"ಇಂದಿನ ಸಿನಿಮಾ ಕ್ಷೇತ್ರ ಬಹಳ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ"; ಹಿರಿಯ ನಟಿ ತಾರಾ

By ಅನಿತಾ ಬನಾರಿ

ನಟಿ ತಾರಾ ಅನುರಾಧ ಎಲ್ಲರಿಗೂ ಚಿರಪರಿಚಿತ. ಹಲವಾರು ದಶಕಗಳಿಂದ ಕನ್ನಡ ಹಿರಿತೆರೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿರುವ ನಟಿ ತಾರಾ ಅನುರಾಧ ಇದೀಗ ತಮ್ಮ ನಟನ ಅನುಭವದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

"ನಲವತ್ತು ವರ್ಷಗಳ ಸುದೀರ್ಘ ನಟನ ಜರ್ನಿಯಲ್ಲಿ ನಾನು ಹಲವಾರು ವಿಚಾರಗಳನ್ನು ಕಲಿತಿದ್ದೇನೆ. ಬರೋಬ್ಬರಿ 40 ವರ್ಷಗಳ ಹಿಂದೆ ನಾನು ನಟಿಯಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟಾಗ ನನಗೆ ಏನೆಂದರೆ ಏನು ತಿಳಿದಿರಲಿಲ್ಲ. ಆದರೆ ಈಗ ಹಾಗಲ್ಲ, ನಟನೆ ಅಷ್ಟೇ ಅಲ್ಲದೆ ಬೇರೆ ಹಲವಾರು ರೀತಿಯ ಸ್ಕಿಲ್‌ಗಳನ್ನು ನಟಿಯರು, ನಟರು ಪಡೆದುಕೊಳ್ಳಬೇಕಾಗುತ್ತದೆ. ಇಂದಿನ ಸಿನಿಮಾ ಕ್ಷೇತ್ರ ಆ ರೀತಿ ಬೆಳೆಯುತ್ತಿರುವುದು ತುಂಬಾ ಒಳ್ಳೆಯದು. ಇವತ್ತಿನ ಪ್ರೇಕ್ಷಕರು ಬಹಳ ಮುಂದುವರಿಸಿದ್ದಾರೆ. ಅವರಿಗೆ ಯಾವ ರೀತಿಯ ಕಂಟೆಂಟ್ ಬೇಕು ಎಂಬುದರ ಅರಿವಿದೆ. ಹಾಗಾಗಿ ಇಂದಿನ ಸಿನಿಮಾ ಕ್ಷೇತ್ರ ಬಹಳ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ತಾರಾ ಅನುರಾಧ ಹೇಳಿದ್ದಾರೆ.

Do you know what actress Thara Anooradha said about her acting experience

ನಟಿ ತಾರಾ ಅವರು ಇಂದಿನ ಯುವ ನಟರೊಂದಿಗೆ ಯಾವ ರೀತಿ ಬೆರೆಯುತ್ತಾರೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. "ಇಂದಿನ ಯುವ ನಟರೊಂದಿಗೆ ಕೆಲಸ ಮಾಡುವ ಅವಕಾಶ ಸಿಗುತ್ತಿರುವುದು ಬಹಳ ಸಂತೋಷದ ವಿಚಾರ. ನಟನೆ ಅಷ್ಟೇ ಅಲ್ಲದೆ ಅವರು ಹಾರ್ಸ್ ರೈಡಿಂಗ್, ಸ್ವಿಮ್ಮಿಂಗ್, ಬೇರೆ ಬೇರೆ ಭಾಷೆಗಳನ್ನು ಕಲಿಯುವುದು ಇತ್ಯಾದಿ ಹಲವಾರು ರೀತಿಯಲ್ಲಿ ತಮ್ಮನ್ನು ತಾವು ಸದಾ ಅಪ್ಡೇಟ್ ಮಾಡಿಕೊಳ್ಳುತ್ತಿರುತ್ತಾರೆ. ಆ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಈ ರೀತಿ ಯುವ ನಟರೊಂದಿಗೆ ನಟಿಸಿದಾಗೆಲ್ಲ ನನಗೂ ಹಲವಾರು ವಿಚಾರಗಳು ತಿಳಿಯುತ್ತಾ ಹೋಗುತ್ತೆ. 40 ವರ್ಷಗಳಿಂದ ಇದೇ ಕ್ಷೇತ್ರದಲ್ಲಿ ಇದ್ದರೂ ಪ್ರತಿದಿನ ಏನಾದರೂ ಹೊಸ ವಿಚಾರ ಕಲಿಯಲು ಇದ್ದೇ ಇರುತ್ತದೆ" ಎಂದು ಯುವ ನಟರೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆ ತಾರಾ ಮಾತನಾಡಿದ್ದಾರೆ.

ಸದ್ಯಕ್ಕೆ ನಟಿ ತಾರಾ ಅನುರಾಧ ಅವರು "ರಾಜ ರಾಣಿ" ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ಜೊತೆ ಕಿರುತೆರೆಯಲ್ಲೂ ಸಕ್ರಿಯವಾಗಿದ್ದಾರೆ. ಇತ್ತೀಚೆಗಷ್ಟೇ ಕೋಟಿ ಸಿನಿಮಾದಲ್ಲಿ ನಟ ಡಾಲಿ ಧನಂಜಯೊಂದಿಗೆ ನಟಿಸಿರುವ ನಟಿ ತಾರಾ "ಧನಂಜಯ ಜೊತೆ ಇದು ನನ್ನ ಮೂರನೇ ಪ್ರಾಜೆಕ್ಟ್. ನನಗೆ ಆತ ಬಹಳ ಆಪ್ತ. ಪ್ರೀತಿಯಿಂದ ಬಾಯಿ ತುಂಬಾ ನನ್ನನ್ನು ಅಮ್ಮ ಎಂದು ಕರೆಯುತ್ತಾರೆ. ಅವರೊಂದಿಗೆ ನಟಿಸಲು ನನಗೆ ಬಹಳ ಖುಷಿ ಇದೆ" ಎಂದು ಹೇಳಿಕೊಂಡಿದ್ದಾರೆ.

Do you know what actress Thara Anooradha said about her acting experience

ಓಟಿಟಿ ಪ್ಲಾಟ್ ಫಾರ್ಮ್ ಗಳ ಬಗ್ಗೆ ಮಾತನಾಡುತ್ತಾ "ಈ ಮೊದಲು ನನಗೆ ಹಲವಾರು ಓಟಿಟಿ ಪ್ಲಾಟ್ ಫಾರ್ಮ್ ಸಿನಿಮಾಗಳು ಆಫರ್ ಬಂದಿತ್ತು. ಆದರೆ, ನನಗೆ ಯಾಕೋ ಅದು ಸರಿ ಕಂಡಿರಲಿಲ್ಲ. ಓಟಿಟಿ ಎಂಬ ಹೊಸ ವಿಚಾರಕ್ಕೆ ಹೊಂದಿಕೊಳ್ಳಲು ನನಗೆ ಆಗ ಸ್ವಲ್ಪ ಕಷ್ಟವಾಗಿತ್ತು.ಆದರೆ ಇಂದು ಥಿಯೇಟರ್‌ಗೆ ಜನ ಬಂದು ಸಿನಿಮಾ ನೋಡುವುದಕ್ಕಿಂತ ಹೆಚ್ಚು ಓಟಿಟಿ ಜನರನ್ನು ತಲುಪುತ್ತಿರುವುದಂತೂ ಸತ್ಯ. ಎಷ್ಟೋ ಬಾರಿ ನಾನು ಆಫರ್‌ಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ಈಗ ಎನಿಸಿದ್ದು ಇದೆ" ಎಂದು ಓಟಿಟಿ ಪ್ಲಾಟ್ ಫಾರ್ಮ್ ಬಗ್ಗೆಯೂ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ತಾರಾ ಅನುರಾಧ ಮಾತನಾಡಿದ್ದಾರೆ.

More from Filmibeat

English summary
Actress Thara Anooradha said that the film industry is growing in a different way:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X