'ಕೀನ್ಯಾ'ದ ಕಾಡಿನಲ್ಲಿ 'ಗೆಳೆಯ'ನ ಜೊತೆ 'ಬರ್ತ್ ಡೇ' ಆಚರಿಸಿಕೊಂಡ ರಮ್ಯಾ..!
ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು. ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನು ಹಾಗೂ ಭಗ್ನ ಪ್ರೇಮಿಗಳನ್ನು ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯ ಮೋಹಕತಾರೆ ಎಂಬ ಪಟ್ಟವನ್ನ ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು. ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ಕೂಡ ರಾಷ್ಟ್ರ ರಾಜಕಾರಣದಲ್ಲಿ ರಮ್ಯ ಪಾತ್ರವಾದರು.
ಇಂಥಾ ರಮ್ಯಾಗೆ ಇಂದು ಬರ್ತ್‌ಡೇ ಸಂಭ್ರಮ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯಾಗುತ್ತಿದೆ. ತಮ್ಮ ನೆಚ್ಚಿನ ನಾಯಕಿಗೆ ಅಭಿಮಾನಿ ಬಳಗ ಶುಭಾಶಯವನ್ನು ಕೋರುತ್ತಿದೆ. ರಮ್ಯ ಅವರ ಸ್ನೇಹ ವೃಂದ ಕೂಡ ದಿವ್ಯ ಸ್ಪಂದನೆಗೆ ಜನುಮದಿನದ ಶುಭಾಶಯವನ್ನು ತಿಳಿಸುತ್ತಿದೆ. ಆ ಪೈಕಿ ಸಂಜೀವ್ ಮೋಹನ್ ಬರೆದುಕೊಂಡ ಹ್ಯಾಪಿ ಬರ್ತ್ ಡೇ My Divu ಎಂಬ ಸಾಲು ಈಗ ಅನೇಕರ ಗಮನ ಸೆಳೆಯುತ್ತಿದೆ. ಹುಬ್ಬೇರಿಸಿದೆ. ರಮ್ಯಾ ಮತ್ತು ಸಂಜೀವ್ ಮೋಹನ್ ನಡುವೆ ಇರುವ ಸಂಬಂಧವೇನು ಎನ್ನುವ ಪ್ರಶ್ನೆಯನ್ನು ಕೂಡ ಹುಟ್ಟು ಹಾಕಿದೆ.

ಹಾಗಂಥ ರಮ್ಯಾ ಮತ್ತು ಸಂಜೀವ್ ಮೋಹನ್ ನಡುವೆ ಇಲ್ಲ ಸಲ್ಲದ ಸಂಬಂಧ ಕಲ್ಪಿಸಿಕೊಳ್ಳಬೇಡಿ. ಯಾಕೆಂದರೆ.. ಸಂಜೀವ್ ಮೋಹನ್ ಮೊದಲಿಂದ ರಮ್ಯಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಜೀವದ ಗೆಳೆಯರು. ಇದಕ್ಕೆ ಕೈಗನ್ನಡಿ ಎಂಬಂತೆ ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಮ್ಯಾಚ್‌ನ್ನೂ ಇಬ್ಬರು ಜೊತೆಯಲ್ಲಿಯೇ ಈ ಹಿಂದೆ ನೋಡಿದ್ದಾರೆ. ಅನೇಲ ಸಲ ಒಟ್ಟಿಗೆ ಪಾರ್ಟಿಯನ್ನು ಮಾಡಿದ್ದಾರೆ.
ಇನ್ನು ಸಂಜೀವ್ ಮೋಹನ್ ಇದೇ ಮೊದಲ ಬಾರಿ ರಮ್ಯಾ ಅವರಿಗೆ ಬರ್ತ್‌ಡೇಯ ಶುಭಾಶಯವನ್ನು ಕೋರುತ್ತಿಲ್ಲ. ಬದಲಿಗೆ ಪ್ರತಿ ವರ್ಷ ತಪ್ಪದೇ ರಮ್ಯಾ ಅವರಿಗೆ ಸಂಜೀವ್ ಮೋಹನ್ ಶುಭಾಶಯವನ್ನು ಕೋರುತ್ತಾ ಬಂದಿದ್ದಾರೆ. ಅದ್ರಂತೆ ಈ ವರ್ಷ ಕೂಡ ಶುಭಾಶಯವನ್ನು ತಿಳಿಸಿದ್ದಾರೆ. ಇಷ್ಟೇ ಅಲ್ಲ ರಮ್ಯಾ ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ಇವರ ಬೆಂಬಲ ಹರಕೆ ಹಾರೈಕೆ ಇದ್ದೇ ಇರುತ್ತೆ. ರಮ್ಯಾ ತಮ್ಮ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದಾಗ ಕೂಡ ಶುಭಾಶಯವನ್ನು ಕೋರಿದ್ದರು ಸಂಜೀವ್ ಮೋಹನ್.
ಅಂದ್ಹಾಗೇ ಅಮೆರಿಕದ ಕ್ಯಾಲಿಫೋರ್ನಿಯಾದ ಜೆಮಾಲಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕದಿಂದ ಜೆಮಾಲಜಿಯಲ್ಲಿ ಪದವಿ ಪಡೆದಿರುವ ಸಂಜೀವ್ ಮೋಹನ್, ಬೆಂಗಳೂರಿನ ರಿಚ್ಮಂಡ್ ರೋಡ್ ಸರ್ಕಲ್‌ನಲ್ಲಿರುವ ಪ್ರತಿಭಾ ಜುವೆಲ್ಲರಿಯ ಮಾಲೀಕ ನರಸಿಂಹುಲು ಚೆಟ್ಟಿಯ ಮೊಮ್ಮಗ ಹಾಗೂ ಮುರಳಿ ಮೋಹನ್ ಅವರ ಪುತ್ರ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತೆ. ಹೀಗೆ ಕೇಳಿ ಬರುವ ಮಾತುಗಳಲ್ಲಿ ಸತ್ಯಾಂಶ ಎಷ್ಟಿದೆ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ ರಮ್ಯಾ ಮತ್ತು ಸಂಜೀವ್ ಮೋಹನ್ ಅವರ ನಡುವೆ ಇರುವುದು ಅಕ್ಕ ಮತ್ತು ತಮ್ಮನ ಸಂಬಂಧ ಎಂದು ಕೂಡ ಕೆಲವರು ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಕೆಲ ಅಭಿಪ್ರಾಯಗಳು ಸಂಜೀವ್ ಮೋಹನ್ ಇಂದು ಹಂಚಿಕೊಂಡ ಫೋಟೊ ಕೆಳಗೆ ವ್ಯಕ್ತವಾಗಿವೆ.
ಇನ್ನುಳಿದಂತೆ 2018ರಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿರುವ ಸಂಜೀವ್ ಮೋಹನ್, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೇನು ಸಕ್ರಿಯವಾಗಿಲ್ಲ. ಅಲ್ಲೊಂದು ಇಲ್ಲೊಂದು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆ ಪೈಕಿ ರಮ್ಯಾ ಅವರ ಜೊತೆಯ ಕೆಲವೊಂದಿಷ್ಟು ಫೋಟೊಗಳಿವೆ. ಮಿಕ್ಕಂತೆ ಉತ್ತರಕಾಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರಮ್ಯಾ ನಾಯಕಿಯಾಗಿ ಮರಳಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇನ್ನು ಇಂದು ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ರಮ್ಯಾ ಯಾವುದಾದರು ಸಿಹಿ ಸುದ್ದಿಯನ್ನು ಕೊಡ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಆ ನಿರೀಕ್ಷೆ ಕೂಡ ಹುಸಿಯಾಗಿದೆ.
ಅಂದ್ಹಾಗೇ ಸಂಜೀವ್ ಮೋಹನ್ ಜೊತೆ ರಮ್ಯಾ ಕೀನ್ಯಾದಲ್ಲಿ ತಮ್ಮ ಈ ಬಾರಿಯ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಮೀಸಲು ಭಾಗದಲ್ಲಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಗೆಳೆಯರ ಜೊತೆ ಈ ಕಾಡು-ಮೇಡು ಭಾಗದಲ್ಲಿ ಸುತ್ತಾಟ ನಡೆಸಿದ್ದಾರೆ. ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. Any Ways Happy Birthday Sandalwood Queen.


Click it and Unblock the Notifications











