ಯಶ್ ಗುಟ್ಕಾ ಜಾಹಿರಾತು ತಿರಸ್ಕರಿಸಿದ್ದು ಏಕೆ?: ಯಶ್ ಗೆ ಸಿಗುತ್ತಿದ್ದ ಸಂಭಾವನೆ ಎಷ್ಟು ಗೊತ್ತೆ?

ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ 2 ಚಿತ್ರದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಈ ನಡುವೆ ಯಶ್ ಜನ ಮೆಚ್ಚುವ ಕಾರ್ಯವೊಂದನ್ನು ಮಾಡಿದ್ದಾರೆ. ಈ ನಡೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನೀನೆ ನಿಜವಾದ ಹೀರೋ ಎನ್ನುತ್ತಾ ಇದ್ದರೆ. ಇದಕ್ಕೆ ಕಾರಣ ನಟ ಯಶ್ ತೆಗೆದುಕೊಂಡ ಆ ಒಂದು ನಿರ್ಧಾರ.

ಹೌದು ನಟ ಯಶ್ ಸಿನಿಮಾ ಮಾತ್ರ ಅಲ್ಲ ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಕನ್ನಡ ನಟ ಯಶ್‌ರನ್ನು ಅರಸಿ ಬಂದಿವೆ. ಜಾಹಿರಾತುಗಳಲ್ಲೂ ಕೂಡ ಯಶ್ ಜನರಿಗೆ ಇಷ್ಟ ಆಗುತ್ತಾರೆ. ಆದರೆ ಈ ಯಶ್‌ಗೆ ಅಭಿಮಾನಿಗಳು ಜೈ ಎನ್ನುತ್ತಾ ಇರುವುದು ಜಾಹೀರಾತಿನಲ್ಲಿ ನಟಿಸಿದ್ದಕ್ಕಲ್ಲ ಬದಲಿಗೆ ತಿರಸ್ಕರಿಸಿದ್ದಕ್ಕೆ.

ಹೌದು ನಟ ಯಶ್ ಪಾನ್ ಮಸಲಾ ಜಾಹೀರಾತಿನಲ್ಲಿ ನಟಿಸಲು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಗುಟ್ಕಾ ಕಂಪನಿ ನೀಡಿದ್ದ ಆಫರ್ ಬೇಡ ಎಂದು ಯಶ್ ಮಾದರಿ ಅಗುವ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಯಶ್‌ರನ್ನು ಕೊಂಡಾಡುತ್ತಾ ಇದ್ದಾರೆ.

ಪಾನ್ ಮಸಾಲ ಜಾಹೀರಾತು ಕೈ ಬಿಟ್ಟ ಯಶ್!

ಪಾನ್ ಮಸಾಲ ಜಾಹೀರಾತು ಕೈ ಬಿಟ್ಟ ಯಶ್!

ಬ್ರ್ಯಾಂಡ್‌ಗಳು ಸಹಜವಾಗಿ ಹೆಚ್ಚು ಫೇಮ್ ಪಡೆದಿರುವ ನಟ, ನಟಿಯರ ಹಿಂದೆ ಬೀಳುತ್ತವೆ. ಅದರಲ್ಲು ಯಶ್ ಅಂತಹ ಸ್ಟಾರ್ ನಟರನ್ನು ದೊಡ್ಡ ಕಂಪನಿಗಳೇ ಅರಸಿ ಬರುತ್ತವೆ. ಯಶ್‌ಗೆ ಕೋಟಿ, ಕೋಟಿ ಆಫರ್ ನೀಡಿ ಪಾನ್ ಮಸಲಾ ಹಾಗೂ ಎಲೈಚಿ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಕೇಳಿತ್ತು. ಆದರೆ, ಯಶ್ ಈ ದುಬಾರಿ ಮೌಲ್ಯದ ಜಾಹೀರಾತನ್ನು ತಿರಸ್ಕರಿಸಿದ್ದಾರೆ.

99 ಕೋಟಿ ಆಫರ್ ತಿರಸ್ಕರಿಸಿದ ಯಶ್!

99 ಕೋಟಿ ಆಫರ್ ತಿರಸ್ಕರಿಸಿದ ಯಶ್!

'ಕೆಜಿಎಫ್' ಚಿತ್ರದ ನಂತರ ನಟ ಯಶ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗಾಗಿ ಯಶ್, ತಮ್ಮ ಅಭಿಮಾನಿಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಪಾನ್ ಮಸಾಲ ಜಾಹೀರಾತನ್ನು ಕೈ ಬಿಟ್ಟಿದ್ದಾರೆ ಎಂದು ಟ್ಯಾಲೆಂಟ್ ಮ್ಯಾನೆಜ್ಮೆಂಟ್ ಏಜೆನ್ಸಿ ಬಹಿರಂಗ ಪಡಿಸಿದೆ. ಯಶ್‌ಗೆ ಈ ಸರಣಿ ಜಾಹೀರಾತು ಒಪ್ಪಂದಕ್ಕೆ​ 10 ರಿಂದ 99 ಕೋಟಿವರೆಗೂ ಆಫರ್ ನೀಡಿತ್ತು ಜಾಹೀರಾತನ್ನು ಕಂಪನಿ ಆದರೆ ಅದನ್ನು ಯಶ್ ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ.

ಯಶ್ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!

ಯಶ್ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!

ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್‌ ತೆಗೆದುಕೊಂಡ ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್​ ಸ್ಟಾರ್​​ ನಟರೇ ದುಡ್ಡಿಗೆ ಬೆಲೆ ಕೊಟ್ಟು ಪಾನ್​ ಮಸಲಾ ಆ್ಯಡ್​ನಲ್ಲಿ ನಟಿಸಿದ್ದಾರೆ. ಆದರೆ ಯಶ್ ಇದನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಅಭಿಮಾನಿಗಳು ಯಶ್ ನಿಜವಾದ ಸುಲ್ತಾನ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕೊಂಡಾಡುತ್ತಾ ಇದ್ದಾರೆ.

ಪಾನ್ ಮಸಾಲ ತಿಂದು ಬೀಗಿದ ಬಾಲಿವುಡ್ ನಟರು!

ಪಾನ್ ಮಸಾಲ ತಿಂದು ಬೀಗಿದ ಬಾಲಿವುಡ್ ನಟರು!

ಬಾಲಿವುಡ್​ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಶಾರುಕ್ ಖಾನ್ ಪಾನ್​ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಈ ನಟರು ಕೋಟಿ ಕೋಟಿ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಜನರ ದೃಷ್ಟಿಯಲ್ಲಿ ಕೆಟ್ಟವರಾಗಿದ್ದಾರೆ. ಪಾನ್ ಮಸಾಲ ತಿನ್ನಿ ಎಂದು ಪ್ರೋತ್ಸಾಹಿಸಿದ ಸಲುವಾಗಿ ಟ್ರೋಲ್​ ಆಗುತ್ತಿದ್ದಾರೆ. ಅಪಾರ ಅಭಿಮಾನಿ ಬಳಗ ಇರುವ ನಟರು ಹೀಗೆ ಮಾಡಿದ್ದಕ್ಕೆ ಈ ನಟರ ವಿರುದ್ಧ ಜನ ಟೀಕೆಗಳ ಮಳೆ ಗೈದಿದ್ದಾರೆ.

More from Filmibeat

English summary
Do You Know Actor Yash Rejected 99 Crore Deal To Endorse Paan Masala Advertisement, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X