ರಸ್ತೆಗೆ ಕಲಾವಿದರ ಹೆಸರು: ಕನ್ನಡದ ಯಾವ ನಟನ ಹೆಸ್ರಲ್ಲಿದೆ ಅತಿ ಉದ್ದನೆಯ ರಸ್ತೆ?

ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದವರ ಹೆಸರುಗಳನ್ನು ರಸ್ತೆಗಳಿಗೆ ಇಡಲಾಗುತ್ತದೆ. ಅವರ ಸಾಧನೆಗೆ ನೀಡುವ ಗೌರವಗಳಲ್ಲಿ ಇದು ಕೂಡ ಒಂದು. ಹಾಗೆ ಕನ್ನಡದ ಹಲವು ಕಲಾವಿದರ ಹೆಸರುಗಳನ್ನು ಹಲವು ರಸ್ತೆಗಳಿಗೆ ಇಡಲಾಗಿದೆ.

ಡಾ.ರಾಜ್‌ಕುಮಾರ್ ರಸ್ತೆ, ಅಂಬರೀಶ್ ರಸ್ತೆ, ವಿಷ್ಣುವರ್ಧನ್ ರಸ್ತೆ, ಪಾರ್ವತಮ್ಮ ರಾಜ್‌ಕುಮಾರ್ ರಸ್ತೆ. ಹೀಗೆ ಹಲವರ ಹೆಸರಲ್ಲಿ ಹಲವಾರು ರಸ್ತೆಗಳು ಇವೆ. ಈ ಸಾಲಿಗೆ ಈಗ ನಟ ಪುನೀತ್ ರಾಜ್‌ಕುಮಾರ್ ಹೆಸರು ಸೇರಿಕೊಂಡಿದೆ.

ಪುನೀತ್ ರಾಜ್‌ಕುಮಾರ್ ಹೆಸರನ್ನು ರಸ್ತೆಗೆ ಇಡಲಾಗಿದೆ. ಆದರೆ ಯಾವ ನಟನ ಹೆಸರಿನ ರಸ್ತೆ ಹೆಚ್ಚು ಉದ್ದವಾಗಿದೆ ಎನ್ನುವ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಮುಂದೆ ಓದಿ...

ಡಾ.ವಿಷ್ಣುವರ್ಧನ್ ರಸ್ತೆ ಏಷ್ಯಾದಲ್ಲೇ ಉದ್ದನೆಯ ರಸ್ತೆ!

ಡಾ.ವಿಷ್ಣುವರ್ಧನ್ ರಸ್ತೆ ಏಷ್ಯಾದಲ್ಲೇ ಉದ್ದನೆಯ ರಸ್ತೆ!

ದಿವಂಗತ ನಟ ಡಾ.ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಇರುವ ರಸ್ತೆ ಅಪರೂಪದ ದಾಖಲೆ ಮಾಡಿದೆ. ಬೆಂಗಳೂರಿನಲ್ಲಿ ಇರುವ ಈ ರಸ್ತೆ ಏಷ್ಯಾ ಮಟ್ಟದಲ್ಲಿ ಸಾಧನೆ ಮಾಡಿದೆ. ದೇಶದಲ್ಲೇ ಇಷ್ಟು ಉದ್ದನೆಯ ರಸ್ತೆ ಮತ್ತೊಂದಿಲ್ಲ. ಹೌದು ಸುಮಾರು 14.5 ಕಿ.ಮೀ ಉದ್ದದ ರಸ್ತೆಗೆ ವಿಷ್ಣುವರ್ಧನ್ ಅವರ ಹೆಸರನ್ನು ಇಡಲಾಗಿದೆ. ಈ ಮೂಲಕ ದೇಶದಲ್ಲೇ ಅತಿ ಉದ್ದದ ರಸ್ತೆಗೆ ತನ್ನ ಹೆಸರನ್ನು ಹೊಂದಿದ ಏಕೈಕ ಕಲಾವಿದ ಎಂಬ ಕೀರ್ತಿ ಡಾ. ವಿಷ್ಣುವರ್ಧನ್ ಅವರಿಗಿದೆ.

ಬನಶಂಕರಿ ಇಂದ ಕೆಂಗೇರಿ ತನಕ ಇರುವ ರಸ್ತೆ!

ಬನಶಂಕರಿ ಇಂದ ಕೆಂಗೇರಿ ತನಕ ಇರುವ ರಸ್ತೆ!

ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿ ತನಕ ಇರುವ ರಸ್ತೆಗೆ 'ಡಾ.ವಿಷ್ಣುವರ್ಧನ್ ರಸ್ತೆ' ಎಂದು ನಾಮಕರಣ ಮಾಡಲಾಗಿದೆ. 2014ರಲ್ಲಿ ಈ ರಸ್ತೆ ಉದ್ಘಾಟನೆ ಆಗಿದೆ. ಸಿನಿಮಾ ನಟನೊಬ್ಬರ ಹೆರಸಲ್ಲಿ ಇರುವ ಉದ್ದನೆಯ ರಸ್ತೆ ಅದು ವಿಷ್ಣುದಾದನ ಹೆಸರಿಲ್ಲಿ ಮಾತ್ರ ಇದೆ. ಇವರನ್ನು ಬಿಟ್ಟರೆ ಮತ್ಯಾವ ನಟನ ಹೆಸರು ಇಷ್ಟು ಉದ್ದದ ರಸ್ತೆ ಇಲ್ಲ. ಹಾಗಾಗಿ ಇದು ಕನ್ನಡಕ್ಕೆ ಹೆಮ್ಮೆಯೂ ಹೌದು.

ವಿಷ್ಣು ನಂತರ ಅಪ್ಪು ದಾಖಲೆ!

ವಿಷ್ಣು ನಂತರ ಅಪ್ಪು ದಾಖಲೆ!

ಇನ್ನು ನಟ ವಿಷ್ಣುವರ್ಧನ್ ಬಿಟ್ಟರೆ, ಡಾ.ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೆಚ್ಚು ಉದ್ದದ ರಸ್ತೆ ಇದೆ. ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ "ಕರ್ನಾಟಕ ರತ್ನ ಡಾll ಪುನೀತ್ ರಾಜ್‍ಕುಮಾರ್ ರಸ್ತೆ" ಎಂದು ನಾಮಕರಣ ಮಾಡಲಾಗಿದ್ದು, ಈಗ ನಾಮಫಲಕವನ್ನು ಅಳವಡಿಸಲಾಗಿದೆ.

ಡಾ.ರಾಜ್‌ಕುಮಾರ್ ರಸ್ತೆ 6ಕಿ.ಮೀ!

ಡಾ.ರಾಜ್‌ಕುಮಾರ್ ರಸ್ತೆ 6ಕಿ.ಮೀ!

ಇನ್ನು ವರನಟ ಡಾ.ರಾಜ್‌ಕುಮಾರ್ ಅವರ ಹೆರಸಲ್ಲಿ ಹಲವು ಕಡೆ ರಸ್ತೆಗಳಿವೆ. ರಾಜಾಜಿನಗರದ ಬಳಿ ಇರುವ ರಾಜ್ ಕುಮಾರ್ ರಸ್ತೆಯ ಉದ್ದ 6 ಕಿ.ಮೀಟರ್ ಮಾತ್ರ. ಹಾಗೆ ಪಾರ್ವತಮ್ಮ ರಾಜ್‌ಕುಮಾರ್ ರಸ್ತೆ ಕೂಡ ಇದೆ. ಸೌತ್ ಎಂಡ್ ರಸ್ತೆ ಬಳಿಯ, ಮಾಧವ ರಾಮ್ ಸರ್ಕಲ್ ಇಂದ ನಾಗಸಂದ್ರದ ತನಕ ಇರುವ ರಸ್ತೆಗೆ ಪಾರ್ವತಮ್ಮನವರ ಹೆಸರು ಇಡಲಾಗಿದೆ.

More from Filmibeat

English summary
Do You Know, Dr.Vishnuvardhan Road Is The Logest Road In The Name Of Film Actor In India,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X