'ದೊಡ್ಮನೆ ಹುಡ್ಗ' ಬುಕ್ಕಿಂಗ್ ಓಪನ್: ಈಗ್ಲೇ ಟಿಕೆಟ್ ಕೊಂಡರೆ ಒಳಿತು.!
''ಹೇಗಿದ್ದರೂ 'ದೊಡ್ಮನೆ ಹುಡ್ಗ' ಸಿನಿಮಾ ಸೆಪ್ಟೆಂಬರ್ 30ಕ್ಕೆ ಬಿಡುಗಡೆ ಆಗ್ತಿದೆ...ಇನ್ನೂ ಐದು ದಿನ ಟೈಮ್ ಇದ್ಯಲ್ಲ...ಅಷ್ಟರಲ್ಲಿ ಟಿಕೆಟ್ ತಗೊಂಡ್ರೆ ಆಯ್ತು'' ಅಂತ ನೀವೇನಾದರೂ ಉದಾಸೀನ ಮಾಡಿದ್ರೆ, ಮೊದಲ ದಿನ ನೀವು 'ದೊಡ್ಮನೆ ಹುಡ್ಗ' ಚಿತ್ರವನ್ನ ಕಣ್ತುಂಬಿಕೊಳ್ಳುವ ಚಾನ್ಸಸ್ ಕಡಿಮೆ.!
ಯಾಕಂದ್ರೆ, 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕ್ರೇಜ್ ಹಾಗಿದೆ ಸ್ವಾಮಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಚಿತ್ರದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಓಪನ್ ಆಗಿದೆ. 'ಬುಕ್ ಮೈ ಶೋ' ವೆಬ್ ತಾಣದಲ್ಲಿ ಮೊದಲ ದಿನದ ಟಿಕೆಟ್ ಗಳು ಬಿಸಿ ದೋಸೆಯಂತೆ ಸೇಲ್ ಆಗ್ತಿವೆ.

ದುನಿಯಾ ಸೂರಿ ಹಾಗೂ ಅಪ್ಪು ಕಾಂಬಿನೇಷನ್ ನ ಮೂರನೇ ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡುವ ಆಸೆ ನಿಮಗೆ ಇದ್ದರೆ, ಈಗಲೇ ನಿಮ್ಮ ಟಿಕೆಟ್ ಕೊಂಡುಕೊಳ್ಳಿ. ಇಲ್ಲಾಂದ್ರೆ, ಸೋಲ್ಡ್ ಔಟ್ ಆದ್ಮೇಲೆ ನೀವೇ ಕೊರಗಬೇಕು. [ಕ್ರೇಜ್ ಅಂದ್ರೆ ಇದಪ್ಪಾ.! 'ಬುಕ್ ಮೈ ಶೋ'ನಲ್ಲಿ 'ದೊಡ್ಮನೆ' ದರ್ಬಾರ್]
ಬಿರಿಯಾನಿ ಮಾರುವ ಯುವಕನ ಪಾತ್ರದಲ್ಲಿ ಪುನೀತ್ ಅಭಿನಯಿಸಿರುವ ಸಿನಿಮಾ 'ದೊಡ್ಮನೆ ಹುಡ್ಗ'. ಇದರಲ್ಲಿ ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ರಾಧಿಕಾ ಪಂಡಿತ್, ಚಿಕ್ಕಣ್ಣ, ರವಿಶಂಕರ್ ಸೇರಿದಂತೆ ದೊಡ್ಡ ತಾರಾಬಳಗ ಇದೆ.


Click it and Unblock the Notifications











