»   » ಪುನೀತ್ ಗೆ 'ಇವರನ್ನು' ಕಂಡರೆ ಬಿಲ್ ಕುಲ್ ಆಗಲ್ವಂತೆ.!

ಪುನೀತ್ ಗೆ 'ಇವರನ್ನು' ಕಂಡರೆ ಬಿಲ್ ಕುಲ್ ಆಗಲ್ವಂತೆ.!

Posted By:
Subscribe to Filmibeat Kannada

ದೊಡ್ಮನೆಯ ಮತ್ತೊಂದು ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟನಿ' ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರತಂಡ 'ರನ್ ಆಂಟನಿ' ಚಿತ್ರದ ಪ್ರೊಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ.

ಇದೀಗ ಬಹಳ ಡಿಫರೆಂಟ್ ಆಗಿ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿರುವ ಚಿತ್ರತಂಡ ಒಂದು ಪ್ರಶ್ನೋತ್ತರ ಕಾರ್ಯಕ್ರಮವನ್ನು ಏರ್ಪಡಿಸಿದೆ. ಅಷ್ಟಕ್ಕೂ ಪ್ರಶ್ನೆ ಏನಪ್ಪಾ ಅಂದ್ರೆ, 'ನೀವು ಯಾವುದರಿಂದ ಓಡಿ ಹೋಗ್ತೀರಾ?....['ರನ್ ಆಂಟನಿ' ಆಡಿಯೋ ವಿಮರ್ಶೆ: ಗಮನ ಸೆಳೆಯುವ ಹಾಡುಗಳು]


Do you know what Actor Puneeth Rajkumar wants to run away from

ಈ ಪ್ರಶ್ನೆಗೆ ಈಗಾಗಲೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರು ಉತ್ತರ ನೀಡಿದ್ದಾರೆ. ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ನಿಮಗೂ ಭಾಗವಹಿಸುವ ಅವಕಾಶ ಇದೆ.


ಅಂದಹಾಗೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ 'ಸುಳ್ಳು ಹೇಳುವವರನ್ನು ಕಂಡರೆ ಆಗುವುದಿಲ್ಲವಂತೆ, ಹಾಗಾಗಿ ಸುಳ್ಳು ಹೇಳುವವರು ಅವರ ಪಕ್ಕಾ ಬಂದು ಸುಳ್ಳು ಹೇಳ್ತಾ ಇದ್ದಾರೆ ಅಂತ ಗೊತ್ತಾದ ತಕ್ಷಣ ಅಪ್ಪು ಅವರು ಅಲ್ಲಿಂದ ಓಡುತ್ತಾರಂತೆ'.[ನೀವು ಅಂದುಕೊಂಡಂಗಿಲ್ಲ ವಿನಯ್ ರವರ 'ರನ್ ಆಂಟನಿ' ಸಿನಿಮಾ.!]


ಹೀಗಂತ ಖುದ್ದು ಪುನೀತ್ ರಾಜ್ ಕುಮಾರ್ ಅವರು ಹೇಳಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ವಿಡಿಯೋ ಇಲ್ಲಿದೆ ನೋಡಿ....ಇನ್ನು ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಿಗರೇಟ್ ಸೇದುವವರನ್ನು ಕಂಡರೆ ಆಗುವುದಿಲ್ಲವಂತೆ, ಅವರ ಪಕ್ಕದಲ್ಲಿ ಯಾರಾದರೂ ಬಂದು ಸಿಗರೇಟ್ ಸೇದುತ್ತಿದ್ದಾರೆ ಅಂತ ಗೊತ್ತಾದ ತಕ್ಷಣ ಅವರು ಆ ಜಾಗದಿಂದ ಎಸ್ಕೇಪ್ ಆಗುತ್ತಾರಂತೆ'['ರನ್ ಆಂಟನಿ' ಟೀಸರ್ ಬಹಳ ಥ್ರಿಲ್ಲಿಂಗಾಗಿದೆ ಕಣ್ರೀ..!]


ಪವನ್ ಅವರ ಮಾತುಗಳನ್ನು ಅವರ ಬಾಯಿಂದಲೇ ಕೇಳಲು ಈ ವಿಡಿಯೋ ನೋಡಿ...ನೀವೂ ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿ, 'ರನ್ ಆಂಟನಿ' ಚಿತ್ರಕ್ಕೆ ಶುಭ ಹಾರೈಸಲು ಮುಕ್ತ ಅವಕಾಶ ಇದೆ. ಭಾಗವಹಿಸಲು ನೀವು ಮಾಡಬೇಕಾಗಿರುವುದು ಇಷ್ಟೇ. ನೀವು ಯಾವುದರಿಂದ ಓಡಿ ಹೋಗುತ್ತೀರಾ? ಅನ್ನೋ ಪ್ರಶ್ನೆಗೆ ವಿಡಿಯೋ ಮಾಡುವ ಮೂಲಕ ಉತ್ತರಿಸಿ, ಅದನ್ನು #irunaway #runantony ಅಂತ ಹ್ಯಾಶ್ ಟ್ಯಾಗ್ ಬಳಸಿ 'ರನ್ ಆಂಟನಿ' ಪೇಜ್ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿ.

English summary
Do you know what Kannada Actor Puneeth Rajkumar and director Pawan Wadeyar wants to run away from..?. Here is the reason, Watch this #irunaway Video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada