For Quick Alerts
  ALLOW NOTIFICATIONS  
  For Daily Alerts

  ನಟಿ ಭಾರತಿ ಅಂತರಾಳ ತೆರೆದಿಡುವ ಅನಿರುದ್ಧರ ಪ್ರಯತ್ನ: ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆ

  |

  ಸಿನಿಮಾಗಳಲ್ಲಿ ನಟರ ಸಾಧನೆಗೆ ಸಿಗುವ ಪ್ರಚಾರ, ಮಾನ್ಯತೆ ನಟಿಯರಿಗೆ ಸಿಗುವುದು ಕಡಿಮೆ. ನಟಿಯರ ಸಾಧನೆ ದಾಖಲಾಗುವುದು ಸಹ ಅಪರೂಪವೇ. ಕನ್ನಡದಲ್ಲಿ ಹಲವು ಹಿರಿಯ, ಸಾಧಕ ನಟಿಯರಿದ್ದಾರೆ ಅವರಲ್ಲಿ ಒಬ್ಬರು ನಟಿ ಭಾರತಿ.

  ಹಿರಿಯ ನಟಿ ಭಾರತಿ ಅವರ ಹುಟ್ಟುಹಬ್ಬ ಇಂದು (ಆಗಸ್ಟ್ 15). ಭಾರತಿ ಅವರ ಸಿನಿ ಪಯಣದ ಜೊತೆಗೆ ಅವರ ಜೀವನದ ಏಳು-ಬೀಳುಗಳನ್ನು ದಾಖಲಿಸುವ ವಿನೂತನ ಪ್ರಯತ್ನವನ್ನು ನಟ ಅನಿರುದ್ಧ ಮಾಡುತ್ತಿದ್ದಾರೆ.

  ಭಾರತಿ ಅವರ ಅಳಿಯ, ಮಾನಸ ಪುತ್ರರೂ ಆಗಿರುವ ಅನಿರುದ್ಧ ಭಾರಿತಯವರ ಜೀವನ, ಸಿನಿ ಪಯಣ, ಏಳು-ಬೀಳು ಇನ್ನಿತರೆ ವಿಷಯಗಳನ್ನು ಒಳಗೊಂಡ ಮಾಹಿತಿ ಪೂರ್ಣ, ಭಾವ ಪೂರ್ಣ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದ್ದು, ಭಾರತಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಕ್ಷ್ಯಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ.

  ನಟ ಅನಿರುದ್ಧ ಇಂದು ಬಿಡುಗಡೆ ಮಾಡಿರುವ ಟ್ರೇಲರ್‌ನಲ್ಲಿ ಭಾರತಿ ಅವರ ಸಿನಿ ಪಯಣ, ಅವರ ವ್ಯಕ್ತಿತ್ವ, ಸಾಧನೆ ಇನ್ನೂ ಹಲವು ವಿಷಯಗಳ ಬಗ್ಗೆ ಭಾರತಿಯವರ ಸಮಕಾಲೀನರಾದ ಶಿವರಾಂ, ನಿರ್ದೇಶಕ ಭಗವಾನ್ ಭಾರತಿ ಅವರೊಟ್ಟಿಗೆ ತೆರೆ ಹಂಚಿಕೊಂಡಿರುವ ಮಲಯಾಳಂ ಸ್ಟಾರ್ ನಟ ಮಮ್ಮುಟಿ, ನಟ ಅನಂತ್‌ನಾಗ್, ಹೇಮಾ ಚೌಧರಿ ಆಪ್ತ ಸಂಬಂಧ ಹೊಂದಿರುವ ನಟ ಶಿವರಾಜ್ ಕುಮಾರ್ ಇನ್ನೂ ಹಲವು ತಾರೆಯರು ಭಾರತಿ ಅವರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ತಮ್ಮ ಸಿನಿ ಜೀವನ ವೈಯಕ್ತಿಕ ಜೀವನ, ಜೀವನದ ಏಳು-ಬೀಳುಗಳ ಬಗ್ಗೆ ಸ್ವತಃ ಭಾರತಿ ಅವರೇ ಮಾತನಾಡಿದ್ದಾರೆ. ನಟ ಅನಿರುದ್ಧ, ಭಾರತಿಯವರ ಸಂದರ್ಶನ ಮಾಡಿದ್ದು, ಹೊರಲೋಕಕ್ಕೆ ಗೊತ್ತಿಲ್ಲದ ಹಲವು ವಿಷಯಗಳನ್ನು ಭಾರತಿ ಸಾಕ್ಷ್ಯಚಿತ್ರದಲ್ಲಿ ಹಂಚಿಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರ ಭಾರತಿ ಅವರ ಸಾಧನೆಗಳ ದಾಖಲೆ ಆಗುವ ಜೊತೆಗೆ ಭಾರತಿಯವರ ಅಂತರಂಗದ ಮಂಥನವೂ ಆಗುವ ನಿರೀಕ್ಷೆಯನ್ನು ಟ್ರೇಲರ್ ಹುಟ್ಟಿಸಿದೆ.

  ಮಾತು-ಕತೆಗಳ ಜೊತೆಗೆ ಭಾರತಿ ಅವರ ಅಪರೂಪದ ಚಿತ್ರಗಳು, ಭಾರತಿ ನಟಿಸಿರುವ ಸಿನಿಮಾಗಳ ವಿಡಿಯೋ ತುಣುಕುಗಳು ಸಹ ಸಾಕ್ಷ್ಯಚಿತ್ರಗಳಲ್ಲಿ ಇರಲಿವೆ. ಸಿನಿಮಾದ ಹೊರತಾಗಿ ಭಾರತಿಯವರ ಬದುಕು, ಅವರ ಹೋರಾಟ, ಇನ್ನು ಮುಂದಿನ ಯೋಜನೆಗಳು ಇನ್ನೂ ಹಲವು ವಿಷಯಗಳನ್ನು ಸಾಕ್ಷ್ಯಚಿತ್ರದಲ್ಲಿ ತೆರೆದುಕೊಳ್ಳಲಿವೆ.

  2 ಗಂಟೆ 31 ನಿಮಿಷದ ಈ ಸಾಕ್ಷ್ಯಚಿತ್ರವನ್ನು ಆಗಸ್ಟ್ 24 ರಂದು ಬಿಡುಗಡೆ ಮಾಡಲಿದ್ದಾರೆ ನಟ ಅನಿರುದ್ಧ. ಆಗಸ್ಟ್ 24ರಂದು ಗರುಡಾ ಮಾಲ್‌ನಲ್ಲಿ ಸಾಕ್ಷ್ಯಚಿತ್ರದ ಮೊದಲ ಪ್ರದರ್ಶನವನ್ನು ಸಿನಿಗಣ್ಯರು, ಮಾಧ್ಯಮ ಮಿತ್ರರಿಗೆ ಅನಿರುದ್ಧ ಆಯೋಜಿಸಿದ್ದಾರೆ. ಅದರ ಬಳಿಕ ಒಟಿಟಿಯಲ್ಲಿ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಟ ಅನಿರುದ್ಧ 'ಫಿಲ್ಮಿಬೀಟ್ ಕನ್ನಡ'ಕ್ಕೆ ಹೇಳಿದ್ದಾರೆ.

  English summary
  Actor Anirudh produced and directed a documentary about actress Bharathi's movie and personal journey. Trailer of the documentary released on August 15.
  Monday, August 16, 2021, 9:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X