'2500 ಕೋಟಿ' ಗಳಿಕೆ ಮಾಡಿದ ಕನ್ನಡದ ಏಕೈಕ ಚಿತ್ರ ಯಾವುದು ಅಂತ ಗೊತ್ತಾದ್ರೆ ಪಕ್ಕಾ ಶಾಕ್ ಆಗ್ತೀರಾ.!
Recommended Video
ಇಲ್ಲಿಯವರೆಗೂ ದಾಖಲೆ ಬರೆದ ಕನ್ನಡ ಚಿತ್ರಗಳ ಕಲೆಕ್ಷನ್ ಎಷ್ಟಿರಬಹುದು ಎಂಬ ಊಹೆ ನಿಮಗೆ ಇದ್ಯಾ.? ಕರ್ನಾಟಕದ ಮೂಲೆ ಮೂಲೆಯಲ್ಲೂ ಸೌಂಡ್ ಮಾಡಿ ಶತದಿನೋತ್ಸವ ಆಚರಿಸಿಕೊಂಡ ಚಿತ್ರಗಳು ನೂರು ಕೋಟಿ ಕಲೆಕ್ಷನ್ ಗಡಿ ದಾಟಿದ್ದರೆ ಅದೇ ಹಿಸ್ಟ್ರಿ.!
ಇನ್ನೂ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಸದ್ದು ಮಾಡಿದ 'ಕೆ.ಜಿ.ಎಫ್' ಚಿತ್ರದ ಕಲೆಕ್ಷನ್ ಅಬ್ಬಬ್ಬಾ ಅಂದ್ರೆ 250 ಕೋಟಿ.! ಹೀಗಿರುವಾಗ, ಕನ್ನಡ ಚಿತ್ರವೊಂದು ಬರೋಬ್ಬರಿ 2500 ಕೋಟಿ ಕಲೆಕ್ಷನ್ ಮಾಡಿದೆ ಕಣ್ರೀ.!
ಕೇವಲ 30 ಲಕ್ಷ ಬಜೆಟ್ ನಲ್ಲಿ ತಯಾರಾದ 'ಆ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ 2500 ಕೋಟಿ ಕಲೆಕ್ಷನ್ ಮಾಡಿದ್ಯಂತೆ. ಹಾಗಂತ ನಾವು ಹೇಳ್ತಿಲ್ಲ ಸ್ವಾಮಿ. ವಿಕಿಪೀಡಿಯಾ ಜಗಜ್ಜಾಹೀರು ಮಾಡಿದೆ.
ಹಾಗಾದ್ರೆ, ಸ್ಯಾಂಡಲ್ ವುಡ್ ನಲ್ಲಿ 'ಇತಿಹಾಸ' ಸೃಷ್ಟಿಸಿರುವ ಆ ಸಿನಿಮಾ ಯಾವುದು ಅಂತ ಗೊತ್ತಾದ್ರೆ, ನೀವು ಶಾಕ್ ಆಗೋದು ಪಕ್ಕಾ..

2500 ಕೋಟಿ ಕಲೆಕ್ಷನ್ ಮಾಡಿದ ಚಿತ್ರ ಯಾವುದು.?
ಬಾಕ್ಸ್ ಆಫೀಸ್ ನಲ್ಲಿ 2500 ಕೋಟಿ ಕಲೆಕ್ಷನ್ ಮಾಡಿರುವ ಚಿತ್ರ ಬೇರೆ ಯಾವುದೂ ಅಲ್ಲ. ಫೈರಿಂಗ್ ಸ್ಟಾರ್, ಫಿನಾಯಿಲ್ ಸ್ಟಾರ್ ಹುಚ್ಚ ವೆಂಕಟ್ ಅಭಿನಯದ 'ಹುಚ್ಚ ವೆಂಕಟ್' ಚಿತ್ರ. ಹೀಗೊಂದು ತಪ್ಪು ಮಾಹಿತಿ ಗೂಗಲ್ ಸರ್ಚ್ ನಲ್ಲಿ ವಿಕಿಪೀಡಿಯಾದಲ್ಲಿ ದಾಖಲಾಗಿದೆ.

ಯಾವ ತರಹದ ಸಿನಿಮಾ.?
30 ಲಕ್ಷ ಬಜೆಟ್ ನಲ್ಲಿ ತಯಾರಾದ 'ಹುಚ್ಚ ವೆಂಕಟ್' ಸಿನಿಮಾ ಯಾವ ಪ್ರಕಾರದ್ದು ಅನ್ನೋದಕ್ಕೆ ಇದೇ ವಿಕಿಪೀಡಿಯಾದಲ್ಲಿ ವಿವರಣೆ ಇದೆ. ವಿಕಿಪೀಡಿಯಾದ ಪ್ರಕಾರ, 'ಹುಚ್ಚ ವೆಂಕಟ್' ಚಿತ್ರ ಕನ್ನಡ, ರೋಮ್ಯಾಂಟಿಕ್, ಡೈನಾಮಿಕ್, ಆಕ್ಷನ್, ಮಿಸ್ಟರಿ, ಸೈಕಲಾಜಿಕಲ್, ಹಾರರ್ ಮತ್ತು ಥ್ರಿಲ್ಲರ್ ಚಿತ್ರವಂತೆ.!

ಕಾಲೆಳೆಯುತ್ತಿರುವ ಕನ್ನಡ ಸಿನಿ ಪ್ರಿಯರು.!
''ಕನ್ನಡದ ಅತಿ ಹೆಚ್ಚು ಗಳಿಕೆಯ ಚಿತ್ರ ಯಾವುದು.. ಕೆ.ಜಿ.ಎಫ್, ರಾಜಕುಮಾರ, ಯಜಮಾನ, ಊಹೂಂ.. 2500 ಕೋಟಿ ಗಳಿಸಿದ್ದು ಇದ್ಯಾವುದೂ ಅಲ್ಲ'' ಎಂದು ರವೀಂದ್ರ ವಂಶಿ ಎಂಬುವರು ಫೇಸ್ ಬುಕ್ ನಲ್ಲಿ ಹುಚ್ಚ ವೆಂಕಟ್ ಕಾಲೆಳೆದಿದ್ದಾರೆ. ''ಪ್ರೌಡ್ ಆಫ್ ಯೂ ವೆಂಕಟ್'' ಎನ್ನುತ್ತ ಅನೇಕರು ನಗಾಡುತ್ತಿದ್ದಾರೆ.

ಎಡಿಟ್ ಮಾಡಲಾಗಿದೆ
ಫೇಸ್ ಬುಕ್ ನಲ್ಲಿ ಟ್ರೋಲ್ ಆಗುತ್ತಿದ್ದ ಹಾಗೆ ವಿಕಿಪೀಡಿಯಾದ 'ಹುಚ್ಚ ವೆಂಕಟ್ (ಸಿನಿಮಾ)' ಮುಖಪುಟದಲ್ಲಿ ಬಾಕ್ಸ್ ಆಫೀಸ್ - 25 ಲಕ್ಷ ಅಂತ ಎಡಿಟ್ ಮಾಡಲಾಗಿದೆ. ಆದ್ರೆ, ಗೂಗಲ್ ಸರ್ಚ್ ನಲ್ಲಿ ಮಾತ್ರ ಇನ್ನೂ 2500 ಕೋಟಿ ಅಂತಲೇ ತೋರಿಸುತ್ತಿದೆ. ಅಸಲಿಗೆ, ಹುಚ್ಚ ವೆಂಕಟ್ ಚಿತ್ರ 25 ಲಕ್ಷವಾದರೂ ಗಳಿಸಿದ್ಯಾ ಅನ್ನೋದೇ ನಮ್ಮ ಪ್ರಶ್ನೆ.!

ಎಡವಟ್ಟುಗಳು ಒಂದೆರಡಲ್ಲ.!
ವಿಕಿಪೀಡಿಯಾ.. ಮಾಹಿತಿ ಹಂಚುವ ತಾಣ. ವಿಕಿಪೀಡಿಯಾಗಾಗಿ ಯಾರು ಬೇಕಾದರೂ ರಿಜಿಸ್ಟರ್ ಆಗಬಹುದು. ರಿಜಿಸ್ಟರ್ ಆದವರಿಗೆ ವಿಕಿಪೀಡಿಯಾದಲ್ಲಿ ಬರೆಯುವ, ಎಡಿಟ್ ಮಾಡುವ ಅವಕಾಶ ಸಿಗುತ್ತದೆ. ಹೀಗಾಗಿ, ಕೆಲವರಿಂದ ಕೆಲ ತಪ್ಪು ಮಾಹಿತಿಗಳು, ಎಡವಟ್ಟುಗಳು ಆಗಾಗ ಘಟಿಸುತ್ತಿರುತ್ತವೆ.


Click it and Unblock the Notifications











