For Quick Alerts
  ALLOW NOTIFICATIONS  
  For Daily Alerts

  ಸೋನು ಗೌಡ ಆಪ್ತ ಗೆಳತಿ ಕೀರ್ತಿ ಸುರೇಶ್: ಕೀರ್ತಿಯನ್ನು ಏನಂತ ಕರೀತಾರೆ ಸೋನು?

  |

  ನಟಿ ಕೀರ್ತಿ ಸುರೇಶ್ ತಮಿಳು, ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಕೀರ್ತಿ ಸುರೇಶ್ ಇಷ್ಟು ವರ್ಷದಲ್ಲಿ ಒಂದು ಕನ್ನಡದ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಕೀರ್ತಿಗೆ ಕನ್ನಡ ಚಿತ್ರರಂಗದ ನಟಿ ಬಹುಕಾಲದ ಗೆಳತಿ ಅಂದರೆ ನಂಬಲೇ ಬೇಕು.

  ಈ ವಿಚಾರ ಇಷ್ಟು ದಿನ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಈ ವಿಚಾರ ಹೊರ ಬಂದಿದೆ. ಕನ್ನಡದ ಹೆಸರಾಂತ ನಟಿ ಸೋನು ಗೌಡ ಹಾಗೂ ಕೀರ್ತಿ ಸುರೇಶ್ ಬಹುಕಾಲದ ಗೆಳತಿಯರು. ಇಷ್ಟು ದಿನ ಈ ವಿಚಾರ ಗೊತ್ತಿಲ್ಲದೆ ಇರುವವರಿಗೆ ಇದು ಅಚ್ಚರಿ ಎನಿಸಬಹುದು.

  ಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್: ಛೀ.. ಎಂದ ನೆಟ್ಟಿಗರುಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್: ಛೀ.. ಎಂದ ನೆಟ್ಟಿಗರು

  ಆದರೆ ಈ ಬಗ್ಗೆ, ಕೀರ್ತಿ ಸುರೇಶ್ ಸ್ನೇಹದ ಬಗ್ಗೆ ನಟಿ ಸೋನು ಗೌಡ ಫಿಲ್ಮಿ ಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಕೀರ್ತಿ ಸುರೇಶ್ ಬಗ್ಗೆ ಸೋನು ಗೌಡ ಏನಂತಾರೆ ಎನ್ನುವುದನ್ನು ಮುಂದೆ ಓದಿ....

   'ಸರ್ಕಾರು ವಾರಿ ಪಾಟ' ಚಿತ್ರ ಒಟಿಟಿಗೆ ಎಂಟ್ರಿ ಕೊಡೋದು ಯಾವಾಗ? ಚಿತ್ರತಂಡ ಹೇಳಿದ್ದೇನು? 'ಸರ್ಕಾರು ವಾರಿ ಪಾಟ' ಚಿತ್ರ ಒಟಿಟಿಗೆ ಎಂಟ್ರಿ ಕೊಡೋದು ಯಾವಾಗ? ಚಿತ್ರತಂಡ ಹೇಳಿದ್ದೇನು?

  ಸೋನು ಗೌಡ ಫೋಟೊ ಹಂಚಿಕೊಂಡ ಕೀರ್ತಿ!

  ನಟಿ ಕೀರ್ತಿ ಸುರೇಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದು ಸಿನಿಮಾಗೆ ಸಂಬಂಧ ಪಟ್ಟ ಫೋಟೊ ಅಲ್ಲ. ಬದಲಿಗೆ ಕೀರ್ತಿ ಸುರೇಶ್ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗಿಯಾದ ಫೋಟೊ. ಈ ಫೋಟೊದಲ್ಲಿ ಕನ್ನಡದ ನಟಿ ಸೋನು ಗೌಡ ಕೂಡ ಇದ್ದಾರೆ. ಕೀರ್ತಿ ಸುರೇಶ್ ಜೊತೆಗೆ ಸೋನು ಗೌಡ ಕೂಡ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ

  ಕೀರ್ತಿ ಬಗ್ಗೆ ಮಾತಾಡಿದ ಸೋನು ಗೌಡ!

  ಕೀರ್ತಿ ಬಗ್ಗೆ ಮಾತಾಡಿದ ಸೋನು ಗೌಡ!

  ಈ ಇಬ್ಬರನ್ನು ಮೊದಲ ಬಾರಿಗೆ ಒಟ್ಟಿಗೆ ನೋಡಿದರೆ, ಯಾವುದೋ ಸಿನಿಮಾಗಾಗಿ ಇಬ್ಬರು ಜೊತೆಗೂಡಿರಬಹುದು ಎಂದೆನಿಸುವುದು ಸಹಜ. ಆದರೆ ಇವರಿಬ್ಬರೂ ಬಹುಕಾಲದ ಗೆಳೆಯರು. ಕೀರ್ತಿ ಸುರೇಶ್ ಮತ್ತು ಸೋನು ಗೌಡ ಒಂದೇ ಸ್ನೇಹಿತರ ಗ್ಯಾಂಗ್‌ನಲ್ಲಿ ಇದ್ದಾರೆ. ಈ ಬಗ್ಗೆ ಸೋನು ಗೌಡ ಹೇಳಿದ್ದು ಹೀಗೆ "ನಾನು ಕೀರ್ತಿ ಸುರೇಶ್ ಬಹುಕಾಲದ ಸ್ನೇಹಿತರು. ಕಾಮನ್ ಫ್ರೆಂಡ್ ಒಬ್ಬರ ಮೂಲಕ ನಮ್ಮ ಪರಿಚಯವಾಯಿತು. ನಂತರ ನಾವು ಕ್ಲೋಸ್ ಆದೆವು. ಹೆಚ್ಚು ಸಮಯದಿಂದ ನಾನು ಕೀರ್ತಿಯನ್ನು ಬಲ್ಲೆ" ಎಂದಿದ್ದಾರೆ.

  ಕೀರ್ತಿಯನ್ನು ಕಿಟ್ಟಿ ಎಂದು ಕರೀತಾರೆ ಸೋನು!

  ಕೀರ್ತಿಯನ್ನು ಕಿಟ್ಟಿ ಎಂದು ಕರೀತಾರೆ ಸೋನು!

  ಈ ಇಬ್ಬರು ಇತ್ತೀಚೆಗೆ ತಮ್ಮ ಸ್ನೇಹಿತರ ಮದುವೆ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ. ಮದುವೆ ನಂತರದ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ. ಪಾರ್ಟಿ ಫೋಟೊಗಳನ್ನು ಕೀರ್ತಿ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗೆ ಸೋನು ಗೌಡ 'ಕಿಟ್ಟಿ' ಎಂದು ಕಮೆಂಟ್ ಮಾಡಿದ್ದಾರೆ. ಹಾಗಾಗಿ ಸೋನು ಗೌಡ, ಕೀರ್ತಿಯನ್ನು ಕಿಟ್ಟಿ ಎಂದು ಕರೆಯುತ್ತಾರೆ ಎನ್ನುವುದು ಗೊತ್ತಾಗಿದೆ.

  ಸೋನು, ಕೀರ್ತಿ ಸಿನಿಮಾಗಳಲ್ಲಿ ಬ್ಯುಸಿ!

  ಸೋನು, ಕೀರ್ತಿ ಸಿನಿಮಾಗಳಲ್ಲಿ ಬ್ಯುಸಿ!

  ಇನ್ನು ನಟಿ ಸೋನು ಗೌಡ, ಕೀರ್ತಿ ಸುರೇಶ್ ತಮ್ಮದೇ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಿನಿಮಾ ಮಾಡುತ್ತಿರುವ ಸೋನು ಗೌಡ 'ವೆಡ್ಡಿಂಗ್ ಗಿಫ್ಟ್' ಚಿತ್ರ ರಿಲೀಸ್ ಆಗ್ಬೇಕಿದೆ. ಇನ್ನು ಕೀರ್ತಿ ಸುರೇಶ್ 'ಸರ್ಕಾರು ವಾರಿ ಪಾಟ' ಚಿತ್ರ ತೆರೆಕಂಡು ಪ್ರಶಂಸೆ ಪಡೆದಿದೆ.

  English summary
  Do You Know Keerthy Suresh Is Best Friend Of Kannada Actress Sonu Gowda
  Tuesday, June 14, 2022, 16:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X