ಕುಟ್ಟಿ ರಾಧಿಕಾ ಸ್ಯಾಂಡಲ್‌ವುಡ್‌ನ ಶ್ರೀಮಂತ ನಟಿ; 34 ಸಿನಿಮಾಗಳ ನಾಯಕಿ ಎಷ್ಟು ಕೋಟಿ ಒಡತಿ?

By ಫಿಲ್ಮಿಬೀಟ್ ಡೆಸ್ಕ್

ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಚಿತ್ರರಂಗದಲ್ಲಿ ಯಶಸ್ಸು ಪಡೆದ ನಟಿಯೀಗ ಕನ್ನಡ ಚಿತ್ರರಂಗದ ಶ್ರೀಮಂತ ನಟಿ. ತಮ್ಮ ನಟನೆಯಿಂದಲೂ, ವಿವಾದಗಳಿಂದಲೂ ಚಿತ್ರರಂಗದಲ್ಲಿ ಆಕ್ಟಿವ್ ಆಗಿರುವ ರಾಧಿಕಾ ಕುಮಾರಸ್ವಾಮಿ ಸದ್ಯ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

2002ನೇ ಇಸವಿಯಲ್ಲಿ 'ನಿನಗಾಗಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರಗೆ ನಾಯಕಿಯಾಗಿ ನಟಿಸಿದ್ದ ರಾಧಿಕಾಗೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕಿತ್ತು. ಇಲ್ಲಿಂದ ಸುಮಾರು ಮೂವತ್ತು ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Do you know Kannada actress Radhika Kumaraswamy s estimated net worth

ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳುವಷ್ಟು ಜನಪ್ರಿಯರಾಗಿದ್ದರು. ಸ್ಟಾರ್ ನಟರೊಂದಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ, ಮದುವೆಯ ಒಂದು ನಿರ್ಧಾರ ಇವರನ್ನು ಸಿನಿಮಾರಂಗದಿಂದ ದೂರ ಉಳಿಸಿತ್ತು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಜೊತೆಗಿನ ರಹಸ್ಯ ಮದುವೆ ನಟಿಯ ವೃತ್ತಿ ಬದುಕಿಗೆ ಹಿನ್ನೆಡೆಯಾಗಿತ್ತು.

2010ರಲ್ಲಿ ರಾಧಿಕಾ ಕುಮಾರಸ್ವಾಮಿ ತನ್ನ ವಿಷಯವನ್ನು ಬಹಿರಂಗ ಪಡಿಸಿದ್ದರು. 2006ರಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಯನ್ನು ಮದುವೆ ಆಗಿದ್ದಾಗಿ, ರಾಧಿಕಾ ಕುಮಾರಸ್ವಾಮಿ 2010ರಲ್ಲಿ ಬಹಿರಂಗವಾಗಿ ಹೇಳಿದ್ದರು. ಇವರಿಗೆ ಶಮಿಕಾ ಕುಮಾರಸ್ವಾಮಿ ಎಂಬ ಮಗಳಿದ್ದಾಳೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕೂಡ ಎರಡನೇ ಮದುವೆ ಆಗಿದ್ದನ್ನು ಓಪನ್ ಆಗಿ ಒಪ್ಪಿಕೊಂಡಿದ್ದರು.

ರಾಧಿಕಾ ಕುಮಾರಸ್ವಾಮಿ ಮದುವೆ ಆದಾಗ ಅವರಿಗೆ ಕೇವಲ 27 ವರ್ಷ ಆಗಿತ್ತು. ಚಿತ್ರರಂಗದಲ್ಲಿ ಇನ್ನೂ ಒಂದಿಷ್ಟು ವರ್ಷಗಳ ಕಾಲ ನಟಿಸುವುದಕ್ಕೆ ಅವಕಾಶಗಳು ಇದ್ದವು. ಅಷ್ಟರಲ್ಲಿಯೇ ರಾಧಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯ ಎರಡನೇ ಪತ್ನಿಯಾಗಿದ್ದರು.

Do you know Kannada actress Radhika Kumaraswamy s estimated net worth

ಸದ್ಯ ರಾಧಿಕಾ ಕುಮಾರಸ್ವಾಮಿ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಆಯ್ಕೆ ಮಾಡಿಕೊಂಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಇನ್ನೂ ಮೆರೆಯಬೇಕಾಗಿದ್ದ ರಾಧಿಕಾ ಇಂದು ಕನ್ನಡ ಚಿತ್ರರಂಗದ ಅತೀ ಶ್ರೀಮಂತ ನಟಿ. ಸಿನಿಮಾದ ನಟನೆ, ನಿರ್ಮಾಣದ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿರುವ ನಟಿಯ ಒಟ್ಟು ಆಸ್ತಿ 124 ಕೋಟಿ ರೂಪಾಯಿ. ಆಗ ಎಚ್‌ಡಿ ಕುಮಾರಸ್ವಾಮಿ ಆಸ್ತಿ 181 ಕೋಟಿ ರೂಪಾಯಿ ಎಂದು ಡಿಎನ್‌ಎ ವೆಬ್‌ಸೈಟ್ ವರದಿ ಮಾಡಿದೆ.

ರಾಧಿಕಾ ಕುಮಾರಸ್ವಾಮಿ ಸದ್ಯ ತಮ್ಮದೇ ಹೋಮ್ ಪ್ರೊಡಕ್ಷನ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. 'ಬೈರಾದೇವಿ' ಹಾಗೂ ಪ್ಯಾನ್ ಇಂಡಿಯಾ ಸಿನಿಮಾ 'ಅಜಾಗೃತ' ಎರಡು ಸಿನಿಮಾಗಳು ರಿಲೀಸ್‌ ಆಗಬೇಕಿದೆ. ಸಿನಿಮಾ ನಿಧಾನಗತಿಯಲ್ಲಿ ಸಾಗುತ್ತಿದ್ದು, ರಿಲೀಸ್ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಈ ಮಧ್ಯೆ ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದು, ಆಗಾಗ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

More from Filmibeat

English summary
Kannada actress Radhika Kumaraswamy net worth and future projects
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X