ಮೊದಲ ದಿನ ಶಾಲೆಯಲ್ಲಿ ರಾಯನ್ ನೋಡಿ ಮೇಘನಾ ರಾಜ್‌ಗೆ ಟೆನ್ಷನ್ ಆಗಿದ್ದೇಕೆ?

By ಅನಿತಾ ಬನಾರಿ

ಸಹಜ ನಟನೆಯ ಮೂಲಕ ಸಿನಿಪ್ರಿಯರ ಮನಕದ್ದ ಬೆಡಗಿಯರ ಪೈಕಿ ಮೇಘನಾ ರಾಜ್ ಕೂಡಾ ಒಬ್ಬರು. 'ತತ್ಸಮ ತದ್ಭವ' ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಗಮನ ಸೆಳೆದಿದ್ದ ಮೇಘನಾ ರಾಜ್‌ಗೆ ಮುದ್ದು ಮಗ ರಾಯನ್ ಅಂದರೆ ಪ್ರಪಂಚ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿಯೂ ರಾಯನ್ ಬಗ್ಗೆ ಒಂದೆರಡು ವಿಡಿಯೋಗಳನ್ನು ಹಂಚಿಕೊಂಡಿರುವ ಮೇಘನಾ ರಾಜ್ ನಟನೆಯ ಹೊರತಾಗಿ ತಮ್ಮ ಸಮಯವನ್ನೆಲ್ಲಾ ಅವನ ಜೊತೆಗೆ ಕಳೆಯುತ್ತಾರೆ. ಇದೀಗ ರಾಯನ್ ರಾಜ್ ಸರ್ಜಾ ಶಾಲೆಗೆ ಹೋಗುತ್ತಿದ್ದಾನೆ. ಶಾಲೆಯಲ್ಲಿ ರಾಯನ್ ಏನೆಲ್ಲಾ ಮಾಡುತ್ತಾನೆ ಎನ್ನುವ ವಿಚಾರವನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮೇಘನಾ ರಾಜ್ ಹಂಚಿಕೊಂಡಿದ್ದಾರೆ.

Do you know what Meghna Raj said about her son Rayan Raj

"ರಾಯನ್ ಮೊದಲ ದಿನ ಸ್ಕೂಲಿಗೆ ಸೇರಿದ್ದು ನನಗಿನ್ನೂ ನೆನಪಿದೆ. ಅದನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ಸ್ಕೂಲ್ ಶುರುವಾದ ದಿನ ಹೆತ್ತವರಿಗೆ ಒಂದು ಗಂಟೆಗಳ ಕಾಲ ಮಕ್ಕಳ ಜೊತೆಗೆ ಕುಳಿತುಕೊಳ್ಳುವ ಅವಕಾಶ ನೀಡಿದ್ದರು. ಮಕ್ಕಳಿಗೆ ಅದು ಸ್ಕೂಲ್‌ನಲ್ಲಿ ಮೊದಲ ದಿನವಾದ ಕಾರಣ ನಾವು ಇದ್ದೇವೆ ಎನ್ನುವ ಧೈರ್ಯ ಬರಲಿ ಅಂಥ ಕುಳಿತುಕೊಳ್ಳೋದಕ್ಕೆ ಹೇಳಿದ್ದರು. ಎಲ್ಲರ ಹಾಗೆ ನಾನು ಕೂಡಾ ಕುಳಿತುಕೊಂಡೆ. ರಾಯನ್ ಅಲ್ಲಿ ತುಂಬಾ ಶಿಸ್ತಿನಿಂದ ವರ್ತಿಸಿದ‌" ಎಂದು ಮೇಘನಾ ರಾಜ್ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ "ರಾಯನ್ ಯಾವತ್ತೂ ಮನೆಯಲ್ಲಿ ಶಿಸ್ತಿನಿಂದ ಕೂತಿರಲಿಲ್ಲ. ಅವನು ಮಾತ್ರ ಅಲ್ಲ, ನಾವು ಕೂಡಾ ಕೂತಿರಲಿಲ್ಲ. ಆದರೆ, ಟೀಚರ್ ಹೇಳಿದ ತಕ್ಷಣ ರಾಯನ್ ಮಾಡಿದ. ಆ ಕ್ಷಣ ನನಗೆ ಏನೋ ಒಂದು ರೀತಿಯ ಫೀಲಿಂಗ್ ಆಯಿತು. ರಾಯನ್ ಯಾರ ಮಾತನ್ನು ಕೇಳುತ್ತಿದ್ದಾನೆ ಎಂದು ಅನ್ನಿಸಿತು. ನಿಜವಾಗಿ ಹೇಳಬೇಕೆಂದರೆ ಮಕ್ಕಳು ಟೀಚರ್ ಮಾತು ಕೇಳಬೇಕು. ಆದರೂ, ಅವನು ಎಲ್ಲಾ ಮಾತನ್ನು ಕೇಳುತ್ತಿದ್ದನಲ್ಲಾ ಎಂದು ಆ ಸಮಯದಲ್ಲಿ ಟೆನ್ಶನ್ ಆಗಿತ್ತು" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಮೇಘನಾ ರಾಜ್ ಹೇಳಿಕೊಂಡಿದ್ದರು.

Do you know what Meghna Raj said about her son Rayan Raj

"ನಿಜವಾಗಿಯೂ ಮಕ್ಕಳು ಬಹುಬೇಗನೇ ಹೊಂದಿಕೊಳ್ಳುತ್ತಾರೆ. ಆ ವಿಚಾರ ನನಗೆ ಅರ್ಥವಾಗಿದ್ದು ಕೂಡಾ ಅಲ್ಲಿಯೇ‌. ಯಾಕೆಂದರೆ ಸ್ಕೂಲ್‌ನಲ್ಲಿ ರಾಯನ್ ಹುಡುಕಿಕೊಂಡು ಯಾವುದೋ ಒಂದು ಆ್ಯಕ್ಟಿವಿಟಿ ಮಾಡಲು ಶುರು ಮಾಡಿದ. ಮಕ್ಕಳು ಎಷ್ಟು ಬೇಗ ಬೆಳೆದು ದೊಡ್ಡವರಾಗುತ್ತಾರೆ ಎಂದು ಆ ಕ್ಷಣಕ್ಕೆ ನನಗೆ ಅನ್ನಿಸಿತು. ಆರಂಭದ ದಿನಗಳಲ್ಲಿ ಸ್ಕೂಲ್‌ಗೆ ಹೋಗಲು ಅಳುತ್ತಿದ್ದ. ಮಗ ಈಗ ಖುಷಿಯಿಂದ ಬಾಯ್ ಅಮ್ಮ ಎಂದು ಹೇಳಿ ಶಾಲೆಗೆ ಹೋಗುತ್ತಾನೆ" ಎಂದು ಮೇಘನಾ ರಾಜ್ ಹೇಳುತ್ತಾರೆ.

ಇದರ ಜೊತೆಗೆ ಮಗದೊಂದು ವಿಚಾರವನ್ನು ಕೂಡಾ ಮೇಘನಾ ರಾಜ್ ಸರ್ಜಾ ಹಂಚಿಕೊಂಡಿದ್ದಾರೆ. ಅದೇನೆಂದರೆ ರಾಯನ್ ಪ್ರತಿದಿನ ಟಿಫನ್‌ ಬಾಕ್ಸ್‌ಗೆ ಇಡ್ಲಿ ಬೇಕು ಎಂದು ಹಠ ಮಾಡುತ್ತಾನಂತೆ. ಹಾಗಾಗಿ ಅವನಿಗೆ ಯಾವತ್ತೂ ಟಿಫನ್‌ಗೆ ಇಡ್ಲಿನೇ. ಆದರೆ, ಅವನು ಇಡೀ ಬಾಕ್ಸ್ ಖಾಲಿ ಮಾಡುವುದಿಲ್ಲವಂತೆ. ಸ್ಕೂಲ್‌ನಲ್ಲಿ ಅರ್ಧ ತಿಂದು ಮಿಕ್ಕ ಅರ್ಧವನ್ನು ಕಾರಿನಲ್ಲಿ ತಿನ್ನುತ್ತಾನಂತೆ. ಅದು ಸ್ವತಃ ಮೇಘನಾ ರಾಜ್ ಅವರೇ ತಿನ್ನಿಸಬೇಕಂತೆ. ಆ ಸಮಯ ಆಕೆಯ ಪಾಲಿಗೆ ತುಂಬಾ ಸ್ಪೆಷಲ್ ಎಂದು ಆಕೆ ಹೇಳಿಕೊಂಡಿದ್ದಾರೆ.

More from Filmibeat

English summary
Do you know what Meghna Raj said about her son Rayan Raj?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X