07 ವರ್ಷದ ಪ್ರೀತಿ, 04 ವರ್ಷದ ದಾಂಪತ್ಯ, ಯುವ - ಶ್ರೀದೇವಿ ನಡುವೆ ಹೀಗೆ ಅರಳಿತ್ತು ಅನುರಾಗ...!
ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ಇವಳಿಲ್ಲದ್ರೆ ಅವಳು.. ಅವಳು ಅಲ್ಲ ಅಂದರೆ ಮತ್ತೊಬ್ಬಳು.. ಹಂಗಾಗೇ ಈ ಪ್ರೀತೀಲೂ ನಾನಾ ವೆರೈಟಿಗಳು ಬಂದ್ಬಿಟ್ಟಿವೆ. ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ಚಿತ್ರರಂಗದಲ್ಲಿನ ಅನೇಕರು ಯೋಚನೆ ಮಾಡ್ತಾರೆ. ಮುಂದಿರೋ ಲೈಫ್‌ನೇ ಮರೆತು ಬಿಡ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ.
ಹೌದು, ನಿಮಗೆ ಗೊತ್ತಿರಲಿ .. ಯುವರಾಜ್ ಕುಮಾರ್ ಮತ್ತು ಶ್ರೀದೇವಿಯವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್. 26 ಮೇ 2019ರಲ್ಲಿ ಮದುವೆಯಾಗುವ ಮುನ್ನ 07 ವರ್ಷ ಜೊತೆಯಲ್ಲಿ ಓಡಾಡಿದವರು ಇವರು ಇಬ್ಬರು. ಆರಂಭದಲ್ಲಿದ್ದ ಈ ಸ್ನೇಹ ಆ ನಂತರ ಪ್ರೇಮದ ಸ್ವರೂಪ ಪಡೆಯಿತು.

ಇನ್ನೂ ಶ್ರೀದೇವಿಯವರ ಮೂಲ ಮೈಸೂರು. ಆದರೂ.. ಯುವರಾಜ್ ಕುಮಾರ್, ಗುರುರಾಜ್ ಕುಮಾರ್ ಆಗಿದ್ದ ಆ ಕಾಲದಲ್ಲಿ... ಶ್ರೀದೇವಿ ಯುವ ಅವರನ್ನ ನೆರಳಿನಂತೆಯೇ ಹಿಂಬಾಲಿಸಿದ್ದರು. ಹುಟ್ಟಿದಾಗಿನಿಂದ ಸಿನಿಮಾ ವಾತಾವರಣದಲ್ಲೇ ಬೆಳೆದ ಯುವರಾಜ್ ಕುಮಾರ್, ತಾವು ನಾಯಕನಾಗುವ ಮುನ್ನ ಸಹೋದರ ವಿನಯ್ ರಾಜ್ ಕುಮಾರ್ ಅವರ ಸಿನಿಮಾಗಳ ವಿಚಾರದಲ್ಲೂ ಸಾಕಷ್ಟು ಮುತುವರ್ಜಿ ವಹಿಸಿಸುತ್ತಿದ್ದರು. ಮೇಲ್ವಿಚಾರಣೆಯನ್ನೂ ನಡೆಸುತ್ತಿದ್ದರು. ಆಗೆಲ್ಲ ಯುವರಾಜ್ ಕುಮಾರ್ ಅವರಿಗೆ ಜೊತೆಯಾಗುತ್ತಿದ್ದು
ಇದೇ ಶ್ರೀದೇವಿ ಭೈರಪ್ಪ.
ಇನ್ನೂ ಏಪ್ರಿಲ್ 24-2017ರಲ್ಲಿ ಬಡವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಎಂದೇ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ'ಯನ್ನ ಆರಂಭ ಮಾಡಲು ಯುವರಾಜ್ ಕುಮಾರ್ ಅಣಿಯಾದಾಗ ಕೂಡ ಶ್ರೀದೇವಿ ಭೈರಪ್ಪ ಮುಂದಾಳತ್ವ ವಹಿಸಿಕೊಂಡಿದ್ದರು. 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ'ಯ ಉಸ್ತುವಾರಿಯನ್ನೂ ಕೂಡ ಶ್ರೀದೇವಿ ವಹಿಸಿಕೊಂಡಿದ್ದರು.

ಇವೆಲ್ಲ ಕಾರಣಕ್ಕೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿಯವರನ್ನ ಜೊತೆಯಲ್ಲಿ ನೋಡಿದ್ದ ಅನೇಕರು ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದರು. ದೊಡ್ಮನೆಗೆ ತಕ್ಕ ಸೊಸೆ ಎಂದು ದೊಡ್ಮನೆ ಅಭಿಮಾನಿಗಳು ಕೂಡ ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ.. ದುರಂತ ಅವತ್ತುಇಷ್ಟ ಪಟ್ಟು ಮದುವೆಯಾದವರು ಇವತ್ತು ಒಬ್ಬರ ಮುಖವನ್ನೊಬ್ಬರು ನೋಡಲು ಕಷ್ಟ ಪಡುತ್ತಿದ್ದಾರೆ. 07 ವರ್ಷದ ಪ್ರೀತಿ ಮತ್ತು 04 ವರ್ಷದ ದಾಂಪತ್ಯಕ್ಕೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಎಳ್ಳು ನೀರು ಬಿಡಲು ಮುಂದಾಗಿದ್ದಾರೆ.
ಒಟ್ನಲ್ಲಿ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಜೊತೆಯಾಗಿ ಬಾಳಬಹುದಿತ್ತು. ಬಾಳಬೇಕಿತ್ತು. ಮನಸ್ತಾಪ ಏನೇ ಇದ್ದರೂ ದೊಡ್ಡವರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಬಹುದಿತ್ತು. ಬಗೆಹರಿಸಿಕೊಳ್ಳಬೇಕಿತ್ತು. ಆದರೆ.. ಜೊತೆಯಲ್ಲಿರುವ ಆಲೋಚನೆಯನ್ನೇ ಮರೆತು, ದೂರವಾಗುವ ನಿರ್ಧಾರಕ್ಕೆ ಇಬ್ಬರು ಬಂದಿದ್ದು ನಿಜಕ್ಕೂ ಕೆಲವರಿಗೆ ಅಚ್ಚರಿ. ಇನ್ನೂ ಹಲವರಿಗೆ ಆಘಾತ. ಯಾಕೆಂದರೆ ಯಾರೆಂದರೆ ಯಾರು ನಿರೀಕ್ಷೆ ಮಾಡದ ಬೆಳವಣಿಗೆ ಇದು.


Click it and Unblock the Notifications











