For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಯುವಜನಾಂಗಕ್ಕೆ ಸ್ಫೂರ್ತಿಯಾಗಬೇಕು : ದೊಡ್ಡಣ್ಣ

  By Bharath Kumar
  |

  ಚಿತ್ರರಂಗದಲ್ಲಿ ಕಿರುಚಾಡಿದರೆ, ಕಾಲೆಳೆದರೆ ಏನು ಮಾಡುವುದಕ್ಕೆ ಆಗೋದಿಲ್ಲವೆಂದು ಹಿರಿಯ ನಟ ದೊಡ್ಡಣ್ಣ ಅಭಿಪ್ರಾಯಪಟ್ಟಿದ್ದಾರೆ. 'ನವರಸ ನಟನ ಅಕಾಡಮಿ ಪ್ರೈ.ಲಿಮಿಟಿಡ್' ಸಂಸ್ಥೆಯಿಂದ ಮೊದಲ ಬ್ಯಾಚ್ ನಲ್ಲಿ ತರಬೇತಿ ಪಡೆದ 104 ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ದೊಡ್ಡಣ್ಣ ಡಾ ರಾಜ್ ಕುಮಾರ್ ಅವರನ್ನ ಸ್ಮರಿಸಿದರು.

  ಮಾತು ಮುಂದುವರಿಸುತ್ತಾ ಜೀವನದಲ್ಲಿ ನಾವುಗಳು ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕಬೇಕು. ಇಂದು ಮೊಬೈಲ್ ಎನ್ನುವುದು ಸಹಕಾರಿ, ವಿಷಕಾರಿಯಾಗಿದೆ. ಇದನ್ನು ನಿಯಮಿತವಾಗಿ ಬಳಸಬೇಕು. ಅತಿರೇಕವಾದರೆ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ನಮ್ಮ ಭಾಷೆಯಲ್ಲಿ ಸಾಹಿತ್ಯ, ಛಂದಸ್ಸು ಇದೆ. ನೀವುಗಳು ಮುಂದಿನ ಚಿತ್ರರಂಗವನ್ನು ಆಳುವವರು. ಅದರಿಂದ ಭಾಷಾ ಸಂಪತ್ತನ್ನು ಬೆಳಿಸಿಕೊಳ್ಳಬೇಕು. ಈ ರಂಗದಲ್ಲಿ ಸ್ಪರ್ಧೆ ಇರಬೇಕು. ಅದು ದ್ವೇಷದ ಸ್ಪರ್ಧೆ ಇರಬಾರದು. ಆರೋಗ್ಯಕರವಾಗಿರಬೇಕು.

  ಡಾ.ರಾಜ್ ಕುಮಾರ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವುದು ನೋಡುವುದೇ ಚೆಂದ. ಅವರ ಶ್ರದ್ದೆ, ವಿನಯ, ಶಿಸ್ತು ಇವೆಲ್ಲವನ್ನು ನಾವುಗಳು ಕಲಿತಿದ್ದೇವೆ. ಅವರಂತೆ ನೀವುಗಳು ಕೆಲವನ್ನು ಅಳವಡಿಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಿವಿಮಾತನ್ನು ಹೇಳಿದರು ದೊಡ್ಡಣ್ಣ.

  ಇನ್ನು ಪ್ರಮಾಣ ಪತ್ರ ವಿತರಣೆ ಮಾಡಿದ ಹಿರಿಯ ನಿರ್ದೇಶಕ ಮತ್ತು ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಮಾತನಾಡಿ ಈಗಿನ ಯುವಜನತೆಯಲ್ಲಿ ಹೊಸ ಹೊಸ ಸೃಜನಶೀಲತೆ ಯೋಚನೆಗಳು ಇದೆ. ಮೂಲಭೂತವಾಗಿ ವಿದ್ಯಾರ್ಹತೆ ಅವಶ್ಯಕವಾಗಿದ್ದರೂ, ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ನಮ್ಮದೆ ತತ್ವ, ಸಿದ್ದಾಂತವನ್ನು ಅಭಿವೃದ್ದಿಪಡಿಸಿಕೊಳ್ಳಬೇಕು.

  ನಿಮ್ಮಗಳ ಪ್ರಯತ್ನಕ್ಕೆ ಬೆಲೆ ಇದ್ದೇ ಇರುತ್ತದೆ. ಕಷ್ಟಪಡುವವರು ಖಾಲಿ ಕೂರಲ್ಲ. ನಿರ್ದೇಶಕನಾದವನು ಪ್ರತಿಯೊಂದನ್ನು ಸೂಕ್ಷವಾಗಿ ಗಮನಿಸುತ್ತಿರಬೇಕು. ಆವಾಗಲೇ ಕತೆಗಳು ಹುಟ್ಟಿಕೊಳ್ಳುತ್ತವೆ. ತಂತ್ರಜ್ಘಾನ ಸಾಕಷ್ಟು ಬೆಳೆದಿರುವುದರಿಂದ ಕಾಲಿವುಡ್ ನಲ್ಲಿ ಮೊಬೈಲ್‍ನಲ್ಲಿ ಸಣ್ಣ ಚಿತ್ರಗಳನ್ನು ಸಿದ್ದಪಡಿಸಿ ಯು ಟ್ಯೂಬ್ ಬಿಡುತ್ತಾರೆ. ಇದರಿಂದ ಗಮನಸೆಳದ ನಿರ್ಮಾಪಕರು ಕರೆದು ಅವಕಾಶ ಕೊಡುತ್ತಾರೆ. ಅಂತಹ ಪ್ರಯತ್ನಗಳು ಇಲ್ಲಿ ಆಗಬೇಕಾಗಿದೆ ಎಂದರು.

  ಸಂಸ್ಥೆಯ ಮುಖ್ಯಸ್ಥರಾದ ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್ ಶಾಲೆ ಹುಟ್ಟಿಕೊಂಡಿದ್ದನ್ನು ನೆನಪು ಮಾಡಿಕೊಂಡರು. ಸಮಾರಂಭದಲ್ಲಿ ಉಪನ್ಯಾಸಕರುಗಳಾದ ಎಸ್.ನಾರಾಯಣ್, ಎಸ್.ಮಹೇಂದರ್, ವಾಸು ಮುಂತಾದವರು ಉಪಸ್ಥಿತರಿ
  ದ್ದರು.

  English summary
  Kannada senior actor doddanna has spoke about dr rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X