ್ ಜೊತೆ ವಿಜಯಲಕ್ಷ್ಮಿ ತಮ್ಮ ಪತಿಯನ್ನೂ ಮಾತನಾಡಿಸಿಕೊಂಡು ಬಂದಿದ್ದಾರೆ
ಇನ್ನೂ ದರ್ಶನ್ ಅವರನ್ನು ನೋಡಲು ಬಂದು ನಿರಾಸೆಯಿಂದ ಒಮ್ಮೆ ಹೋಗಿದ್ದ ಸಾಧು ಕೋಕಿಲಾ ಜುಲೈ 25ರಂದು ದರ್ಶನ್ ಅವರನ್ನು ಜೈಲಿನಲ್ಲಿ ಕಣ್ತುಂಬಿಕೊಂಡಿದ್ದಾರೆ. ಅದೇ ದಿನ ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ ಕೂಡ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.


Click it and Unblock the Notifications











