ದರ್ಶನ್ ಸಾಲು ಮರದ ತಿಮ್ಮಕ್ಕರನ್ನು ಭೇಟಿಯಾಗಿದ್ದು ಯಾಕೆ?

ದಾಸ ದರ್ಶನ್ ಸದಾ ಒಂದಿಲ್ಲೊಂದು ಸಮಾಜ ಸೇವೆ ಅಥವಾ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ದರ್ಶನ್ ಸಾಲು ಮರದ ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ಕೆಲ ಕಾಲ ಅಲ್ಲೆ ಸಮಯ ಕೂಡ ಕಳೆದಿದ್ದಾರೆ.

ನಟ ದರ್ಶನ್‌ಗೆ ಹಿರಿಯರು ಅಂದ್ರೆ ಅದೇನೋ ಪ್ರೀತಿ ವಾತ್ಸಲ್ಯ. ಕಷ್ಟದಲ್ಲಿ ಇದ್ದಾರೆ, ಅಥವಾ ಸಹಾಯದ ನೆರವಿನಲ್ಲಿ ಇದ್ದಾರೆ ಅಂದ್ರೆ ಸಾಕು ಸ್ವತಃ ದರ್ಶನ್ ಅವರೆ ಅವರ ಮನೆಗೆ ತೆರಳಿ ಕಷ್ಟ ಸುಖ ವಿಚಾರಿಸುತ್ತಾರೆ. ಮೊನ್ನೆಯಷ್ಟೆ ಹಿರಿಯ ನಟಿ ಬಿ ಸರೋಜಾ ದೇವಿಯನ್ನು ಭೇಟಿಯಾಗಿ ಮಾತನಾಡಿಕೊಂಡು ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಸಾಲು ಮರದ ತಿಮ್ಮಕ್ಕ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದೆ ಒಂದು ಕಾರಣವೂ ಇದೆ.

ಸಾಲು ಮರದ ತಿಮ್ಮಕ್ಕ. ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ಮರ ಗಿಡಗಳನ್ನೆ ಉಸಿರಾಗಿಸಿಕೊಂಡು, ಕೊನೆ ಉಸಿರು ಇರೋವರೆಗೂ ಪರಿಸರಕ್ಕೆ ಸೇವೆ ಮಾಡುವ ಇಚ್ಛೆ ಹೊಂದಿರುವ ಇವರನ್ನು ಪರಿಸರ ದೇವಿ ಎಂದೆ ಎಲ್ಲರೂ ಗೌರವ ನೀಡುತ್ತಾರೆ. ಸಾಲು ಮರದ ತಿಮ್ಮಕ್ಕ ಎಂದೇ ಕರೆಸಿಕೊಳ್ಳುವ ಇವರು, ಲೆಕ್ಕವಿಲ್ಲದಷ್ಟು ಗಿಡಗಳನ್ನು ನೆಟ್ಟು ಅವು ಹೆಮ್ಮರ ಆಗುವವರೆಗೂ ಸಲಹಿದ್ದಾರೆ. ಇವರ ಈ ಪರಿಸರ ಕಾಳಜಿಗಾಗಿ ಈಗಾಗಲೇ ಸಾಕಷ್ಟು ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದು, ಈಗಲೂ ನಿತ್ಯ ಗಿಡಗಳನ್ನು ನೆಡುವುದು, ಅವುಗಳ ಪಾಲನೆ ಮಾಡೋದು ಮಾಡುತ್ತಿರುತ್ತಾರೆ.

Do you know why darshan met Saalu Marada Thimmakka today?

ಸಾಲು ಮರದ ತಿಮ್ಮಕ್ಕ ಅವರಿಗೆ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿ ಬೆಂಗಳೂರಿನ ಖಾಸಗೀ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ವಿಚಾರ ತಿಳಿದ ನಟ ದರ್ಶನ್ ಅಂದೇ ತಿಮ್ಮಕ್ಕ ಅವರನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದರಂತೆ. ಆದರೆ ಶೂಟಿಂಗ್ ನಿಮ್ಮಿತ್ತ ಫಾರಿನ್‌ಗೆ ತೆರಳಿದ್ದ ದರ್ಶನ್‌ಗೆ ಅದು ಸಾಧ್ಯವಾಗಿರಲಿಲ್ಲ. ಅಂದಿನಿಂದಲೂ ಸಮಯ ಸಿಕ್ಕಾಗ ಹೋಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಬೇಕು ಎಂದಿದ್ದ ದಾಸ ದರ್ಶನ್ ಇವತ್ತು ತಿಮ್ಮಕ್ಕ ಅವರ ಮನೆಗೆ ಭೇಟಿ ನೀಡಿದ್ದಾರೆ.

ಇಂದು ನೆಲಮಂಗಲದಲ್ಲಿರೋ ಸಾಲು ಮರದ ತಿಮ್ಮಕ್ಕ ಅವರ ಮನೆಗೆ ತೆರಳಿದ ದರ್ಶನ್ ಕೆಲ ಹೊತ್ತು ಅಲ್ಲೇ ಇದ್ದು, ತಿಮ್ಮಕ್ಕ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಏನಾದರೂ ಸಹಾಯ ಬೇಕಿದ್ದರೇ ಕೇಳಿ ಎಂದು ತಿಳಿಸಿರುವ ದರ್ಶನ್, ತಿಮ್ಮಕ್ಕ ಅವರ ಕುಟುಂಬ ಸದಸ್ಯರನ್ನು ಮಾತನಾಡಿಸಿದ್ದಾರೆ. ದರ್ಶನ್ ಅವರ ಈ ಭೇಟಿ ತಿಮ್ಮಕ್ಕ ಅವರಿಗೆ ಖುಷಿ ಆಗಿದ್ದು, ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ದರ್ಶನ್ ಕೂಡ ಸಾಲು ಮರದ ತಿಮ್ಮಕ್ಕ ಅವರಿಂದ ಆಶಿರ್ವಾದ ಪಡೆದು ಅಲ್ಲಿಂದ ತೆರಳಿದ್ದಾರೆ.

Do you know why darshan met Saalu Marada Thimmakka today?

ಹೀಗೆ ಕೆಲ ದಿನಗಳಿಂದ ತಿಮ್ಮಕ್ಕ ಅವರನ್ನು ಭೇಟಿ ಮಾಡಬೇಕು ಅಂದುಕೊಂಡಿದ್ದ ದರ್ಶನ್ ಇವತ್ತು ಭೇಟಿ ಮಾಡಿದ್ದಾರೆ. ದರ್ಶನ್ ಜೊತೆಗೆ ಅವರ ಸ್ನೇಹಿತರು ಕೂಡ ತೆರಳಿದ್ದು, ದಾಸನ ಈ ಅಚ್ಚರಿಯ ಭೇಟಿ ಸೋಶಿಯಲ್ ಮೀಡಿಯದಲ್ಲಿ ಫುಲ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಈ ಪೊಸ್ಟ್ ನೋಡಿ ಡಿ ಬಾಸ್ ದರ್ಶನ್ ನಿಜವಾದ ವ್ಯಕ್ತಿತ್ವ ಇದು ಅಂತ ಹಾಡಿಹೊಗಳುತ್ತಿದ್ದಾರೆ. ಸದ್ಯ ದರ್ಶನ್ ಕ್ರಾಂತಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Darshan visited the Saalu Marada Thimmakka house today. And he spent some time there.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X