»   » ಭವಿಷ್ಯದ 'ಸ್ಟಾರ್' ಆಗ್ಬೇಕನ್ನೋ ಆಸೆನಾ? ಚಾನ್ಸ್ ಇಲ್ಲಿದೆ ನೋಡಿ..

ಭವಿಷ್ಯದ 'ಸ್ಟಾರ್' ಆಗ್ಬೇಕನ್ನೋ ಆಸೆನಾ? ಚಾನ್ಸ್ ಇಲ್ಲಿದೆ ನೋಡಿ..

Posted By:
Subscribe to Filmibeat Kannada

''ನಾನು ಹೀರೋ ಆಗ್ಬೇಕು....ಹೀರೋಯಿನ್ ಆಗ್ಬೇಕು....ಥಿಯೇಟರ್ ಮುಂದೆ ನನ್ನ ಕಟೌಟ್ ನಿಲ್ಲಬೇಕು'' ಅಂತ ದೊಡ್ಡ ದೊಡ್ಡ ಕನಸು ಕಾಣುತ್ತಿರುವ ಹೈಸ್ಕೂಲ್ ಹೈಕ್ಳಿಗೆ ಇಲ್ಲೊಂದು ಗೋಲ್ಡನ್ ಚಾನ್ಸ್ ಇದೆ ನೋಡಿ...

ಈ ಹಿಂದೆ ಶ್ರೀಮುರಳಿ, ಶ್ರೀಕಿ, ಅಕುಲ್ ಬಾಲಾಜಿ ನಟಿಸಿದ್ದ 'ಲೂಸ್ ಗಳು' ಚಿತ್ರವನ್ನ ನಿರ್ದೇಶಿಸಿದ್ದ ಅರುಣ್ ಈಗ 'ಫನ್ನಿ' ಅಂತ ಸಿನಿಮಾ ಮಾಡ್ತಿದ್ದಾರೆ. ಆ ಚಿತ್ರಕ್ಕೆ ಹೈಸ್ಕೂಲ್ ಪ್ರತಿಭೆಗಳು ಬೇಕಾಗಿದ್ದಾರೆ.

funny

14-16 ವರ್ಷ ವಯಸ್ಸಿನ ಪ್ರತಿಭಾವಂತ ಹುಡುಗ-ಹುಡುಗಿಯರನ್ನ ಹುಡುಕುವಲ್ಲಿ 'ಫನ್ನಿ' ತಂಡ ಬಿಜಿಯಾಗಿದೆ. ನಿಮಗೆ ಸಿನಿಮಾದಲ್ಲಿ ಆಕ್ಟ್ ಮಾಡುವ ಆಸೆ ಇದ್ದು, ಅಲ್ಪ ಸ್ವಲ್ಪ ಆಕ್ಟಿಂಗ್ ಮತ್ತು ಡ್ಯಾನ್ಸ್ ಗೊತ್ತಿದ್ರೆ, 'ಫನ್ನಿ' ಸಿನಿಮಾಗೆ ನೀವು ಸೆಲೆಕ್ಟ್ ಆಗಬಹುದು.

ನೀವು ಸಣ್ಣಗಿರ್ಲಿ, ದಪ್ಪಗಿರ್ಲಿ, ಉದ್ದ ಇರ್ಲಿ, ಕುಳ್ಳಗಿರ್ಲಿ, ಕಪ್ಪಗಿರ್ಲಿ, ಬೆಳ್ಳಗಿರ್ಲಿ...ಹೇಗೇ ಇದ್ದರೂ ಪರ್ವಾಗಿಲ್ಲ. ಕನ್ನಡ ಸ್ಪಷ್ಟವಾಗಿ ಮಾತನಾಡುವುದಕ್ಕೆ ಬರಬೇಕು. ಅಪ್ಪ-ಅಮ್ಮ ನಿಮಗೆ ಪರ್ಮಿಷನ್ ಕೊಟ್ರೆ, ನಮ್ಮ ನಟನೆ ಇರುವ ಸಣ್ಣ ವಿಡಿಯೋ ಕ್ಲಿಪ್ ನ 9591598007 ನಂಬರ್ ಗೆ ವಾಟ್ಸ್ ಆಪ್ ಮಾಡಿ. ಇಲ್ಲಾಂದ್ರೆ, funnyaiklu@gmail.com ಗೆ ಮೇಲ್ ಮಾಡಿ.

English summary
High School students who are aspiring to become future stars of Kannada Film Industry have got a golden opportunity from Kannada movie 'Funny'. Director Arun of 'Loosegalu' fame is looking for Talented Boys and Girls for his next movie 'Funny'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X